Site icon Vistara News

Team India | ಭಾರತ ತಂಡ, ಬಿಸಿಸಿಐ ಅಣಕಿಸಿದ ಪಾಕ್‌ ತಂಡದ ಮಾಜಿ ಆಟಗಾರ ಹಫೀಜ್‌ಗೆ ಬೆಂಡೆತ್ತಿದ ನೆಟ್ಟಿಗರು

Team India

ನವ ದೆಹಲಿ : ಪಾಕಿಸ್ತಾನ ತಂಡದ ಮಾಜಿ ಬ್ಯಾಟರ್‌ ಮೊಹಮ್ಮದ್‌ ಹಫೀಜ್‌, ಟೀಮ್‌ ಇಂಡಿಯಾದ (Team India) ಬಗ್ಗೆ ಪದೇ ಪದೆ ಕೊಂಕು ಮಾತನಾಡುತ್ತಿರುವುದನ್ನು ಕಂಡು ಕೆಂಡಾಮಂಡಲವಾಗಿರುವ ಕ್ರಿಕೆಟ್‌ ಪ್ರೇಮಿಗಳು, ಕಠು ಪದಗಳಿಂದ ಅವರಿಗೆ ಪ್ರತ್ಯುತ್ತರ ಕೊಟ್ಟಿದಾರೆ. ಕೆಲವು ದಿನಗಳ ಹಿಂದೆ ಟೀಮ್‌ ಇಂಡಿಯಾ ನಾಯಕ ರೋಹಿತ್‌ ಶರ್ಮ ಸೋಂಬೇರಿ ಎಂದು ಹೇಳಿಕೆ ನೀಡಿ ಅವರ ಅಭಿಮಾನಿಗಳಿಂದ ಬೈಸಿಕೊಂಡಿದ್ದ ಹಫೀಜ್‌ ಇದೀಗ, ಶ್ರೀಮಂತರ ಮುದ್ದಿನ ಮಕ್ಕಳನ್ನೇ ಎಲ್ಲರು ಮುದ್ದಾಡುತ್ತಾರೆ ಎಂದು ಬಿಸಿಸಿಐ ಬಗ್ಗೆ ಕಾಮೆಂಟ್‌ ಮಾಡಿದ್ದರು. ಅದಕ್ಕೂ ನೆಟ್ಟಿಗರು ಪಾಕ್‌ ಆಟಗಾರಿಗೆ ಚೆನ್ನಾಗಿ ಪಾಠ ಹೇಳಿದ್ದಾರೆ.

ಬಿಸಿಸಿಐ ಬಳಿ ಸಾಕಷ್ಟು ದುಡ್ಡಿದೆ. ಹೀಗಾಗಿ ಎಲ್ಲರೂ ಆ ಮಂಡಳಿಯನ್ನು ನೆಚ್ಚಿಕೊಳ್ಳುತ್ತಿದ್ದಾರೆ. ಭಾರತ ತಂಡಕ್ಕೆ ಕ್ರಿಕೆಟ್‌ ಬಗ್ಗೆ ಯಾವುದೇ ಪ್ರೀತಿಯಿಲ್ಲ ಎಂದು ಹಫೀಜ್‌ ಹೇಳಿದ್ದರು. ಈ ವೇಳೆ ಮುದ್ದಿನ ಮಗುವಿಗೆ ಮುತ್ತು ಕೊಡುವ ಮಂದಿ ಅಧಿಕ ಎಂಬುದಾಗಿ ನುಡಿದಿದ್ದರು. ಇದು ಟೀಮ್‌ ಇಂಡಿಯಾದ ಪ್ರೇಮಿಗಳನ್ನು ಕೆರಳಿಸಿದೆ. ಅವರ ಟ್ವೀಟ್‌ಗೆ ಪ್ರತಿಯಾಗಿ ಹಂತ ಹಂತವಾಗಿ ಟ್ವೀಟ್‌ ಮಾಡಿ ಪಾಠ ಹೇಳಿದ್ದಾರೆ.

“ಪಾಕಿಸ್ತಾನ ತಂಡದ ಆಟಗಾರರು ಮುದ್ದಿನ ತಂಡವಲ್ಲ ಯಾಕೆಂದರೆ ಅಲ್ಲಿರುವುದು ಭಯೋತ್ಪಾದಕರು. ಹೀಗಾಗಿ ಅದು ಒಳ್ಳೆಯ ತಂಡವಲ್ಲ,” ಮಾಸ್ಟರ್‌ ಸ್ಟ್ರೋಕ್‌ ಅನ್‌ಲಿಮಿಟೆಡ್‌ ಎಂಬ ಟ್ವೀಟ್‌ ಖಾತೆಯಿಂದ ಬರೆಯಲಾಗಿದೆ.

“ಹಫೀಜ್‌ ಒಬ್ಬ ಕೆಟ್ಟ ಆಟಗಾರ. ಚೆನ್ನಾಗಿ ಆಡದಿರುವುದಕ್ಕೆ ಪಾಕಿಸ್ತಾನ ತಂಡದಿಂದ ಕಿತ್ತೊಗೆಯಲಾಯಿತು. ಇದೀಗ ಅವರನ್ನು ಚಾನೆಲ್‌ನವರೂ ಕಿತ್ತು ಬಿಸಾಡುವುದರಲ್ಲಿ ಯಾವುದೇ ಅನುಮಾನ ಇಲ್ಲ,” ಎಂದು ವೀರವದ್ರ ಎಂಬ ಖಾತೆಯಿಂದ ಬರೆಯಲಾಗಿದೆ.

ಭಾರತ ತಂಡದ ಆಟಗಾರರು ಭಾರತ ತಂಡದ ವಿರುದ್ಧ ಆಡಬೇಕಾದರೆ, ಕ್ರಿಕೆಟ್‌ ಅಭ್ಯಾಸ ಮಾಡತ್ತಾರೆ. ಆದರೆ, ಪಾಕಿಸ್ತಾನ ತಂಡ ಪ್ರೊಫೆಸರ್‌ ಹಫೀಜ್‌ ಅವರ ಉಪನ್ಯಾಸ ಕೇಳುತ್ತಾರೆ ಎಂಬುದಾಗಿ ವ್ಯಕ್ತಿಯೊಬ್ಬರು ವ್ಯಂಗ್ಯವಾಡಿದ್ದಾರೆ.

“ನಿಮ್ಮ ಅಂಗಡಿ ಬಂದ್ ಆಗಿದೆ ಎಂದು ಬೇರೆಯವರ ಅಂಗಡಿ ಬಂದ್ ಆಗಿದೆ ಎಂದರ್ಥವಲ್ಲ. ಭಾರತಕ್ಕೆ ಬಂದು ಐಪಿಎಲ್ ನೋಡು,” ಎಂದು ಮಹೇಶ್‌ ಎಂ ಗೌಡರ್‌ ಎಂಬುರುವ ಚಾಟಿ ಬೀಸಿದ್ದಾರೆ.

“ಹೌದು ಹಫೀಜ್‌, ನಿಮ್ಮನ್ನು ಈಗ ಯಾರೂ ಕ್ಯಾರೇ ಮಾಡುತ್ತಿಲ್ಲ. ಹೀಗಾಗಿ ಫೇಮಸ್‌ ಅಗಲು ಇಂಥ ಸ್ಟೇಮ್‌ಮೆಂಟ್‌ ಕೊಡಲೇಬೇಕು,” ಎಂದು ಇನ್ನೊಬ್ಬರು ಬರೆದುಕೊಂಡಿದ್ದಾರೆ.

ಕೆಲವು ದಿನಗಳ ಹಿಂದೆ ರೋಹಿತ್‌ ಶರ್ಮ ಬಗ್ಗೆಯೂ ಇದೇ ರೀತಿ ಹಫೀಜ್‌ ಮಾತನಾಡಿದ್ದರು. ಪಂದ್ಯ ಗೆದ್ದ ಬಳಿಕವೂ ಅವರು ಉತ್ಸಾಹದಲ್ಲಿ ಇರಲಿಲ್ಲ. ಒಟ್ಟಿನಲ್ಲಿ ಅವರು ನಾಯಕತ್ವದ ಒತ್ತಡದಲ್ಲಿ ಸಿಲುಕಿಕೊಂಡಿದ್ದಾರೆ ಎಂದಿದ್ದರು. ಆಗಲೂ ನೆಟ್ಟಿಗರು ಅವರಿಗೆ ಪಾಠ ಹೇಳಿದ್ದರು.

ಇದನ್ನೂ ಓದಿ | Asia Cup | ಟೀಮ್‌ ಇಂಡಿಯಾದ್ದು ಸಿಗಲಿಲ್ಲವೆಂದು ಪಾಕಿಸ್ತಾನದ ಜರ್ಸಿ ಧರಿಸಿದ ಯುಪಿಯ ಯುವಕನಿಗೆ ಶುರುವಾಗಿದೆ ಸಂಕಷ್ಟ!

Exit mobile version