ಕರಾಚಿ : ಮುಂಬರುವ ಏಷ್ಯಾ ಕಪ್‌ಗೆ (Asia Cup 2022) ಅಲಭ್ಯರಾದ ಶಹೀನ್ ಅಫ್ರಿದಿ ಬದಲಿಗೆ ವಿವಾದಿತ ವೇಗದ ಬೌಲರ್ ಮೊಹಮ್ಮದ್ ಹಸ್ನೈನ್ ಅವರನ್ನು ಪಾಕಿಸ್ತಾನ ತಂಡಕ್ಕೆ ಸೇರಿಸಲಾಗಿದೆ. ಹಸ್ನೈನ್ ಅವರು ಚೆಂಡನ್ನು ಥ್ರೊ ಮಾಡುತ್ತಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅವರಿಗೆ ಬೌಲಿಂಗ್ ಮಾಡಲು ನಿಷೇಧ ಹೇರಲಾಗಿತ್ತು. ಬಳಿಕ ಐಸಿಸಿ ಪ್ಯಾನೆಲ್ ಮತ್ತೆ ಅವಕಾಶ ಸಿಕ್ಕಿತ್ತು. ಇದೀಗ ಅವರು ಏಷ್ಯಾ ಕಪ್‌ಗೆ ಆಡಲಿರುವ ಪಾಕಿಸ್ತಾನ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಮೊಹಮ್ಮದ್ ಹಸೈನ್ ಅವರು ೨೦೧೯ರಲ್ಲಿ ಅಂತರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ಎಂಟು ಏಕದಿನ ಪಂದ್ಯಗಳಲ್ಲಿ ೧೨ ವಿಕೆಟ್‌ಗಳನ್ನು ಕಬಳಿಸಿರುವ ಅವರು ೧೮ ಟಿ೨೦ ಪಂದ್ಯಗಳಲ್ಲಿ ೧೭ ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇತ್ತೀಚೆಗೆ ಅವರು ದಿ ಹಂಡ್ರೆಡ್ ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದರು.
ಶಹೀನ್ ಅಫ್ರಿದಿ ವಿಶ್ವದ ಅತ್ಯಂತ ಬಲಿಷ್ಠ ಬೌಲರ್ ಅಗಿದ್ದು, ಇತ್ತೀಚಿನ ಶ್ರೀಲಂಕಾ ಪ್ರವಾಸದ ವೇಳೆ ಗಾಯಗೊಂಡಿದ್ದರು. ಅವರು ಇನ್ನೂ ಸುಧಾರಿಸಿಕೊಳ್ಳದ ಕಾರಣ ಏಷ್ಯಾ ಕಪ್‌ನಿಂದ ಹೊರಗುಳಿದಿದ್ದಾರೆ. ಮುಂದಿನ ವಿಶ್ವ ಕಪ್ ಟೂರ್ನಿಯನ್ನು ಗುರಿಯಾಗಿಟ್ಟುಕೊಂಡು ಅವರಿಗೆ ವಿಶ್ರಾಂತಿ ನೀಡಲಾಗಿದೆ. ಅದೇ ಕಾರಣಕ್ಕೆ ಅವರಿಗೆ ತವರಿನಲ್ಲಿ ಇಂಗ್ಲೆಂಡ್ ವಿರುದ್ಧ ಸೆಪ್ಟೆಂಬರ್ ೨೦ರಿಂದ ಅಕ್ಟೋಬರ್ ೨ರವರೆಗೆ ನಡೆಯಲಿರುವ ಟಿ೨೦ ಪಂದ್ಯಗಳ ಸರಣಿಯಲ್ಲೂ ಪಾಳ್ಗೊಳ್ಳುತ್ತಿಲ್ಲ.