Site icon Vistara News

T20 World Cup | ನಾಯಕನ ಸ್ಥಾನಕ್ಕೆ ವಿದಾಯ ಹೇಳಿದ ಅಫಘಾನಿಸ್ತಾನದ ಮೊಹಮ್ಮದ್ ನಬಿ

ಅಡಿಲೇಡ್‌ : ಟಿ೨೦ ವಿಶ್ವ ಕಪ್‌ನ (T20 World Cup) ಗ್ರೂಪ್ ಹಂತದ ಹಣಾಹಣಿಯಲ್ಲಿ ಒಂದೇ ಒಂದು ಗೆಲುವು ಸಾಧಿಸಲು ವಿಫಲಗೊಂಡ ಅಫಘಾನಿಸ್ತಾನ ತಂಡದ ನಾಯಕ ಮೊಹಮ್ಮದ್‌ ನಬಿ ತನ್ನ ಸ್ಥಾನ ತೊರೆದಿದ್ದಾರೆ. ನಾಯಕನ ಸ್ಥಾನಕ್ಕೆ ವಿದಾಯ ಹೇಳಿರುವ ಮಾಹಿತಿಯನ್ನು ಅವರು ಟ್ವೀಟ್‌ ಮೂಲಕ ತಿಳಿಸಿದ್ದಾರೆ.

ನಮ್ಮ ಟಿ೨೦ ವಿಶ್ವ ಕಪ್‌ ಯಾನ ಕೊನೆಗೊಂಡಿದೆ. ಆದರೆ, ಫಲಿತಾಂಶಗಳು ನಮ್ಮ ಅಭಿಮಾನಿಗಳಿಗೆ ಇಷ್ಟವಾಗುವ ರೀತಿಯಲ್ಲಿ ಇರಲಿಲ್ಲ. ಸೋಲುಗಳಿಂದ ನಾವು ವಿಚಲಿತರಾಗಿದ್ದೇವೆ.

ಕಳೆದ ವರ್ಷದಿಂದ ನಮ್ಮ ವಿಶ್ವ ಕಪ್ ತಯಾರಿ ಅತ್ಯುತ್ತಮವಾಗಿ ಇರಲಿಲ್ಲ. ಟೀಮ್‌ ಮ್ಯಾನೇಜ್ಮೆಂಟ್‌, ಆಯ್ಕೆ ಸಮಿತಿ ಹಾಗೂ ನಾನು ತಂಡದ ಸಮತೋಲನ ಕಾಪಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ನಾನು ತಂಡದ ನಾಯಕ ಸ್ಥಾನದಿಂದ ಕೆಳಗೆ ಇಳಿದಿದ್ದೇನೆ. ಆದರೆ, ತಂಡದ ಸದಸ್ಯನಾಗಿ ಇನ್ನಷ್ಟು ವರ್ಷಗಳ ಕಾಲ ಮುಂದುರಿಯುತ್ತೇನೆ ಎಂದು ಅವರು ಬರೆದುಕೊಂಡಿದ್ದಾರೆ.

Exit mobile version