Site icon Vistara News

Pakistan Cricket Team | ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿರುವ ಮೊಹಮ್ಮದ್ ರಿಜ್ವಾನ್‌

IND vs PAK

ಕರಾಚಿ : ಪಾಕಿಸ್ತಾನ ತಂಡದ ವಿಕೆಟ್‌ಕೀಪರ್ ಬ್ಯಾಟರ್‌ ಮೊಹಮ್ಮದ್ ರಿಜ್ವಾನ್‌ ಈಗ ಟಿ೨೦ ಮಾದರಿಯ ಬ್ಯಾಟರ್‌ಗಳ Rank ಪಟ್ಟಿಯಲ್ಲಿ ನಂಬರ್‌ ಒನ್‌ ಸ್ಥಾನ ಪಡೆದುಕೊಂಡಿದ್ದಾರೆ. ಜತೆಗೆ ದಾಖಲೆಗಳ ಮೇಲೆ ದಾಖಲೆ ಸೃಷ್ಟಿಸುತ್ತಿದ್ದಾರೆ. ಸದ್ಯ ಪಾಕಿಸ್ತಾನ ಪ್ರವಾಸದಲ್ಲಿರುವ ಇಂಗ್ಲೆಂಡ್‌ ತಂಡದ ವಿರುದ್ಧ ನಡೆಯುತ್ತಿರುವ ಏಳು ಪಂದ್ಯಗಳ ಟಿ೨೦ ಸರಣಿಯಲ್ಲಿ ಹೊಸ ದಾಖಲೆಯೊಂದನ್ನು ಮಾಡಿದ್ದಾರೆ. ಸರಣಿಯಲ್ಲಿ ಈಗ ಐದು ಪಂದ್ಯಗಳು ನಡೆದಿದ್ದು, ಅಷ್ಟರಲ್ಲೇ ವಿಶ್ವ ದಾಖಲೆ ಮಾಡಿದ್ದಾರೆ. ಇನ್ನೆರಡು ಪಂದ್ಯಗಳು ಬಾಕಿ ಇರುವ ಕಾರಣ ಅವರ ಸಾಧನೆ ಇನ್ನಷ್ಟು ವಿಸ್ತರಣೆಯಾಗಬಹುದು.

ರಿಜ್ವಾನ್ ಅವರು ಇಂಗ್ಲೆಂಡ್‌ ವಿರುದ್ಧದ ನಾಲ್ಕು ಪಂದ್ಯಗಳಲ್ಲಿ ಅರ್ಧ ಶತಕ ಬಾರಿಸಿದ್ದಾರೆ. ಇದರೊಂದಿಗೆ ಸರಣಿಯಲ್ಲಿ ಅವರ ಒಟ್ಟಾರೆ ಸ್ಕೋರ್‌ ೩೧೫. ಇದು ಟಿ೨೦ ಸರಣಿಯೊಂದರಲ್ಲಿ ಬ್ಯಾಟರ್‌ ಒಬ್ಬರು ಬಾರಿಸಿದ ಗರಿಷ್ಠ ಸ್ಕೋರ್‌ ಬಾರಿಸಿದ ವಿಶ್ವ ದಾಖಲೆ. ಅಲ್ಲದೆ, ದ್ವಿಪಕ್ಷೀಯ ಸರಣಿಯಲ್ಲಿ ೩೦೦ಕ್ಕೂ ಅಧಿಕ ರನ್‌ ಬಾರಿಸಿದ ಹೊಸ ದಾಖಲೆಯೂ ಹೌದು.

ಹೊಸ ದಾಖಲೆ ಸೃಷ್ಟಿಸುವ ವೇಳೆ ಅವರು ಸರ್ಬಿಯಾದ ಕ್ರಿಕೆಟಿಗ ಲೆಸ್ಲಿ ಡನ್‌ಬಾರ್‌ (೪ ಇನಿಂಗ್ಸ್‌ಗಳಲ್ಲಿ ೨೮೪ ರನ್‌) ಅವರನ್ನು ಹಿಂದಿಕ್ಕಿದರು. ದಕ್ಷಿಣ ಆಫ್ರಿಕಾದ ಕ್ವಿಂಟನ್‌ ಡಿ ಕಾಕ್‌ ೫ ಇನಿಂಗ್ಸ್‌ಗಳಲ್ಲಿ ೨೫೫ ರನ್‌ ಬಾರಿಸಿ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ | Pak vs Eng | ಸರಣಿಯ ನಡುವೆ ಎದೆ ನೋವು ಉಂಟಾಗಿ ಅಸ್ವಸ್ಥಗೊಂಡ ಪಾಕಿಸ್ತಾನ ಕ್ರಿಕೆಟ್‌ ತಂಡದ ಬೌಲರ್‌

Exit mobile version