Site icon Vistara News

INDvsAUS : ನಾಲ್ಕನೇ ಪಂದ್ಯಕ್ಕೆ ಮೊಹಮ್ಮದ್​ ಶಮಿ ವಾಪಸ್​, ಸಿರಾಜ್​ಗೆ ರೆಸ್ಟ್​​ ?

Mohammed Shami back for the fourth match, Siraj rest?

#image_title

ಅಹಮದಾಬಾದ್​ : ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಮೂರನೇ ಟೆಸ್ಟ್​ ಪಂದ್ಯಕ್ಕೆ ಹಿರಿಯ ಬೌಲರ್​ ಮೊಹಮ್ಮದ್​ ಶಮಿ ವಾಪಸಾಗಲಿದ್ದಾರೆ. ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಮ್​ನಲ್ಲಿ ಈ ಪಂದ್ಯ ನಡೆಯಲಿದ್ದು ಈ ಪಂದ್ಯ ಡ್ರಾಗೊಂಡರೂ ಭಾರತ ತಂಡಕ್ಕೆ ಗೆಲುವು ನಿಶ್ಚಿತ. ಹೀಗಾಗಿ ಉತ್ತಮ ರಣತಂತ್ರದೊಂದಿಗೆ ಭಾರತ ತಂಡ ಕಣಕ್ಕೆ ಇಳಿಯಲಿದೆ. ಹೀಗಾಗಿ ಆಡುವ 11ರ ಬಳಗದಲ್ಲಿ ಶಮಿ ಮತ್ತೆ ಎಂಟ್ರಿ ಪಡೆಯಲಿದ್ದಾರೆ ಎನ್ನಲಾಗಿದೆ.

ಇಂದೋರ್​ನ ಹೋಳ್ಕರ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಮೂರನೇ ಪಂದ್ಯದ ವೇಳೆ ಮೊಹಮ್ಮದ್​ ಶಮಿಗೆ ವಿಶ್ರಾಂತಿ ನೀಡಲಾಗಿತ್ತು. ಕಾರ್ಯದೊತ್ತಡ ನಿರ್ವಹಣೆಗಾಗಿ ಅವರಿಗೆ ವಿಶ್ರಾಂತಿ ನೀಡಲಾಗಿತ್ತು ಎಂದು ಹೇಳಲಾಗಿದೆ. ಮುಂಬರುವ ವಿಶ್ವ ಕಪ್​ ಹಾಗೂ ಏಷ್ಯಾ ಕಪ್​ ಸರಣಿಗೆ ಜಸ್​ಪ್ರಿತ್​ ಬುಮ್ರಾ ಲಭ್ಯತೆ ಬಗ್ಗೆ ಇನ್ನೂ ಖಾತರಿ ಇಲ್ಲ. ಹೀಗಾಗಿ ಮೊಹಮ್ಮದ್​ ಶಮಿ ಬೌಲಿಂಗ್ ವಿಭಾಗವನ್ನು ನಿರ್ವಹಿಸಬೇಕಾಗಿದೆ. ಹೀಗಾಗಿ ಅವರಿಗೆ ಗಾಯಗಳು ಉಂಟಾಗದಂತೆ ನೋಡಿಕೊಳ್ಳುವುದಕ್ಕೆ ವಿಶ್ರಾಂತಿ ನೀಡಲಾಗಿತ್ತು. ಆದರೆ, ನಾಲ್ಕನೇ ಪಂದ್ಯ ಸರಣಿ ನಿರ್ಣಾಯಕವಾಗಿರುವ ಕಾರಣ ಮತ್ತೆ ತಂಡ ಸೇರಿಕೊಳ್ಳಲಿದ್ದಾರೆ.

ಮೂರನೇ ಪಂದ್ಯದಲ್ಲಿ ಮೊಹಮ್ಮದ್​ ಶಮಿಯ ಬದಲಿಗೆ ಉಮೇಶ್​ ಯಾದವ್​ಗೆ ಅವಕಾಶ ನೀಡಲಾಗಿತ್ತು. ಮೊಹಮ್ಮದ್​ ಸಿರಾಜ್​ ಜತೆ ಶಮಿ ವೇಗದ ಬೌಲಿಂಗ್ ಹೊಣೆಗಾರಿಕೆ ವಹಿಸಿಕೊಂಡಿದ್ದರು. ಇದೀಗ ಶಮಿಯ ಪ್ರವೇಶ ಪಡೆದರೂ ಸಿರಾಜ್​ಗೆ ವಿಶ್ರಾಂತಿ ನೀಡುವ ಸಾಧ್ಯತೆಗಳಿವೆ. ಆಸ್ಟ್ರೇಲಿಯಾ ವಿರುದ್ಧದ ಏಕ ದಿನ ಸರಣಿಯಲ್ಲಿ ಸಿರಾಜ್​ ಅವಕಾಶ ಪಡೆಯುವ ಸಾಧ್ಯತೆಗಳು ಇರುವುದರಿಂದ ಕೊನೇ ಪಂದ್ಯದಲ್ಲಿ ಅವರಿಗೆ ವಿಶ್ರಾಂತಿ ಕಲ್ಪಿಸಲು ಟೀಮ್​ ಇಂಡಿಯಾ ಮ್ಯಾನೇಜ್ಮೆಂಟ್​ ನಿರ್ಧರಿಸಿದೆ.

ಇದನ್ನೂ ಓದಿ : IND VS AUS: ಇಂದೋರ್​ ಪಿಚ್​ಗೆ ಕಳಪೆ ​ ರೇಟಿಂಗ್ಸ್​ ಕೊಟ್ಟ ಐಸಿಸಿ​

ಏತನ್ಮಧ್ಯೆ ಮೂರನೇ ಪಂದ್ಯ ನಡೆದ ಇಂದೋರ್​ನ ಹೋಳ್ಕರ್ ಪಿಚ್​ ಅಂತಾರಾಷ್ಟ್ರೀಯ ಗುಣ ಮಟ್ಟ ಹೊಂದಿರಲಿಲ್ಲ ಎಂದು ಐಸಿಸಿ ಪ್ರಕಟಿಸಿದೆ. ಪಂದ್ಯವು ಎರಡೂವರೆ ದಿನಗಳಲ್ಲಿ ಮುಕ್ತಾಯಗೊಂಡಿತ್ತು ಹಾಗೂ ಭಾರತ ತಂಡ ಸೋಲು ಕಂಡಿತ್ತು.

Exit mobile version