Site icon Vistara News

Mohammed Shami: ‘ಇದು ಲೋಕಲ್​ ಪಂದ್ಯವಲ್ಲ’ ಹಸನ್​ ರಾಝಾಗೆ ಬೌನ್ಸರ್​ ಎಸೆದ ಶಮಿ

mohammed shami raza

ಬೆಂಗಳೂರು: ವಿಶ್ವಕಪ್​ ಟೂರ್ನಿಯಲ್ಲಿ( 2023 World Cup) ಭಾರತ ತಂಡದ ಶ್ರೇಷ್ಠ ಪ್ರದರ್ಶನವನ್ನು ಕಂಡು ಸಹಿಸಲಾಗದ ಪಾಕಿಸ್ತಾನದ ಮಾಜಿ ಆಟಗಾರ ಹಸನ್​ ರಾಝಾ(Hasan Raza) ಟೀಮ್​ ಇಂಡಿಯಾದ(team india cricket) ಆಟಗಾರರ ಮತ್ತು ತಂಡದ ಬಗ್ಗೆ ಸರಣಿ ಆರೋಪವನ್ನು ಮಾಡುತ್ತಲೇ ಇದ್ದಾರೆ. ಇದೇ ವಿಚಾರವಾಗಿ ಮೊಹಮ್ಮಮದ್​ ಶಮಿ(Mohammed Shami) ಅವರು ರಾಝಾಗೆ ಖಡಕ್​ ಎಚ್ಚರಿಕೆ ನೀಡಿದ್ದಾರೆ.

ಕೆಲ ದಿನಗಳ ಹಿಂದೆ ಹಸನ್​ ರಾಝಾ ಅವರು ಭಾರತ ತಂಡಕ್ಕೆ ಐಸಿಸಿ ಮತ್ತು ಬಿಸಿಸಿಐ(ICC And BCCI) ಸೇರಿಕೊಂಡು ವಿಶೇಷ ಚೆಂಡನ್ನು ನೀಡುತ್ತಿದೆ. ಹೀಗಾಗಿ ಶಮಿ ಮತ್ತು ಉಳಿದ ಬೌಲರ್​ಗಳು ವಿಕೆಟ್​ ಈ ರೀತಿ ವಿಕೆಟ್​ ಕೀಳುತ್ತಿದ್ದಾರೆ ಎಂದು ಹೇಳಿದ್ದರು. ಅಲ್ಲದೆ ಮಂಗಳವಾರ ನಡೆದಿದ್ದ ಆಸ್ಟ್ರೇಲಿಯಾ ಮತ್ತು ಅಫಘಾನಿಸ್ತಾನ ನಡುವಣ ಪಂದ್ಯದ ಬಳಿಕ ನಾಲಗ ಹರಿಬಿಟ್ಟಿದ್ದ ರಾಝಾ, ಭಾರತಕ್ಕೆ ನೀಡಿದ್ದ ಚೆಂಡನ್ನು ಅಫಘಾನಿಸ್ತಾನಕ್ಕೆ ನೀಡಿದ್ದಾರೆ ಎಂದು ಆರೋಪ ಮಾಡಿದ್ದರು.

ರಾಝಾ ಅವರ ಅಸಂಬದ್ಧ ಹೇಳಿಕೆಗೆ ಕೆರಳಿದ ಮೊಹಮ್ಮದ್​ ಶಮಿ ಅವರು ಇಸ್ಟಾಗ್ರಾಮ್‌ ಸ್ಟೋರಿಯಲ್ಲಿ ಪೋಸ್ಟ್ ಮಾಡುವ ಮೂಲಕ ತಿರುಗೇಟು ನೀಡಿದ್ದಾರೆ. “ಇಂತಹ ಆರೋಪಗಳನ್ನು ಮಾಡಲು ನಿಜಕ್ಕೂ ನಿಮಗೆ ನಾಚಿಕೆ ಆಗಬೇಕು. ಅಸಂಬದ್ಧ ಹೇಳಿಕೆ ನೀಡುವುದನ್ನು ಬಿಟ್ಟು ಆಟದ ಕಡೆಗೆ ಗಮನಹರಿಸಿ. ಇತರರ ಯಶಸ್ಸನ್ನು ಒಮ್ಮೆ ಆನಂದಿಸಿ. ಇದು ಗಲ್ಲಿ ಕ್ರಿಕೆಟ್​ ಅಲ್ಲ. ವಿಶ್ವಕಪ್ ಟೂರ್ನಿ. ಇಲ್ಲಿ ಆಟಗಾರರಿಂದ ಇಂತಹ ಪ್ರದರ್ಶನಗಳೇ ಮೂಡಿ ಬರುವುದು” ಎಂದು ಶಮಿ ರಾಝಾಗೆ ಸರಿಯಾಗಿ ಕ್ಲಾಸ್​ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ ‘ಭಾರತ ಬಳಸಿದ್ದ ಚೆಂಡನ್ನು ಆಫ್ಘನ್‌ಗೆ ನೀಡಲಾಗಿದೆ’; ಮತ್ತೆ ನಾಲಗೆ ಹರಿಬಿಟ್ಟ ರಾಝಾ

ಆಟಗಾರರ ಮೇಲೆ ನಂಬಿಕೆ ಇಡಿ…

“ಮೊದಲು ನೀವು ನಿಮ್ಮ ದೇಶದ ವಾಸೀಮ್ ಅಕ್ರಮ್ ಅವರ ಮಾತುಗಳು ಹಾಗೂ ನಿಮ್ಮ ತಂಡದ ಆಟಗಾರರ ಮೇಲೆ ನಂಬಿಕೆ ಇಡಿ. ಅಕ್ರಮ್ ಅವರ ಮಾತುಗಳನ್ನು ಸರಿಯಾಗಿ ಇನ್ನೊಮ್ಮೆ ಕೇಳಿ ಅದು ಬಿಟ್ಟು ಆಧಾರವಿಲ್ಲದ ಆರೋಪಗಳನ್ನು ಮಾಡುವುದರಲ್ಲಿ ಕಾಲ ಕಳೆಯಬೇಡಿ” ಎಂದು ಶಮಿ ಹೇಳಿದ್ದಾರೆ.


ನಿಮ್ಮಿಂದ ನಮಗೆ ಮುಜುಗರ

ಭಾರತ ವಿರುದ್ಧ ಆರೋಪ ಮಾಡಿದ್ದ ರಾಝಾ ಅವರ ಹೇಳಿಕೆಗೆ ಪ್ರತಿಕ್ರಿಕೆ ನೀಡಿದ್ದ ಪಾಕಿಸ್ತಾನ ದಿಗ್ಗಜ ಆಟಗಾರ ವಾಸಿಂ ಅಕ್ರಮ್​ ಅವರು, “ಅಸಂಬದ್ದ ಹೇಳಿಕೆ ನೀಡುವುದರಿಂದ ನಿಮ್ಮಗೆ ಮಾತ್ರವಲ್ಲದೆ ನಮಗೂ ಮುಜುಗರವನ್ನುಂಟು ಮಾಡುತ್ತಿದ್ದೀರಿ” ಎಂದು ಬಹಿರಂಗವಾಗಿಯೇ ಟಿವಿ ಸಂದರ್ಶನದಲ್ಲಿ ರಾಝಾ ಹೇಳಿಕೆಯನ್ನು ಕಡ್ಡಿ ಮುರಿದಂತೆ ಖಂಡಿಸಿದ್ದರು.

“ಪಂದ್ಯವೊಂದು ಆರಂಭಗೊಳ್ಳುವಾಗ ಮೊದಲು ಅಂಪೈರ್​ಗಳು ಚೆಂಡುಗಳ ಬಾಕ್ಸ್‌ನೊಂದಿಗೆ ಮೊದಲು ಬೌಲಿಂಗ್ ಮಾಡುವ ತಂಡದ ಬಳಿಗೆ ಹೋಗಿ 2 ಚೆಂಡುಗಳನ್ನು ಆರಿಸಿಕೊಳ್ಳುವ ಅವಕಾಶ ನೀಡುತ್ತಾರೆ. ಈ ವೇಳೆ ಪಂದ್ಯದ ಎಲ್ಲ ಅಂಪೈರ್​ಗಳು ಐಸಿಸಿ ಮತ್ತು ತಂಡದ ಕೆಲ ಅಧಿಕಾರಿಗಳು ಉಪಸ್ಥಿತರಿರುತ್ತಾರೆ. ಬೌಲರ್​ಗಳು ತಮ್ಮ ಆದ್ಯತೆಗೆ ಅನುಗುಣವಾಗಿ ಎರಡು ಚೆಂಡುಗಳನ್ನು ಆಯ್ಕೆ ಮಾಡಿದ ಬಳಿಕ ಉಳಿದ ಚೆಂಡುಗಳನ್ನು ಅಂಪೈರ್​ಗಳು ಡ್ರೆಸ್ಸಿಂಗ್ ಕೋಣೆಗೆ ಕೊಂಡೊಯ್ಯುತ್ತಾರೆ.

ಇದನ್ನೂ ಓದಿ IND vs PAK: ಭಾರತಕ್ಕೆ ಸೆಮಿಯಲ್ಲಿ ಪಾಕ್​ ಎದುರಾದರೆ ತಾಣ ಬದಲಾವಣೆ!; ಕಾರಣ ಏನು?

ಸತ್ಯಾಂಶವಿಲ್ಲ

ಮೊದಲು ಬ್ಯಾಟಿಂಗ್ ಮಾಡಿದ ತಂಡ ಬೌಲಿಂಗ್​ಗೆ ಇಳಿದಾಗ ಅವರಿಗೂ ಇದೇ ಕ್ರಮವನ್ನು ಅನುಸರಿಸಲಾಗುತ್ತದೆ. ಇಲ್ಲಿಯೂ ಸಹ ಬೌಲಿಂಗ್ ಮಾಡುವ ತಂಡದ ಬೌಲರ್​ಗಳು ತಮ್ಮ ಆದ್ಯತೆಗೆ ಅನುಗುಣವಾಗಿ ಎರಡು ಚೆಂಡುಗಳನ್ನು ಆಯ್ಕೆ ಮಾಡುತ್ತಾರೆ. ನಂತರ ಬಾಕ್ಸ್​ನಲ್ಲಿ ಉಳಿದ ಚೆಂಡುಗಳನ್ನು ನಾಲ್ಕನೇ ಅಂಪೈರ್‌ಗೆ ಹಸ್ತಾಂತರಿಸುತ್ತಾರೆ. ಹೀಗಾಗಿ ಭಾರತ ತಂಡದ ಬೌಲರ್​ಗಳಿಗೆ ಮಾತ್ರ ಬೇರೆಯದ್ದೆ ಚೆಂಡುಗಳನ್ನು ನೀಡುವುದು ಅಸಾಧ್ಯ. ಇದೊಂದು ಅಸಂಬದ್ದ ಹೇಳಿಕೆ. ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ” ಎಂದು ಅಕ್ರಮ್ ಹೇಳಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version