Site icon Vistara News

Mohammed Shami : ಬೌಲಿಂಗ್​ನಲ್ಲಿ ಹೊಸ ಮಿಂಚು ಸೃಷ್ಟಿಸಿದ ಮೊಹಮ್ಮದ್ ಶಮಿ; ಏನಿದು ಸಾಧನೆ

Mohammed Shami

ಮೊಹಾಲಿ: ಮೊಹಾಲಿಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತದ ಅನುಭವಿ ವೇಗದ ಬೌಲರ್ ಏಕದಿನ ಕ್ರಿಕೆಟ್​ನಲ್ಲಿ ತಮ್ಮ ಅತ್ಯುತ್ತಮ ಬೌಲಿಂಗ್ ಅಂಕಿ ಅಂಶಗಳನ್ನು ದಾಖಲಿಸಿದ್ದಾರೆ. ಅವರು 51 ರನ್​ಗಳಿಗೆ 5 ವಿಕೆಟ್​ ಉರುಳಿಸಿದ್ದಾರೆ. ಈ ಮೂಲಕ ಪ್ರವಾಸಿ ತಂಡವನ್ನು 50 ಓವರ್​ಗಳಿಗೆ 276 ರನ್​ಗಳಿಗೆ ಸೀಮಿತಗೊಳಿಸಲು ಸಹಾಯ ಮಾಡಿದರು. ಡೇವಿಡ್ ವಾರ್ನರ್ ಅವರೊಂದಿಗೆ ಆರಂಭಿಕರಾಗಿ ಕಣಕ್ಕಿಳಿದ ಮಿಚೆಲ್ ಮಾರ್ಷ್ ವಿಕೆಟ್ ಪಡೆಯುವ ಮೂಲಕ ಶಮಿ ಆರಂಭಿಕ ಆಘಾತ ನೀಡಿದ್ದರು.

ಅದ್ಭುತ ಎಸೆತದಿಂದ ಮಾರ್ಷ್ ಔಟ್ ಆದರು. ಅವರು ವಿಕೆಟ್​ನಿಂದ ಹೊರಕ್ಕೆ ಹೋಗುತ್ತಿದ್ದ ಚೆಂಡನ್ನು ಮುಟ್ಟಲು ಯತ್ನಿಸಿ ಶುಬ್ಮನ್ ಗಿಲ್ ಕ್ಯಾಚ್​ ಹಿಡಿಯುವ ಮೂಲಕ ನಿರ್ಗಮಿಸಿದರು.

ಶಮಿ ಸ್ಟಾರ್ ಬ್ಯಾಟರ್​ ಸ್ಟೀವ್ ಸ್ಮಿತ್ ಅವರಿಗೂ ಆಘಾತ ನೀಡಿದರು. ಸ್ಮಿತ್ 41 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದರು ಬಲಗೈ ವೇಗಿ ಶಮಿ ಅವರನ್ನು ಬೌಲ್ಡ್​ ಮಾಡಿದರು. 33 ವರ್ಷದ ವೇಗಿ ಆ ಬಳಿಕ ಮಾರ್ಕಸ್ ಸ್ಟೋಯ್ನಿಸ್​, ಮ್ಯಾಥ್ಯೂ ಶಾರ್ಟ್ ಮತ್ತು ಸೀನ್ ಅಬಾಟ್ ಅವರನ್ನು ಔಟ್ ಮಾಡಿ ಅಂತಿಮ ಮೂರು ವಿಕೆಟ್​ಗಳನ್ನು ಪಡೆದರು. ಈ ಮೂಲಕ ಐದು ವಿಕೆಟ್​ ಸಾಧನೆ ಮಾಡಿದರು.

ಉತ್ತಮ ಸಾಧನೆ

2019ರ ವಿಶ್ವಕಪ್​​ನಲ್ಲಿ ಬರ್ಮಿಂಗ್ಹಮ್​ನ ಎಜ್​ಬಾಸ್ಟನ್​​ನಲ್ಲಿ ಇಂಗ್ಲೆಂಡ್ ವಿರುದ್ಧ 69 ರನ್​​ಗೆ 5 ವಿಕೆಟ್ ಪಡೆದಿದ್ದು ಅವರ ಹಿಂದಿನ ಅತ್ಯುತ್ತಮ ಸಾಧನೆಯಾಗಿತ್ತು. ಇದು ಏಕದಿನ ಕ್ರಿಕೆಟ್​​ನಲ್ಲಿ ಶಮಿ ಅವರ ಎರಡನೇ ಐದು ವಿಕೆಟ್ ಸಾಧನೆಯಾಗಿದೆ. ಅಮ್ರೋಹಾ ಮೂಲದ (ಉತ್ತರ ಪ್ರದೇಶ) ಬೌಲರ್​ 50 ಓವರ್​ಗಳ ಸ್ವರೂಪದಲ್ಲಿ ಒಂಬತ್ತು ನಾಲ್ಕು ವಿಕೆಟ್​ಗಳನ್ನು ಪಡೆದಿದ್ದಾರೆ.

ಈ ಪಂದ್ಯದಲ್ಲಿ ಶಮಿ ಗಳಿಸಿದ ಏಕೈಕ ದಾಖಲೆ ಮಾತ್ರವಲ್ಲ, ಏಕದಿನ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತದ ಪರ ಪಂದ್ಯವೊಂದರಲ್ಲಿ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಶಮಿ ಭಾರತದ ಮಾಜಿ ವೇಗಿ ಮತ್ತು ಅಖಿಲ ಭಾರತ ಹಿರಿಯ ಪುರುಷರ ಆಯ್ಕೆ ಸಮಿತಿಯ ಪ್ರಸ್ತುತ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್​ ಅವರನ್ನು ಹಿಂದಿಕ್ಕಿದ್ದಾರೆ.

ಶಮಿ ಈಗ ಏಕದಿನ ಪಂದ್ಯಗಳಲ್ಲಿ ಕಾಂಗರೂ ಬಳಗದ ವಿರುದ್ಧ 37 ವಿಕೆಟ್​ಗಳನ್ನು ಹೊಂದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯಗಳಲ್ಲಿ ಮೆನ್ ಇನ್ ಬ್ಲೂ ಪರ ಅತಿ ಹೆಚ್ಚು ವಿಕೆಟ್ (45) ಪಡೆದ ಕಪಿಲ್ ದೇವ್ ನಂತರ ಎರಡನೇ ಸ್ಥಾನದಲ್ಲಿದ್ದಾರೆ. ಮೊಹಾಲಿಯಲ್ಲಿ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಭಾರತ 277 ರನ್​ಗಳ ಗುರಿ ಬೆನ್ನತ್ತಿದಿದೆ. ಸರಣಿಯ ಎರಡನೇ ಪಂದ್ಯ ಇಂದೋರ್​ನಲ್ಲಿ ಮತ್ತು ಮೂರನೇ ಮತ್ತು ಅಂತಿಮ ಏಕದಿನ ಪಂದ್ಯ ರಾಜ್​​ಕೋಟ್​​ನಲ್ಲಿ ನಡೆಯಲಿದೆ.

Exit mobile version