Site icon Vistara News

Mohammed Shami: ಪಾಕ್​ ಮಾಜಿ ನಾಯಕ ಇಂಜಮಾಮ್ ಬೆಂಡೆತ್ತಿದ ಮೊಹಮ್ಮದ್​ ಶಮಿ

Mohammed Shami: Mohammed Shami slams Inzamam-ul-Haq for 'cartoongiri' after dig at Arshdeep Singh

ಬೆಂಗಳೂರು: ಅಮೆರಿಕ ಮತ್ತು ವೆಸ್ಟ್​ ಇಂಡೀಸ್​ ಆತಿಥ್ಯದಲ್ಲಿ ನಡೆದಿದ್ದ ಟಿ20 ವಿಶ್ವಕಪ್​ ಟೂರ್ನಿಯ ವೇಳೆ ಭಾರತ ತಂಡದ ವೇಗಿ ಅರ್ಶ್‌ದೀಪ್ ಸಿಂಗ್(Arshdeep Singh) ಅವರ ರಿವರ್ಸ್ ಸ್ವಿಂಗ್ ಎಸೆತವನ್ನು ಪ್ರಶ್ನೆ ಮಾಡಿ ಬಾಲ್ ಟ್ಯಾಂಪರಿಂಗ್ ಆರೋಪ ಮಾಡಿದ್ದ ಪಾಕಿಸ್ತಾನ ತಂಡದ ಮಾಜಿ ಆಟಗಾರ ಹಾಗೂ ನಾಯಕ ಇಂಜಮಾಮ್ ಉಲ್ ಹಕ್(Inzamam Ul Haq)ಗೆ ಟೀಮ್​ ಇಂಡಿಯಾ ವೇಗಿ ಮೊಹಮ್ಮದ್​ ಶಮಿ(Mohammed Shami) ಸರಿಯಾಗಿಯೇ ತಿರುಗೇಟು ಕೊಟ್ಟಿದ್ದಾರೆ.

ಪಾಕಿಸ್ತಾನ ಕ್ರಿಕೆಟ್ ವಿಶ್ಲೇಷಣಾ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಇಂಜಮಾಮ್, ಅರ್ಶ್​ದೀಪ್ ರಿವರ್ಸ್ ಸ್ವಿಂಗ್ ಬಗ್ಗೆ ಅನುಮಾನವಿದೆ. 15ನೇ ಓವರ್​ನಲ್ಲಿ ಅವರು ಬೌಲಿಂಗ್​ ನಡೆಸುವ ವೇಳೆ ಚೆಂಡು ಹೆಚ್ಚು ಸ್ವಿಂಗ್​ ಆಗುತ್ತಿತ್ತು. ನಾನು ಗಮನಿಸಿದ ಹಾಗೆ ಈ ರೀತಿ ಚೆಂಡು ಏಕಾಏಕಿ ಸ್ವಿಂಗ್​ ಆಗಲು ಸಾಧ್ಯವಿಲ್ಲ. ನನ್ನ ಪ್ರಕಾರ ಭಾರತೀಯ ಆಟಗಾರರು 12 ಅಥವಾ 13ನೇ ಓವರ್​ನಲ್ಲಿ ಚೆಂಡಿಗೆ ಶೈನಿಂಗ್​ ಹಚ್ಚಿದಂತೆ ಕಾಣುತ್ತಿದೆ. ಅಂಪೈರ್​ಗಳು ಇದನ್ನು ಸೂಕ್ಷವಾಗಿ ಪರಿಗಣಿಸಬೇಕು. ಇಲ್ಲಿ ಯಾವುದೋ ಮೋಸದಾಟ ನಡೆದಂತಿದೆ” ಎಂದು ಆರೋಪಿಸಿದ್ದರು.

“ಇಂಜಮಾಮ್ ಬಗ್ಗೆ ನನಗೆ ಗೌರವವಿದೆ. ಆದರೆ ಅವರು ಜನರನ್ನು ಮೂರ್ಖರನ್ನಾಗಿಸಲು ನೀಡುವ ಹೇಳಿಕೆ ಬಗ್ಗೆ ನನ್ನ ವಿರೋದವಿದೆ. ಕಳೆದ ಏಕದಿನ ವಿಶ್ವಕಪ್​ನಲ್ಲಿಯೂ ಅವರು ಇದೇ ರೀತಿಯ ಹೇಳಿಕೆ ನೀಡಿದಕ್ಕೆ ನಾನು ತಕ್ಕ ಉತ್ತರ ನೀಡಿದ್ದೇನೆ. ನಾನು ಒಂದೇ ಒಂದು ವಿಷಯವನ್ನು ಹೇಳಲು ಬಯಸುತ್ತೇನೆ. ಪಾಕಿಸ್ತಾನ ಬೌಲರ್​ಗಳು ಸ್ವಿಂಗ್​ ಮಾಡಿದರೆ ಅದು ಬಾಲ್ ಟ್ಯಾಂಪರಿಂಗ್ ಅಲ್ಲವೇ?, ಭಾರತ ಮತ್ತು ಪಾಕಿಸ್ತಾನ ಸಾಂಪ್ರದಾಯಿಕ ಎದುರಾಳಿಗಳಾಗಿವೆ. ಹಾಗಂತ ಸುಮ್ಮಸುಮ್ಮನೆ ಆರೋಪ ಮಾಡುವುದು ಸರಿಯಲ್ಲ” ಎಂದು ಮೊಹಮ್ಮದ್ ಶಮಿ ತಿರುಗೇಟು ನೀಡಿದರು.

ಇದನ್ನೂ ಓದಿ Shami-Sania Mirza: ಸಾನಿಯಾ ಮಿರ್ಜಾ ಜತೆ ಮದುವೆ?; ಮೊದಲ ಬಾರಿಗೆ ಸ್ಪಷ್ಟನೆ ಕೊಟ್ಟ ಶಮಿ

“ನೀವೊಬ್ಬ ಮಾಜಿ ಆಟಗಾರರಾಗಿಯೂ ಪದೇಪದೆ ಈ ರೀತಿಯ ಸುಳ್ಳು ಆರೋಪ ಮಾಡುವುದು ನಿಮ್ಮ ಘನತೆಗೆ ಶೋಭೆ ತರುವುದಿಲ್ಲ” ಎಂದು ಶಮಿ ಕುಟುಕಿದ್ದಾರೆ. ರೋಹಿತ್ ಶರ್ಮಾ (Rohit Sharma) ಕೂಡ ಇಂಜಮಾಮ್ ಹೇಳಿಕೆಗೆ ಅಂದು ತಿರುಗೇಟು ನೀಡಿದ್ದರು. ‘ನಾನು ಇದಕ್ಕೆ ಏನು ಉತ್ತರ ಕೊಡಲಿ? ಬಿಸಿಲಿನಲ್ಲಿ ಆಡುತ್ತಿದ್ದರೆ ಮತ್ತು ಪಿಚ್​ ಒಣಗಿದ್ದರೆ ಚೆಂಡು ರಿವರ್ಸ್​ ಸ್ವಿಂಗ್ ಆಗುತ್ತಿದೆ. ಚೆಂಡು ಎಲ್ಲಾ ತಂಡಗಳಿಗೂ ಅದೇ ರೀತಿ ವರ್ತಿಸುತ್ತದೆ. ನಮಗೆ ಮಾತ್ರ ಅನುಕೂಲವಾಗಿಲ್ಲ. ಕೆಲವೊಮ್ಮೆ, ನಿಮ್ಮ ತಲೆಯನ್ನು ತೆರೆದು ಮೆದುಳನ್ನು ಬಳಸಿ ಮಾತನಾಡಬೇಕಾಗುತ್ತದೆ” ಎಂದು ಹೇಳಿದ್ದರು. 

ಪಾದದ ಶಸ್ತ್ರಚಿಕಿತ್ಸೆಗೆ(mohammed shami injury update) ಒಳಗಾಗಿ ಚೇತರಿಕೆ ಕಾಣುತ್ತಿರುವ ಶಮಿ  ಕ್ರಿಕೆಟ್​ಗೆ ಮರಳುವು ಸಿದ್ಧತೆಯಲ್ಲಿದ್ದಾರೆ. ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್​ಸಿಎ)ಯಲ್ಲಿ ಬೌಲಿಂಗ್​ ಅಭ್ಯಾಸ ಆರಂಭಿಸಿದ್ದಾರೆ. ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಶಮಿ ಅವರು ತಮ್ಮ ಮೊನಚಾದ ಬೌಲಿಂಗ್​ ದಾಳಿಯ ಮೂಲಕ ಟೂರ್ನಿಯಲ್ಲಿಯೇ ಅತ್ಯಧಿಕ ವಿಕೆಟ್​ ಪಡೆದ ಬೌಲರ್​ ಎನಿಸಿಕೊಂಡಿದ್ದರು. ಆಡಿದ 7 ಪಂದ್ಯಗಳಲ್ಲಿ 24 ವಿಕೆಟ್‌ ಉರುಳಿಸಿದ್ದರು.

Exit mobile version