Site icon Vistara News

Mohammed Shami : ರಣಜಿ ತಂಡದ ಆಯ್ಕೆಯ ಕಷ್ಟಗಳನ್ನು ಸ್ಮರಿಸಿಕೊಂಡ ಮೊಹಮ್ಮದ್ ಶಮಿ

Mohammed Shami

ಬೆಂಗಳೂರು: ಇತ್ತೀಚೆಗೆ ಮುಕ್ತಾಯಗೊಂಡ ವಿಶ್ವಕಪ್ 2023 ರಲ್ಲಿ ಮೊಹಮ್ಮದ್ ಶಮಿ (Mohammed Shami) 24 ವಿಕೆಟ್​​ಗಳನ್ನು ಪಡೆಯುವ ಮೂಲಕ ತಮ್ಮ ಪರಾಕ್ರಮವನ್ನು ಪ್ರದರ್ಶಿಸಿದ್ದರು. ಭಾರತೀಯ ತಂಡದ ಪ್ರಬಲ ಆಟಗಾರರಾಗಿದ್ದ ಅವರ ಕ್ರಿಕೆಟ್​ ಪ್ರಯಾಣವು ಆರಂಭದಲ್ಲಿ ಉತ್ತಮವಾಗಿರಲಿಲಲ. ತಮ್ಮ ಗತಕಾಲದ ಕಷ್ಟವನ್ನು ನೆನಪಿಸಿಕೊಂಡ ಶಮಿ, ಉತ್ತರ ಪ್ರದೇಶ ರಣಜಿ ಸ್ಥಾನಕ್ಕಾಗಿ ನಡೆಸಿದ ಕಠಿಣ ಹೋರಾಟವನ್ನು ಬಹಿರಂಗಪಡಿಸಿದ್ದಾರೆ.

ಶಮಿ ವಿಶ್ವ ಕಪ್​ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಬಳಿಕ ಅವರ ಗುಣಗಾನ ಆರಂಭವಾಗಿದೆ. ಆದರೆ, ಶಮಿಯು ತಾವು ಹಿಂದೆ ಎದುರಿಸಿದ ಕಷ್ಟಗಳನ್ನು ನೆನೆದು ದುಃಖಕ್ಕೆ ಒಳಗಾಗಿದ್ದಾರೆ. ದೇಶಿಯ ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಪಡಬಾರದ ಕಷ್ಟವನ್ನು ಹಾಗೂ ಅವಮಾನ ಎದುರಿಸಿರುವುದಾಗಿ ಅವರು ಹೇಳಿಕೊಂಡಿದ್ದಾರೆ.

ಉತ್ತರ ಪ್ರದೇಶದಲ್ಲಿ ತಂಡಕ್ಕೆ ಆಯ್ಕೆಯಾಗಲು ತೊಂದರೆಗಳು ಎದುರಿಸಿರುವ ಜತೆಗೆ 2017 ರಲ್ಲಿ ತಮ್ಮ ತಂದೆಯನ್ನು ಕಳೆದುಕೊಂಡಿರುವ ತನಕ ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಅವರು ಭಾರತ ತಂಡದ ಮುಂಚೂಣಿ ಬೌಲರ್ ಆಗಿರುವ ಹೊರತಾಗಿಯೂ ಹಲವಾರು ಅಡೆತಡೆಗಳ ಪ್ರಯಾಣವನ್ನು ಎದುರಿಸಿದ್ದಾರೆ.

ಪಶ್ಚಿಮ ಬಂಗಾಳಕ್ಕೆ ವಲಸೆ

ಉತ್ತರ ಪ್ರದೇಶದ ಸಹಸ್ಪುರದಲ್ಲಿ ಜನಿಸಿದ ಶಮಿ ರಣಜಿ ಟ್ರಯಲ್ಸ್ ಸಮಯದಲ್ಲಿ ಸವಾಲು ಎದುರಿಸಿದ್ದರು. ನಂತರ ಪಶ್ಚಿಮ ಬಂಗಾಳಕ್ಕೆ ಸ್ಥಳಾಂತರಗೊಂಡಿದ್ದರು. ವೃತ್ತಿಪರ ಮತ್ತು ವೈಯಕ್ತಿಕ ಎರಡೂ ಸಂಕಟಗಳು ಅವರನ್ನು ಗಟ್ಟಿಗೊಳಿಸಿತು. ಅಂತಿಮವಾಗಿ ಅವರು ಭಾರತೀಯ ಕ್ರಿಕೆಟ್​ ತಂಡದಲ್ಲಿ ಪ್ರಮುಖ ಬೌಲಿಂಗ್ ಶಕ್ತಿಯಾಗಿ ರೂಪುಗೊಂಡಿದ್ದಾರೆ.

ನಾನು 2 ವರ್ಷಗಳ ಕಾಲ ಯುಪಿ ರಣಜಿ ಟ್ರೋಫಿ ತಂಡಕ್ಕೆ ಟ್ರಯಲ್ಸ್ ನೀಡಲು ಹೋಗಿದ್ದೆ. ಆದರೆ ಅಂತಿಮ ಸುತ್ತು ಬಂದಾಗಲೆಲ್ಲಾ ಅವರು ನನ್ನನ್ನು ಹೊರಹಾಕುತ್ತಿದ್ದರು. ಮೊದಲ ವರ್ಷದಲ್ಲಿ ನನ್ನನ್ನು ಆಯ್ಕೆ ಮಾಡದಿದ್ದಾಗ ಬೇಸವಾಗಿರಲಿಲ್ಲ. ಮುಂದಿನ ವರ್ಷ ಪ್ರಯತ್ನ ಮಾಡುವೆ ಎಂದುಕೊಂಡಿದ್ದೆ. ಮುಂದಿನ ವರ್ಷವೂ ಅದೇ ನಡೆದಾಗ ಬೇಸವಾಯಿತ, “ಎಂದು 33 ವರ್ಷದ ಬೌಲರ್​ ಪೂಮಾಗೆ ನೀಡಿದ ಸಂದರ್ಶನದಲ್ಲಿ ಸ್ಮರಿಸಿಕೊಂಡರು.

ನನ್ನ ಸಹೋದರ ಇದೆಲ್ಲವನ್ನೂ ನೋಡುತ್ತಿದ್ದ. ಇಂಥ ವಿಷಯದಲ್ಲಿ ಆತ ತುಂಬಾ ಚತುರನಾಗಿದ್ದ . ಮುಂದಿನ ವರ್ಷ ನಾನು ಮತ್ತೆ ಹೋದಾಗ, ಅದೇ ವಿಷಯ ಸಂಭವಿಸಿತು, 1600 ಹುಡುಗರು ಅಲ್ಲಿದ್ದರು ಮತ್ತು ಟ್ರಯಲ್ಸ್​ 3 ದಿನಗಳವರೆಗೆ ನಡೆಯಿತು. ನನ್ನ ಸಹೋದರ ಆಯ್ಕೆ ಮುಖ್ಯಸ್ಥರೊಂದಿಗೆ ಮಾತನಾಡಲು ಮುಂದಾದ. ಆ ವೇಳೆ ಸಹೋದರನು ತನ್ನ ಜೀವನದಲ್ಲಿ ಎಂದಿಗೂ ಊಹಿಸದ ಅಂತಹ ಉತ್ತರವನ್ನು ಅವನಿಂದ ಪಡೆದನು. ನಾನು ಇರುವ ತನಕ ನಿನ್ನ ಸಹೋದರ ಅಯ್ಕೆಯಾಗಲಾರ ಎಂಬ ಉತ್ತರವನ್ನು ಪಡೆದುಕೊಂಡ ಎಂದು ಶಮಿ ನೆನಪಿಸಿಕೊಂಡರು.

ತ್ರಿಪುರಾದಲ್ಲೂ ಫೇಲ್​

ನಂತರ ಶಮಿ ತ್ರಿಪುರಾ ಪರ ಟ್ರಯಲ್ ಆಡಿದರೂ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾದರು. ನಂತರ, ಅವರನ್ನು ಕ್ರಿಕೆಟ್ ಕ್ಲಬ್​ವೊಂದರ ಆಯ್ಕೆಗಾಗಿ ಕೋಲ್ಕತ್ತಾಗೆ ಕಳುಹಿಸಲಾಗಿತ್ತು. ಅಲ್ಲಿ ಅವರನ್ನು ನೇರವಾಗಿ ಆಯ್ಕೆ ಮಾಡಲಾಗಿತ್ತು. ಕ್ಲಬ್ ಶಮಿಯ ಆಹಾರ ಮತ್ತು ವಸತಿಯನ್ನು ನೋಡಿಕೊಂಡಿತ್ತು.

ಇದನ್ನೂ ಓದಿ : Rinku Singh : ರಿಂಕು ಬೆಸ್ಟ್​ ಫಿನಿಶರ್​​ ಆಗುವುದಕ್ಕೆ ಮಾಜಿ ಫಿನಿಶರ್​ ಕಾರಣವಂತೆ

“ಈ ಕ್ಲಬ್ ಪರ ಆಡುವಾಗ ನಾನು 9 ಪಂದ್ಯಗಳಲ್ಲಿ 45 ವಿಕೆಟ್​ಗಳನ್ನು ಪಡೆದಿದ್ದೇನೆ. ಇದರ ನಂತರ ಮ್ಯಾನೇಜರ್ ನನಗೆ 25 ಸಾವಿರ ರೂಪಾಯಿ ಮತ್ತು ರೈಲು ಟಿಕೆಟ್ ನೀಡಿದರು. ಈ ಬಗ್ಗೆ ನನಗೆ ಖಚಿತತೆ ಇರಲಿಲ್ಲ. ನಾನು ಮನೆಗೆ ಹೋಗಿ ನನ್ನ ತಾಯಿಗೆ 25 ಸಾವಿರ ರೂಪಾಯಿಗಳನ್ನು ನೀಡಿದೆ, ಆದರೆ ತಂದೆ ಈ ಹಣವನ್ನು ನನಗೆ ಹಿಂದಿರುಗಿಸಿದರು. ಅಪ್ಪ ಹೇಳಿದರು, ‘ಇದು ನಿಮ್ಮ ಸಂಪಾದನೆ, ನೀವು ಅದನ್ನು ಬಳಸಬೇಕು. ಆ ಹಣದಿಂದ ನಾನು ಶೂಗಳು ಮತ್ತು ಆಟದ ಪರಿಕರಗಳನ್ನು ಖರೀದಿಸಿದೆ, “ಎಂದು ಶಮಿ ಹೇಳಿಕೊಂಡಿದ್ದಾರೆ.

Exit mobile version