Site icon Vistara News

Mohammed Shami: 16 ವರ್ಷಗಳ ಬಳಿಕ ವಿಶೇಷ ದಾಖಲೆ ಬರೆದ ಮೊಹಮ್ಮದ್​ ಶಮಿ

Mohammed Shami finished with 5 for 51

ಮೊಹಾಲಿ: ಆಸ್ಟ್ರೇಲಿಯಾ(India vs Australia, 1st ODI) ವಿರುದ್ಧ ಶುಕ್ರವಾರ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಘಾತಕ ಬೌಲಿಂಗ್​ ಮೂಲಕ ಗಮನಸೆಳೆದ ಮೊಹಮ್ಮದ್​ ಶಮಿ(Mohammed Shami) 16 ವರ್ಷಗಳ ಬಳಿಕ ದಾಖಲೆಯೊಂದನ್ನು ಬರೆದಿದ್ದಾರೆ. ಇದಕ್ಕೂ ಮುನ್ನ 2007ರಲ್ಲಿ ಜಹೀರ್ ಖಾನ್(Zaheer Khan) ಗೋವಾದಲ್ಲಿ ನಡೆದಿದ್ದ ಪಂದ್ಯದಲ್ಲಿ ಲಂಕಾ ವಿರುದ್ಧ 5 ವಿಕೆಟ್ ಸಾಧನೆ ಮಾಡಿದ್ದರು. ಇದೀಗ 16 ವರ್ಷಗಳ ಬಳಿಕ ಶಮಿ ತವರು ಅಂಗಣದಲ್ಲಿ 5 ವಿಕೆಟ್ ಸಾಧನೆ ಮಾಡಿದ್ದಾರೆ.

ಮೂರನೇ ವೇಗಿ

ಆಸ್ಟ್ರೇಲಿಯಾ ವಿರುದ್ಧ 5 ವಿಕೆಟ್ ಕಿತ್ತ ಮೂರನೇ ವೇಗಿ ಎಂಬ ಖ್ಯಾತಿಗೆ ಮೊಹಮ್ಮದ್ ಶಮಿ ಪಾತ್ರರಾಗಿದ್ದಾರೆ. ಆ ಮೂಲಕ ದಿಗ್ಗಜರಾದ ಕಪಿಲ್ ದೇವ್ ಹಾಗೂ ಅಜಿತ್ ಅಗರ್ಕರ್ ಅವರನ್ನೊಳಗೊಂಡ ಎಲೈಟ್‌ ಲಿಸ್ಟ್‌ಗೆ ಸೇರ್ಪಡೆಯಾಗಿದ್ದಾರೆ.

2019ರ ವಿಶ್ವಕಪ್​​ನಲ್ಲಿ ಬರ್ಮಿಂಗ್ ಹ್ಯಾಮ್​​ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ 69 ರನ್​​ಗೆ 5 ವಿಕೆಟ್ ಪಡೆದದ್ದು ಶಮಿಯ ಇದುವರೆಗಿನ ಶ್ರೇಷ್ಠ ಬೌಲಿಂಗ್​ ಸಾಧನೆಯಾಗಿತ್ತು. ಆದರೆ ಆಸೀಸ್​ ವಿರುದ್ಧ ಶಮಿ 51 ರನ್​ಗೆ 5 ವಿಕೆಟ್​ ಕೆಡವಿ ಈ ಸಾಧನೆಯನ್ನು ಉತ್ತಮ ಪಡಿಸಿಕೊಂಡರು. ಇದು ಏಕದಿನ ಕ್ರಿಕೆಟ್​​ನಲ್ಲಿ ಶಮಿ ಅವರ ಎರಡನೇ ಐದು ವಿಕೆಟ್ ಸಾಧನೆಯಾಗಿದೆ. ಒಟ್ಟಾರೆ 50 ಓವರ್​ಗಳ ಸ್ವರೂಪದಲ್ಲಿ ಶಮಿ ಒಂಬತ್ತು ಬಾರಿ ನಾಲ್ಕು ವಿಕೆಟ್​ಗಳನ್ನು ಕಿತ್ತ ಸಾಧನೆ ಮಾಡಿದ್ದಾರೆ.

ಶಮಿ ಈಗ ಏಕದಿನ ಪಂದ್ಯಗಳಲ್ಲಿ ಕಾಂಗರೂ ಬಳಗದ ವಿರುದ್ಧ 37 ವಿಕೆಟ್​ಗಳನ್ನು ಹೊಂದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯಗಳಲ್ಲಿ ಮೆನ್ ಇನ್ ಬ್ಲೂ ಪರ ಅತಿ ಹೆಚ್ಚು ವಿಕೆಟ್ (45) ಪಡೆದ ಕಪಿಲ್ ದೇವ್ ನಂತರ ಎರಡನೇ ಸ್ಥಾನದಲ್ಲಿದ್ದಾರೆ. ಮೊಹಾಲಿಯಲ್ಲಿ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಭಾರತ 277 ರನ್​ಗಳ ಗುರಿ ಬೆನ್ನತ್ತಿದಿದೆ. ಸರಣಿಯ ಎರಡನೇ ಪಂದ್ಯ ಇಂದೋರ್​ನಲ್ಲಿ ಮತ್ತು ಮೂರನೇ ಮತ್ತು ಅಂತಿಮ ಏಕದಿನ ಪಂದ್ಯ ರಾಜ್​​ಕೋಟ್​​ನಲ್ಲಿ ನಡೆಯಲಿದೆ.

ಇದನ್ನೂ ಓದಿ IND vs AUS: ಆಸೀಸ್​ಗೆ ಬೀಳಲಿ ಸರಣಿ ಸೋಲಿನ ಏಟು

ಪಂದ್ಯ ಗೆದ್ದ ಭಾರತ

ಇಲ್ಲಿನ ಐಎಸ್​ ಬಿಂದ್ರಾ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡ 50 ಓವರ್​ಗಳಲ್ಲಿ 276 ರನ್​ಗಳಿಗೆ ಆಲ್​ಔಟ್​ ಆಯಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಭಾರತ ತಂಡ. 48.4 ಓವರ್​ಗಳಲ್ಲಿ. 5 ವಿಕೆಟ್​ ಕಳೆದುಕೊಂಡು 281 ರನ್ ಬಾರಿಸಿ ಜಯಶಾಲಿಯಾಯಿತು. ಭಾರತ ತಂಡದ ಪರ ಬೌಲಿಂಗ್​ನಲ್ಲಿ 51 ರನ್​ಗಳಿಗೆ 5 ವಿಕೆಟ್​ ಉರುಳಿಸಿದ ಮೊಹಮ್ಮದ್ ಶಮಿ ಹಾಗೂ ಬ್ಯಾಟಿಂಗ್ ಮೂಲಕ ತಲಾ ಅರ್ಧ ಶತಕಗಳನ್ನು ಬಾರಿಸಿದ ಶುಭ್​ಮನ್​ ಗಿಲ್​ (74) ಹಾಗೂ ಋತುರಾಜ್​ ಗಾಯಕ್ವಾಡ್​ (71), ಸೂರ್ಯಕುಮಾರ್​ ಯಾದವ್​ (50), ಮತ್ತು ಕೆ. ಎಲ್​ ರಾಹುಲ್​ (58*) ಗೆಲುವಿನ ರೂವಾರಿಗಳು ಎನಿಸಿಕೊಂಡರು. ಶಮಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಲಭಿಸಿತು.

Exit mobile version