Site icon Vistara News

Mohammed Siraj : ಪಂದ್ಯ ಶ್ರೇಷ್ಠ ಪ್ರಶಸ್ತಿಯ ಚೆಕ್​ ದಾನ ಮಾಡಿದ ಸಿರಾಜ್​​ಗೆ ನೆಟ್ಟಿಗರ ಮೆಚ್ಚುಗೆ

Mohammed Siraj

ಕೊಲೊಂಬೊ: ಶ್ರೀಲಂಕಾ ತಂಡದ ವಿರುದ್ಧದ ಏಷ್ಯಾ ಕಪ್ 2023 ಫೈನಲ್ ಪಂದ್ಯದಲ್ಲಿ ಅಸಾಧಾರಣ ಬೌಲಿಂಗ್ ಸಾಧನೆ ಮಾಡಿದ ಭಾರತದ ಸ್ಟಾರ್ ವೇಗಿ ಮೊಹಮ್ಮದ್ ಸಿರಾಜ್ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಅರ್ಹವಾಗಿ ಪಡೆದುಕೊಂಡರು. ಅವರು ಮಾರಕ ದಾಳಿಯ ನೆರವಿನಿಂದ ಭಾರತವು ಲಂಕಾ ತಂಡವನ್ನು ಹತ್ತು ವಿಕೆಟ್ ಗಳಿಂದ ಸೋಲಿಸಿ ಕಾಂಟಿನೆಂಟಲ್ ಚಾಂಪಿಯನ್ ಶಿಪ್ ನಲ್ಲಿ ಎಂಟನೇ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಸಿರಾಜ್​ ಅವರ 21 ರನ್​ಗಳಿಗೆ 6 ವಿಕೆಟ್ ಸಾಧನೆ ಅವರ ಜೀವನ ಶ್ರೇಷ್ಠ ಸಾಧನೆಯಾಗಿದೆ.

ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದ 29 ವರ್ಷದ ಆಟಗಾರನಿಗೆ 5000 ಡಾಲರ್ (4,15,451.75 ರೂ.) ಬಹುಮಾನ ನೀಡಲಾಯಿತು. ಆದರೆ ಅವರು ಸ್ಥಳದಲ್ಲೇ ಆ ಬಹುಮಾನವನ್ನು ಮೈದಾನದ ಸಿಬ್ಬಂದಿಗೆ (ಗ್ರೌಂಡ್​ ಸ್ಟಾಪ್​) ಅರ್ಪಿಸಿದರು. ಅವರಿಲ್ಲದೆ ಸ್ಪರ್ಧೆ ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿ ಅಷ್ಟೂ ಮೊತ್ತವನ್ನು ನೀಡಿದ್ದಾರೆ.

“ನಾನು ಬಹಳ ಸಮಯದಿಂದ ಉತ್ತಮವಾಗಿ ಬೌಲಿಂಗ್ ಮಾಡುತ್ತಿದ್ದೇನೆ. ಈ ಮೊದಲು ಕೆಲವೊಂದು ತಂತ್ರಗಳನ್ನು ಕಳೆದುಕೊಂಡಿದ್ದೆ . ಆದರೆ ಇಂದು ಅವುಗಳನ್ನು ಕಂಡುಕೊಂಡೆ. ಈ ಮೊದಲು ವಿಕೆಟ್ ವೇಗಕ್ಕೆ ಪೂರಕವಾಗಿತ್ತು. ಆದರೆ ಇಂದು ಸ್ವಿಂಗ್ ಆಗುತ್ತಿತ್ತು. ಸ್ವಿಂಗ್ ಕಾರಣದಿಂದಾಗಿ ನಾನು ಪೂರ್ಣವಾಗಿ ಬೌಲಿಂಗ್ ಮಾಡುತ್ತೇನೆ ಎಂದು ನಾನು ಭಾವಿಸಿದೆ. ವೇಗದ ಬೌಲರ್​ಗಳ ನಡುವೆ ಉತ್ತಮ ಬಾಂಧವ್ಯವಿದ್ದಾಗ, ಅದು ತಂಡಕ್ಕೆ ನೆರವಾಗುತ್ತದೆ. ಇದು ನನ್ನ ಅತ್ಯುತ್ತಮ ಸ್ಪೆಲ್. ಈ ನಗದು ಬಹುಮಾನ [$5000 ಅಥವಾ ಸುಮಾರು 415,452 ರೂ] ಮೈದಾನದ ಸಿಬ್ಬಂದಿಗೆ ಹೋಗುತ್ತದೆ. ಅವರಿಲ್ಲದೆ ಈ ಪಂದ್ಯಾವಳಿ ಸಾಧ್ಯವಾಗುತ್ತಿರಲಿಲ್ಲ, “ಎಂದು ಸಿರಾಜ್ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದ ನಂತರ ಹೇಳಿದ್ದಾರೆ.

ಇದನ್ನೂ ಓದಿ : Mohammed Siraj : ಹೈದರಾಬಾದ್ ಹರಿಕೇನ್​ ಸಿರಾಜ್​ ಸೃಷ್ಟಿಸಿದ ದಾಖಲೆಗಳ ಪಟ್ಟಿ ಇಲ್ಲಿದೆ

ಗ್ರೌಂಡ್ ಸ್ಟಾಫ್ ಮತ್ತು ಕ್ಯುರೇಟರ್ಗಳಿಗೆ 41.5 ಲಕ್ಷ ರೂ.ಗಳ ಬಹುಮಾನ

16ನೇ ಆವೃತ್ತಿಯ ಏಷ್ಯಾಕಪ್ ಟೂರ್ನಿಗೆ ಸತತವಾಗಿ ಮಳೆ ಅಡ್ಡಿಯಾಗಿತ್ತು. . ಭಾರವಾದ ಹೊದಿಕೆಗಳನ್ನು ತ್ವರಿತವಾಗಿ ತೆಗೆದುಹಾಕುವುದರಿಂದ ಹಿಡಿದು ಪಿಚ್ ಅನ್ನು ಒಣಗಿಸಲು ಸೃಜನಶೀಲ ತಂತ್ರಗಳನ್ನು ನಿಯೋಜಿಸುವವರೆಗೆ ಮೈದಾನದ ಸಿಬ್ಬಂದಿ ಸಂಪೂರ್ಣವಾಗಿ ಕಾರ್ಯನಿರತರಾಗಿದ್ದರು. ಅದೇ ರೀತಿ ಬೌಲರ್​ಗಳು ಮತ್ತು ಬ್ಯಾಟರ್​​ಳಿಗೆ ಪೂರಕವಾಗಿ ಪಿಚ್​ ರಚಿಸುವ ಮೂಲಕ ಕ್ಯುರೇಟರ್​ಗಳು ಕೂಡ ಅತ್ಯುತ್ತಮ ಕೆಲಸ ಮಾಡಿದ್ದರು.

ಭಾನುವಾರ (ಸೆಪ್ಟೆಂಬರ್ 17) ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅಧ್ಯಕ್ಷ ಜಯ್ ಶಾ ಮತ್ತು ಶ್ರೀಲಂಕಾ ಕ್ರಿಕೆಟ್ (ಎಸ್ಎಲ್ಸಿ) ಕೊಲಂಬೊ ಮತ್ತು ಕ್ಯಾಂಡಿಯ ಕ್ಯುರೇಟರ್​ಗಳು ಮತ್ತು ಗ್ರೌಂಡ್ ಸಿಬ್ಬಂದಿಗೆ 50,000 ಡಾಲರ್ (41.5 ಲಕ್ಷ ಭಾರತ , 1.6 ಕೋಟಿ ಶ್ರೀಲಂಕಾ ರೂಪಾಯಿ) ಬಹುಮಾನದ ಮೊತ್ತವನ್ನು ಘೋಷಿಸಿದರು. ಮೈದಾನದ ಸಿಬ್ಬಂದಿಯನ್ನು ‘ ತೆರೆ ಮರೆಯ ಹೀರೋಗಳು ಎಂದು ಉಲ್ಲೇಖಿಸಿದ ಶಾ, ಪಂದ್ಯಾವಳಿಯು ಅವರ ಅಚಲ ಬದ್ಧತೆ ಮತ್ತು ಕಠಿಣ ಪರಿಶ್ರಮದದಿಂದ ಯಶಸ್ಸು ಸಾಧಿಸಿದೆ ಎಂದು ಹೇಳಿದರು.

Exit mobile version