Site icon Vistara News

Mohammed Siraj: ಕ್ರಿಕೆಟಿಗ ಸಿರಾಜ್‌, ಬಾಕ್ಸರ್​ ನಿಖತ್ ಜರೀನ್‌, ಶೂಟರ್​ ಇಶಾ ಸಿಂಗ್​ಗೆ ನಿವೇಶನ ಮಂಜೂರು ಮಾಡಿದ ತೆಲಂಗಾಣ ಸರ್ಕಾರ

Mohammed Siraj

Mohammed Siraj: Govt allots 600 Sq yds plot to Siraj in Hyderabad’s Jubilee Hills

ಹೈದರಾಬಾದ್​: ಟೀಮ್​ ಇಂಡಿಯಾದ ವೇಗದ ಬೌಲರ್​ ಮೊಹಮ್ಮದ್​ ಸಿರಾಜ್​ಗೆ ತೆಲಂಗಾಣ ಸರಕಾರವು ನಿವೇಶನ ಮಂಜೂರು ಮಾಡಿದೆ. ಜುಬಿಲಿ ಹಿಲ್ಸ್‌ನ ರಸ್ತೆ ಸಂಖ್ಯೆ 78 ರಲ್ಲಿ 600 ಚದರ ಭೂಮಿಯನ್ನು ಮಂಜೂರು ಮಾಡುವ ಆದೇಶವನ್ನು ತೆಲಂಗಾಣ ಸರ್ಕಾರ ಬಿಡುಗಡೆ ಮಾಡಿದೆ.

ಸಿರಾಜ್ ಅವರೊಂದಿಗೆ, ಶೂಟರ್ ಇಶಾ ಸಿಂಗ್ ಮತ್ತು ಎರಡು ಬಾರಿ ವಿಶ್ವ ಬಾಕ್ಸಿಂಗ್ ಚಾಂಪಿಯನ್ ನಿಖತ್ ಜರೀನ್‌(Nikhat Zareen) ಅವರಿಗೂ ಹೈದರಾಬಾದ್​ನಲ್ಲಿ ತಲಾ 600 ಚದರಗಳಷ್ಟು ಮನೆ ನಿವೇಶನಗಳನ್ನು ನೀಡುವುದಾಗಿ ಸರ್ಕಾರ ಘೋಷಿಸಿದೆ. ಜುಲೈ 31 ರಂದು ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿ(Chief Minister A. Revanth Reddy) ಅವರು ಸಿರಾಜ್ ಅವರಿಗೆ ನಗರದಲ್ಲಿ ಮನೆ ನಿವೇಶನ ಮಂಜೂರು ಮಾಡುವುದಾಗಿ ಘೋಷಿಸಿದ್ದರು. ಸಿರಾಜ್ ಮತ್ತು ನಿಖತ್​ಗೆ ಕ್ರೀಡೆಗೆ ನೀಡಿದ ಕೊಡುಗೆಗಾಗಿ ಸರ್ಕಾರವು ಈಗಾಗಲೇ ಗ್ರೂಪ್-1 ಉದ್ಯೋಗಗಳನ್ನು ನೀಡಿದೆ.

ನಿಖತ್​ ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಮಹಿಳೆಯರ 50 ಕೆಜಿ ಬಾಕ್ಸಿಂಗ್​(Paris Olympics boxing) ವಿಭಾಗದ ಪ್ರೀ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಸೋಲು ಕಂಡು ತಮ್ಮ ಅಭಿಯಾನವನ್ನು ಮುಗಿಸಿದ್ದರು. ಮೊಹಮ್ಮದ್ ಸಿರಾಜ್ ಟಿ20 ವಿಶ್ವಕಪ್​​ ಗೆದ್ದ ತಂಡದ ಸದಸ್ಯರಾಗಿದ್ದರು. ಒಟ್ಟು ಮೂರು ಪಂದ್ಯಗಳನ್ನು ಆಡಿದ್ದರು.

ಇದನ್ನೂ ಓದಿ Mohammed Siraj : ಲಂಕಾ ವಿರುದ್ಧದ ಪಂದ್ಯದಲ್ಲಿ ಹೊಸ ದಾಖಲೆ ಬರೆದ ಮೊಹಮ್ಮದ್​ ಸಿರಾಜ್​

ಪಂದ್ಯ ಶ್ರೇಷ್ಠ ಪ್ರಶಸ್ತಿಯ ಚೆಕ್​ ದಾನ ಮಾಡಿದ್ದ ಸಿರಾಜ್​


ಶ್ರೀಲಂಕಾ ತಂಡದ ವಿರುದ್ಧ ಕಳೆದ ವರ್ಷ ನಡೆದ ಏಷ್ಯಾ ಕಪ್ 2023 ಫೈನಲ್ ಪಂದ್ಯದಲ್ಲಿ ಅಸಾಧಾರಣ ಬೌಲಿಂಗ್ ಸಾಧನೆ ಮಾಡಿದ್ದ ಮೊಹಮ್ಮದ್ ಸಿರಾಜ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಅರ್ಹವಾಗಿದ್ದರು. ಅವರಿಗೆ 5000 ಡಾಲರ್ (4,15,451.75 ರೂ.) ಬಹುಮಾನ ನೀಡಲಾಗಿತ್ತು. ಆದರೆ ಅವರು ಸ್ಥಳದಲ್ಲೇ ಆ ಬಹುಮಾನವನ್ನು ಮೈದಾನದ ಸಿಬ್ಬಂದಿಗೆ (ಗ್ರೌಂಡ್​ ಸ್ಟಾಪ್​) ಅರ್ಪಿಸಿ ಮನಗೆದ್ದಿದ್ದರು.

ಮೊಹಮ್ಮದ್​ ಸಿರಾಜ್​ ಟೀಮ್​ ಇಂಡಿಯಾ ಪರ ಕೆಲ ವರ್ಷಗಳಿಂದ ಪ್ರದರ್ಶನ ನೀಡುತ್ತಲೇ ಬಂದಿದ್ದಾರೆ. ಬೌಲಿಂಗ್​ ಶ್ರೇಯಾಂಕದಲ್ಲಿಯೂ ಅಗ್ರಸ್ಥಾನ ಪಡೆದಿದ್ದಾರೆ. ಸದ್ಯ ಅವರು ತಂಡದ ಪ್ರಮುಖ ಬೌಲರ್​ಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿಯೂ ಗಮನಾರ್ಹ ಪ್ರದರ್ಶನ ತೋರಿದ್ದರು. ಫೈನಲ್​ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತಾಗ ಬೇಸರಲ್ಲಿ ಸಿರಾಜ್​ ಮೈದಾನದಲ್ಲೇ ಬಿಕ್ಕಿ ಬಿಕ್ಕಿ ಅತ್ತಿದ್ದರು. ಬಳಿಕ ಅವರನ್ನು ತಂಡದ ನಾಯಕ ರೋಹಿತ್​ ಶರ್ಮ ಮತ್ತು ಸಹ ಆಟಗಾರ ಜಸ್​ಪ್ರೀತ್​ ಬುಮ್ರಾ ಸಮಾಧಾನಪಡಿಸಿದ್ದರು.

Exit mobile version