Site icon Vistara News

IND vs WI 1st ODI: ವಿಂಡೀಸ್​ ಏಕದಿನ ಸರಣಿ ಮೊಟಕುಗೊಳಿಸಿ ತವರಿಗೆ ಮರಳಲಿದ್ದಾರೆ ಮೊಹಮ್ಮದ್ ಸಿರಾಜ್​!

mohammed siraj

ಬಾರ್ಬಡಾಸ್​: ವಿಂಡೀಸ್​ ವಿರುದ್ಧ ಭಾರತ ತಂಡ ಮೊದಲ ಏಕದಿನ(IND vs WI 1st ODI) ಪಂದ್ಯವನ್ನಾಡಲು ಸಜ್ಜಾಗುತ್ತಿದ್ದಂತೆ ವೇಗಿ ಮೊಹಮ್ಮದ್​ ಸಿರಾಜ್(Mohammed Siraj)​ ಅವರು ಏಕದಿನ ಸರಣಿಯಿಂದ ಹೊರಗುಳಿಯಲಿದ್ದಾರೆ ಎಂದು ವರದಿಯಾಗಿದೆ. ಅತಿಯಾದ ಕ್ರಿಕೆಟ್​ ಆಡುತ್ತಿರುವ ಸಿರಾಜ್​ ಅವರ ಕೆಲಸದ ಒತ್ತಡವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಬಿಸಿಸಿಐ ಸಿರಾಜ್​ ಅವರಿಗೆ ಈ ಸರಣಿಯಿಂದ ವಿಶ್ರಾಂತಿ ನೀಡಿದ್ದು ಅವರು ತವರಿಗೆ ಮರಳಲಿದ್ದಾರೆ.

ಮೊಹಮ್ಮದ್​ ಶಮಿ ಅವರ ಅಲಭ್ಯದಿಂದ ವೇಗದ ಬೌಲಿಂಗ್‌ ವಿಭಾಗದಲ್ಲಿ ಅನುಭವಿಗಳಿಲ್ಲದ ಕಾರಣ ಸಿರಾಜ್‌ ಅವರು ಭಾರತ ತಂಡದ ಬೌಲಿಂಗ್‌ ನೇತೃತ್ವ ವಹಿಸಲಿದ್ದಾರೆ ಎನ್ನಲಾಗಿತ್ತು. ಆದರೆ ಇದೀಗ ಬಿಸಿಸಿಐ ದಿಢೀರ್​ ಆಗಿ ಸಿರಾಜ್​ಗೆ ವಿಶ್ರಾಂತಿ ನೀಡಲು ನಿರ್ಧರಿಸಿದೆ. ಈ ವಿಚಾರವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಪ್ರಕಟನೆ ಮೂಲಕ ಖಚಿತಪಡಿಸಿದೆ. ಸಿರಾಜ್ ಅವರ ಅನುಪಸ್ಥಿತಿಯಲ್ಲಿ ಉಮ್ರಾನ್‌ ಮಲಿಕ್‌, ಜಯ್​ದೇವ್​ ಉನಾದ್ಕತ್​ ಮತ್ತು ಮುಖೇಶ್​ ಕುಮಾರ್​ ಅವರು ಭಾರತದ ಬೌಲಿಂಗ್​ ನಿರ್ವಹಿಸಲಿದ್ದಾರೆ.

ಮೊಹಮ್ಮದ್​ ಸಿರಾಜ್​ ಅವರು ಕಳೆದ ಒಂದು ವರ್ಷದಿಂದ ಸತತವಾಗಿ ಕ್ರಿಕೆಟ್​ ಆಡುತ್ತಲೇ ಬರುತ್ತಿದ್ದಾರೆ. ಏಷ್ಯಾಕಪ್​ ಮತ್ತು ಏಕದಿನ ವಿಶ್ವಕಪ್​ಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದೆ. ಈ ಎಲ್ಲ ದೃಷ್ಟಿಯಿಂದ ಸಿರಾಜ್​ ಅವರಿಗೆ ಬಿಸಿಸಿಐ ವಿಶ್ರಾಂತಿ ನೀಡಲು ನಿರ್ಧರಿಸಿದೆ.

ಇದನ್ನೂ ಓದಿ IND vs WI 1st ODI: ನಿದ್ದೆ ಇಲ್ಲದೆ ಬೆಳಗಿನ ಜಾವ 3ರ ತನಕ ಏರ್‌ಪೋರ್ಟ್‌ನಲ್ಲೇ ಉಳಿದ ಟೀಮ್​ ಇಂಡಿಯಾ ಆಟಗಾರರು!

ಆಸ್ಟ್ರೇಲಿಯ ವಿರುದ್ಧ ಗೋಲ್ಡನ್‌ ಡಕ್‌ ಹ್ಯಾಟ್ರಿಕ್‌ ಸಂಕಟ ಅನುಭವಿಸಿದ್ದ ಸೂರ್ಯಕುಮಾರ್​ ಯಾದವ್(suryakumar yadav)​ ಈ ಸರಣಿಯಲ್ಲಿಯೂ ವೈಫಲ್ಯ ಕಂಡರೆ ಏಕದಿನ ವಿಶ್ವಕಪ್​ಗೆ ಅವರ ಆಯ್ಕೆ ಕಷ್ಟಸಾಧ್ಯ. ಗಾಯಾಳು ಶ್ರೇಯಸ್‌ ಅಯ್ಯರ್‌ ಅವರು 4ನೇ ಕ್ರಮಾಂಕದಲ್ಲಿ ಕಾಣಿಸಿಕೊಳ್ಳಬುದು. ಹೀಗಾಗಿ ವಿಂಡೀಸ್​ ವಿರುದ್ಧದ ಸರಣಿ ಸೂರ್ಯ ಪಾಲಿಗೆ ಅಗ್ನಿಪರೀಕ್ಷೆ. ಕ್ಲಿಕ್‌ ಆದರೆ ತಂಡದಲ್ಲಿ ಮುಂದುವರಿದು ಏಷ್ಯಾ ಕಪ್​ ಮತ್ತು ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಾರು. ಇಲ್ಲವಾದರೆ ಅಯ್ಯರ್‌ಗೆ ಅಥವಾ ಸಂಜು ಅವರಿಗೆ ಜಾಗ ಬಿಡಬೇಕಾದ ಸ್ಥಿತಿ ಎದುರಾಗಬಹುದು.

ಬಾರ್ಬಡೋಸ್‌ನ ಕೆನ್ಸಿಂಗ್ಟನ್ ಓವಲ್​ ಸ್ಟೇಡಿಯಂನ(Kensington Oval, Bridgetown, Barbados) ಪಿಚ್​ ವೇಗಿಗಳಿಗೆ ಹೆಚ್ಚಿನ ನೆರವು ನೀಡುತ್ತದೆ. ಇದು ಬೌನ್ಸಿ ಪಿಚ್​ ಆಗಿದ್ದು ಇಲ್ಲಿ ದೊಡ್ಡ ಮೊತ್ತ ದಾಖಲಿಸುವುದು ಕಷ್ಟಕರ. ಅದರಲ್ಲೂ ಮೊದಲು ಬ್ಯಾಟಿಂಗ್​ ನಡೆಸುವ ತಂಡಕ್ಕೆ ಇಲ್ಲಿ ರನ್​ಗಳಿಸುವುದು ಅಷ್ಟು ಸುಲಭವಲ್ಲ. ಇಲ್ಲಿ ಇದುವರೆಗೆ 49 ಏಕದಿನ ಪಂದ್ಯಗಳು ನಡೆದಿವೆ. ಇದರಲ್ಲಿ 25 ಬಾರಿ ಚೇಸಿಂಗ್​ ನಡೆಸಿದ ತಂಡ ಮೇಲುಗೈ ಸಾಧಿಸಿದೆ. 364 ರನ್​ ಇಲ್ಲಿ ದಾಖಲಾದ ಗರಿಷ್ಠ ಮೊತ್ತವಾಗಿದೆ. ಇಂಗ್ಲೆಂಡ್​ ತಂಡ ಈ ಮೊತ್ತವನ್ನು ಬಾರಿಸಿತ್ತು. ಇಲ್ಲಿನ ಎವರೇಜ್​ ರನ್​ ಗಳಿಕೆ 229. ಟಾಸ್​ ಗೆದ್ದ ತಂಡ ಬೌಲಿಂಗ್​ ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಾಗಿದೆ. ಬೌನ್ಸಿ ಪಿಚ್​ ಆದ ಕಾರಣ ಉಭಯ ತಂಡಗಳಲ್ಲಿಯೂ ಸ್ಪಿನ್​ ಬದಲು ಹೆಚ್ಚುವರಿಯಾಗಿ ವೇಗಿಗಳು ಕಾಣಿಸಿಕೊಂಡರು ಅಚ್ಚರಿಯಿಲ್ಲ.

Exit mobile version