ನವದೆಹಲಿ: ಟೀಮ್ ಇಂಡಿಯಾದ ವೇಗಿ ಮೊಹಮ್ಮದ್ ಸಿರಾಜ್(Mohammed Siraj) ಏಕ ದಿನ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲು ಸಂಪೂರ್ಣ ಸಿದ್ಧರಾಗಿದ್ದಾರೆ ಎಂದು ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಹೇಳಿದ್ದಾರೆ.
ಸ್ಟಾರ್ ಸ್ಪೋರ್ಟ್ಸ್ ಸಂದರ್ಶನದಲ್ಲಿ ಮಾತನಾಡಿದ ಇರ್ಫಾನ್ ಪಠಾಣ್, ಭಾರತ ಆತಿಥ್ಯದಲ್ಲಿ ಅಕ್ಟೋಬರ್- ನವೆಂಬರ್‌ನಲ್ಲಿ ನಡೆಯಲಿರುವ ಏಕ ದಿನ ವಿಶ್ವಕಪ್‌ನ ದೃಷ್ಟಿಕೋನದಿಂದ ಮೊಹಮ್ಮದ್ ಸಿರಾಜ್ ತಂಡದಲ್ಲಿ ಸ್ಥಾನ ಪಡೆಯಲು ಎಲ್ಲ ರೀತಿಯ ಪ್ರಯತ್ನವನ್ನು ಮಾಡುತ್ತಿದ್ದಾರೆ ಎಂದು ಪಠಾಣ್ ಹೇಳಿದ್ದಾರೆ.
ಸಿರಾಜ್ ಸದ್ಯ ಭಾರತ ತಂಡದಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ತೋರುತ್ತಿದ್ದಾರೆ. ಅವರು ಎರಡೂ ರೀತಿಯಲ್ಲಿಯೂ ಚೆಂಡನ್ನು ಸ್ವಿಂಗ್ ಮಾಡಬಲ್ಲರು ಮತ್ತು ಹೊಸ ಚೆಂಡಿನಲ್ಲಿ ನಿಯಮಿತವಾಗಿ ಭಾರತಕ್ಕೆ ವಿಕೆಟ್‌ಗಳನ್ನು ತೆಗೆದುಕೊಡುತ್ತಿದ್ದಾರೆ. ಇದೇ ರೀತಿಯ ಪ್ರದರ್ಶನ ಮುಂದಿನ ಸರಣಿಯಲ್ಲೂ ತೋರ್ಪಡಿಸಿದರೆ ಅವರು ವಿಶ್ವ ಕಪ್ ತಂಡದಲ್ಲಿ ಸ್ಥಾನ ಪಡೆಯುವುದು ಖಚಿತ ಎಂದು ಇರ್ಫಾನ್ ಪಠಾಣ್ ತಿಳಿಸಿದರು.
ಬೌಲಿಂಗ್ನಲ್ಲಿ ಸುಧಾರಣೆ
ಮೊಹಮ್ಮದ್ ಸಿರಾಜ್ ಕಳೆದ ಒಂದು ವರ್ಷದಿಂದ ಭಾರತ ಪರ ಆಡುತ್ತಿರುವ ಪ್ರತಿಯೊಂದು ಸರಣಿಯಲ್ಲೂ ಉತ್ತಮ ಬೌಲಿಂಗ್ ನಡೆಸುತ್ತಿದ್ದು ವಿಕೆಟ್ ಟೇಕರ್ ಆಗಿ ಗುರುಸಿಕೊಂಡಿದ್ದಾರೆ. ಜತೆಗೆ ಅವರು ನಿರಂತರವಾಗಿ ಕ್ರಿಕೆಟ್ ಆಡಿದ ಕಾರಣ ತುಂಬಾ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿದ್ದಾರೆ. ಅವರ ಬೌಲಿಂಗ್ ಪ್ರದರ್ಶನದಲ್ಲಿಯೂ ಉತ್ತಮ ಸುಧಾರಣೆ ಕಂಡಿದೆ ಎಂದು ಪಠಾಣ್ ಹೇಳಿದರು.
ಇದನ್ನೂ ಓದಿ | IND VS SL | ಗೆಲುವಿನ ಬಳಿಕ ಸಖತ್ ಸ್ಟೆಪ್ಸ್ ಹಾಕಿದ ವಿರಾಟ್ ಕೊಹ್ಲಿ, ಇಶಾನ್ ಕಿಶನ್; ವಿಡಿಯೊ ವೈರಲ್