ಮುಂಬಯಿ: ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರಿದ ಮೊಹಮ್ಮದ್ ಸಿರಾಜ್(Mohammed Siraj) ತವರಿಗೆ ಮರಳಿದ್ದಾರೆ. ಆದರೆ ಪ್ರಯಾಣದ ವೇಳೆ ಸಿರಾಜ್ ಅವರ ಬ್ಯಾಗ್ ನಾಪತ್ತೆಯಾಗಿದೆ. ಈ ವಿಚಾರವನ್ನು ಅವರು ಟ್ವಿಟರ್ ಮೂಲಕ ತಿಳಿಸಿದ್ದಾರೆ.
ಬಾಂಗ್ಲಾ ಸರಣಿ ಮುಕ್ತಾಯ ಕಂಡ ಬಳಿಕ ಸಿರಾಜ್ ಸೋಮವಾರ (ಡಿಸೆಂಬರ್ 26) ಢಾಕಾದಿಂದ ಮುಂಬೈ ಮೂಲಕ ದೆಹಲಿಗೆ ವಿಮಾನದಲ್ಲಿ ತೆರಳಿದ್ದರು. ಈ ವೇಳೆ ಒಟ್ಟು ಮೂರು ಬ್ಯಾಗ್ ಅವರ ಜತೆಗಿತ್ತು. ಆದರೆ ಇದರಲ್ಲಿ ಒಂದು ಬ್ಯಾಗ್ ಮಿಸ್ ಪ್ಲೇಸ್ ಆಗಿದೆ.
ತಮ್ಮ ಬ್ಯಾಗ್ ಕಳೆದು ಹೋಗಿ ಸುಮಾರು ನಾಲ್ಕು ಗಂಟೆಗಳು ಕಳೆದರೂ ಸಿಗದೇ ಇದ್ದಾಗ ಸಿರಾಜ್ ಮಂಗಳವಾರ ತಡರಾತ್ರಿ ವಿಮಾನಯಾನ ಸಂಸ್ಥೆಗೆ ತಮ್ಮ ಬ್ಯಾಗ್ ಪತ್ತೆಹಚ್ಚಿಕೊಡುವಂತೆ ಮನವಿ ಮಾಡಿದ್ದಾರೆ. “ನಾನು 26 ರಂದು ಢಾಕಾದಿಂದ ದೆಹಲಿ ಮೂಲಕ ಮುಂಬೈಗೆ ಕ್ರಮವಾಗಿ ಯುಕೆ 182 ಮತ್ತು ಯುಕೆ 951 ವಿಮಾನದಲ್ಲಿ ಪ್ರಯಾಣಿಸುತ್ತಿದ್ದೆ. ನಾನು ಮೂರು ಬ್ಯಾಗ್‌ಗಳೊಂದಿಗೆ ಚೆಕ್ ಇನ್ ಮಾಡಿದ್ದೇನೆ. ಅದರಲ್ಲಿ ಒಂದು ಬ್ಯಾಗ್ ಕಳೆದುಹೋಗಿದೆ. ಈ ಬಗ್ಗೆ ಸಿಬ್ಬಂದಿಗೆ ದೂರು ನೀಡಲಾಗಿದೆ. ಆದರೂ ಇದುವರೆಗೆ ಯಾವುದೇ ಅಪ್ಡೇಟ್ ಇಲ್ಲ. ಬ್ಯಾಗ್ ಕೂಡ ಇಲ್ಲಿಯವರೆಗೆ ಸಿಕ್ಕಿಲ್ಲ” ಎಂದು ಸಿರಾಜ್ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ | INDvsSL | ಲಂಕಾ ಸರಣಿಗೆ ಭಾರತ ತಂಡ ಪ್ರಕಟ, ಒಡಿಐನಲ್ಲಿ ರಾಹುಲ್ಗೆ ಚಾನ್ಸ್, ರೋಹಿತ್ ವಾಪಸ್