Site icon Vistara News

Team India : ಲಂಕಾ ತಂಡವನ್ನು ಉಡೀಸ್ ಮಾಡಿದ ಮೊಹಮ್ಮದ್ ಸಿರಾಜ್ ನಂಬರ್ ಒನ್​

Mohammed Siraj

ನವ ದೆಹಲಿ: ಇತ್ತೀಚೆಗೆ ಮುಕ್ತಾಯಗೊಂಡ ಏಷ್ಯಾ ಕಪ್ ಫೈನಲ್​ನಲ್ಲಿ ಮ್ಯಾಚ್ ವಿನ್ನಿಂಗ್ ಮತ್ತು ದಾಖಲೆಯ ಪ್ರದರ್ಶನ ನೀಡಿದ ಭಾರತ (Team India) ತಂಡದ ವೇಗದ ಬೌಲರ್​ ಮೊಹಮ್ಮದ್ ಸಿರಾಜ್ ಐಸಿಸಿ ಏಕದಿನ ಬೌಲಿಂಗ್ ಶ್ರೇಯಾಂಕದಲ್ಲಿ ವಿಶ್ವದ ನಂ.1 ಬೌಲರ್ ಆಗಿ ಹೊರಹೊಮ್ಮಿದ್ದಾರೆ. ಈ ಮೂಲಕ ಅವರು ಇತ್ತೀಚಿನ ದಿನಗಳಲ್ಲಿ ಅತ್ಯಂತ ಉತ್ತಮ ಬೌಲಿಂಗ್ ಸಾಧನೆ ಮಾಡಿದ್ದಾರೆ.

ಇದಕ್ಕಿಂತ ಮೊದಲು ಸಿರಾಜ್ ಒಂಬತ್ತನೇ ಸ್ಥಾನವನ್ನು ಅಲಂಕರಿಸಿಕೊಂಡಿದ್ದರು. ಆದರೆ, ಲಂಕಾ ವಿರುದ್ಧದ ಏಷ್ಯಾ ಕಪ್​ ಫೈನಲ್​ ಪಂದ್ಯಶ್ರೇಷ್ಠ ಪ್ರದರ್ಶನ ನೀಡಿದ್ದ ಹಿನ್ನೆಲೆಯಲ್ಲಿ 694 ರೇಟಿಂಗ್ಸ್​​ಗಳನ್ನು ಪಡೆಯಲು ನೆರವಾಯಿತು. ಇದೀಗ ಅವರು ಎರಡನೇ ಶ್ರೇಯಾಂಕದ ಆಸ್ಟ್ರೇಲಿಯಾದ ಜೋಶ್ ಹೇಜಲ್​ವುಡ್​ಗಿಂತ 16 ಅಂಕ ಮುಂದಿದ್ದಾರೆ. ಏತನ್ಮಧ್ಯೆ ಸಹ ಆಟಗಾರ ಮತ್ತು ಬೌಲಿಂಗ್ ಪಾಲುದಾರ ಕುಲದೀಪ್ ಯಾದವ್ ಸ್ವಲ್ಪ ಕುಸಿತವನ್ನು ಕಂಡಿದ್ದಾರೆ ಮತ್ತು 638 ರೇಟಿಂಗ್ಸ್​ಗಳೊಂದಿಗೆ 8ನೇ ಸ್ಥಾನಕ್ಕೆ ಕುಸಿದಿದ್ದಾರೆ. ಏಷ್ಯಾಕಪ್​​ನಲ್ಲಿ ಕುಲ್ದೀಪ್ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಸಿರಾಜ್ ನಂತರ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಏಕೈಕ ಭಾರತೀಯ ಬೌಲರ್ ಕುಲ್ದೀಪ್​ ಯಾದವ್​.

ಏಕದಿನ ಬ್ಯಾಟಿಂಗ್ ಶ್ರೇಯಾಂಕದಲ್ಲಿ, ಬಾಬರ್ ಅಜಮ್ ಏಷ್ಯಾಕಪ್ ಉತ್ತಮ ಬ್ಯಾಟಿಂಗ್​ ಮಾಡದಿದ್ದರೂ ಅಗ್ರಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ನೇಪಾಳ ವಿರುದ್ಧದ ಪಂದ್ಯದಲ್ಲಿ ಅವರು ದಾಖಲೆಯ 151 ರನ್ ಗಳಿಸಿದ್ದರು. ಪಂದ್ಯಾವಳಿಯನ್ನು ಭವ್ಯವಾಗಿ ಪ್ರಾರಂಭಿಸಲು ತಮ್ಮ ತಂಡಕ್ಕೆ ಸಹಾಯ ಮಾಡಿದ್ದರು. ಆದರೆ ಅವರಿಗೆ ಆ ಬಳಿಕ ಬ್ಯಾಟಿಂಗ್​ನಲ್ಲಿ ಮ್ಯಾಜಿಕ್ ಪ್ರದರ್ಶಿಸಲು ಸಾಧ್ಯವಾಗಲಿಲ್ಲ. ಪಂದ್ಯಾವಳಿಯ ಇತರ ಪಂದ್ಯಗಳಲ್ಲಿ ಬಾಬರ್ ಅಜಮ್​ ವಿಫಲಗೊಂಡರು. ಹೀಗಾಗಿ ಪಾಕಿಸ್ತಾನ ತಂಡ ಸೂಪರ್4 ಹಂತಕ್ಕೆ ಪ್ರವೇಶ ಪಡೆಯಲು ವಿಫಲಗೊಂಡಿತು. ಆದಾಗ್ಯೂ ಬಾಬರ್ ಅಜಮ್​ ಬ್ಯಾಟಿಂಗ್​ನಲ್ಲಿ ಮುಂಚೂಣಿ ಸ್ಥಾನ ಕಾಪಾಡಿಕೊಂಡಿದ್ದಾರೆ.

ಭಾರತದ ಶುಬ್ಮನ್ ಗಿಲ್ 814 ರೇಟಿಂಗ್ ಅಂಕಗಳೊಂದಿಗೆ ಬ್ಯಾಟಿಂಗ್​ನಲ್ಲಿ ನಂ.2 ಸ್ಥಾನದಲ್ಲಿದ್ದಾರೆ. ಏಷ್ಯಾಕಪ್​ನಲ್ಲಿ ಬಾಂಗ್ಲಾದೇಶದ ವಿರುದ್ಧ ಶತಕ ಬಾರಿಸಿದ ಗಿಲ್, ಎರಡು ಅರ್ಧಶತಕಗಳು ಮತ್ತು ಅಜೇಯ 27 ರನ್ ಗಳಿಸಿ ತಮ್ಮ ಬ್ಯಾಟಿಂಗ್ ವೀರೋಚಿತ ಪ್ರದರ್ಶನವನ್ನು ಮುಂದುವರಿಸಿದ್ದರು.

ಇದನ್ನೂ ಓದಿ : Asia Cup 2023 : ಸಿರಾಜ್‌ರಿಂದ 10 ಓವರ್​ ಹಾಕಿಸುವ ಉದ್ದೇಶವಿತ್ತು, ಟ್ರೈನರ್​ ಬಿಡಲಿಲ್ಲ ಎಂದ ರೋಹಿತ್​

ವಿರಾಟ್ ಕೊಹ್ಲಿ 708 ರೇಟಿಂಗ್ ಅಂಕಗಳೊಂದಿಗೆ ಎಂಟನೇ ಸ್ಥಾನಕ್ಕೆ ಜಿಗಿದಿದ್ದಾರೆ. ಭಾರತದ ನಾಯಕ ರೋಹಿತ್ ಶರ್ಮಾ ಟಾಪ್ 10ರಲ್ಲಿ ಸ್ಥಾನ ಪಡೆದಿದ್ದಾರೆ.

Exit mobile version