ನವ ದೆಹಲಿ : ಸೂಕ್ತ ಸಮಯಕ್ಕೆ ಚುನಾವಣೆ ನಡೆಸಿ ಕಾರ್ಯಕಾರಿ ಮಂಡಳಿ ರಚಿಸದ ಎಐಎಫ್‌ಎಫ್ (ಅಖಿಲ ಭಾರತ ಫುಟ್ಬಾಲ್ ಒಕ್ಕೂಟ) ಅನ್ನು ಅಂತಾರಾಷ್ಟ್ರೀಯ ಫುಟ್ಬಾಲ್ ಒಕ್ಕೂಟ (ಫಿಫಾ) ನಿಷೇಧ ಮಾಡಿತ್ತು. ಸರಕಾರದ ಮಧ್ಯಪ್ರವೇಶ ಬಳಿಕ ನಿಷೇಧ ರದ್ದಾಗಿತ್ತು. ಬಳಿಕ ತುರ್ತಾಗಿ ಚುನಾವಣೆ ನಡೆಸಿ ಆಡಳಿತ ಮಂಡಳಿಯನ್ನು ರಚಿಸಲಾಗಿದೆ. ಈ ಎಲ್ಲ ಪ್ರಕ್ರಿಯೆಗಳ ನಡುವೆ ಸಾಕಷ್ಟು ಗೊಂದಲಗಳು ಸೃಷ್ಟಿಯಾಗಿದ್ದವು. ಅದೇ ಪರಿಸ್ಥಿತಿ ಭಾರತೀಯ ಒಲಿಪಿಂಕ್ ಸಂಸ್ಥೆಗೆ ಎದುರಾಗುವ ಸಾಧ್ಯತೆಗಳಿದ್ದು, ಸೂಕ್ತ ಕಾಲಕ್ಕೆ ಚುನಾವಣೆ ನಡೆಸದ ಕಾರಣ ನಿಷೇಧ ಹೇರುವುದಾಗಿ ಅಂತಾರಾಷ್ಟ್ರಿಯ ಒಲಿಂಪಿಕ್ಸ್ ಸಮಿತಿ ಎಚ್ಚರಿಕೆ ನೀಡಿದೆ.
ಭಾರತೀಯ ಒಲಿಂಪಿಕ್ಸ್ ಸಂಸ್ಥೆಗೆ ಇದು ಎರಡನೇ ಎಚ್ಚರಿಕೆಯಾಗಿದ್ದು, ಇನ್ನು ಕೆಲವು ವಾರಗಳಲ್ಲಿ ಚತುವಾರ್ಷಿಕ ಚುನಾವಣೆ ನಡೆಸಿದ್ದರೆ ನಿಷೇಧ ಹೇರುವುದು ಖಾತರಿ ಎಂದು ಹೇಳಿದೆ. ಚುನಾವಣೆ ನಡೆಸಲು ಇನ್ನೂ ಸಿದ್ಧತೆ ನಡೆಸಿಕೊಂಡಿರದ ಭಾರತೀಯ ಒಲಿಂಪಿಕ್ ಸಂಸ್ಥೆಗೆ ಈ ನಿರ್ಧಾರದಿಂದ ಆತಂಕ ಎದುರಾಗಿದೆ.
ಆಡಳಿತ ಮಂಡಳಿ ರಚನೆಯಾಗದ ಕಾರಣ, ೨೦೨೩ರ ಮೇ ತಿಂಗಳಲ್ಲಿ ಮುಂಬಯಿಯಲ್ಲಿ ಆಯೋಜನೆಗೊಂಡಿದ್ದ ವಾರ್ಷಿಕ ಸಭೆಯಲ್ಲಿ ಮುಂದೂಡಿಕೆ ಮಾಡಿದೆ. ಈ ವಿಚಾರದಲ್ಲಿ ಮತ್ತೊಂದು ಎಚ್ಚರಿಕೆಯನ್ನು ನೀಡಿದ್ದು, ಆಂತರಿಕ ಅಸಮ್ಮತಿ, ಕಾನೂನು ತೊಡಕುಗಳು ಹಾಗೂ ಆಡಳಿತಾತ್ಮಕ ಅಸಮರ್ಪಕತೆಯ ಹಿನ್ನೆಲೆಯಲ್ಲಿ ನಿಷೇಧ ಹೇರಲಾಗುವುದು ಎಂದು ಐಒಸಿ ಎಚ್ಚರಿಕೆ ನೀಡಿದೆ.
ಭಾರತೀಯ ಒಲಿಂಪಿಕ್ ಸಮಿತಿಯ ಚುನಾವಣೆ ೨೦೨೧ರ ಡಿಸೆಂಬರ್‌ನಲ್ಲಿ ನಡೆಯಬೇಕಾಗಿತ್ತು. ಅದರೆ, ರಾಷ್ಟ್ರೀಯ ಕ್ರೀಡಾ ನೀತಿಯ ನಿಯಮಗಳನ್ನು ಉಲ್ಲಂಘನೆ ಮಾಡಿರುವ ಹಿನ್ನೆಲೆಯಲ್ಲಿ ಚುನಾವಣೆ ನಡೆಸಲು ಸುಪ್ರೀಮ್ ಕೋರ್ಟ್ ಅಸಮ್ಮತಿ ಸೂಚಿತ್ತು. ಹೀಗಾಗಿ ಹಂಗಾಮಿ ಆಡಳಿತಗಾರರು ಸಮಿತಿಯನ್ನು ನಿರ್ವಹಿಸುತ್ತಿದ್ದಾರೆ. ಇದರಿಂದ ಭಾರತದ ಕ್ರೀಡಾ ಕ್ಷೇತ್ರಕ್ಕೆ ಹಿನ್ನಡೆ ಉಂಟಾಗುತ್ತಿದೆ.
ಇದನ್ನೂ ಓದಿ | AIFF BAN | ನಿಷೇಧ ತೆರವಾದ ಬಳಿಕ ಅಖಿಲ ಭಾರತ ಒಕ್ಕೂಟಕ್ಕೆ ಬಿತ್ತು 14 ಲಕ್ಷ ರೂಪಾಯಿ ದಂಡ