Site icon Vistara News

ind vs wi : ಅಪಾಯದಲ್ಲಿದೆ ಭಾರತದ ಸರಣಿ ಗೆಲುವಿನ ದಾಖಲೆ

Team india

ಬಾರ್ಬಡೋಸ್​: ವೆಸ್ಟ್​ ಇಂಡೀಸ್ ವಿರುದ್ಧ (ind vs wi) ನಡೆಯುತ್ತಿರುವ ಟಿ20 ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಸೋತಿರುವ ಭಾರತ ತಂಡದ ಕಳಪೆ ದಾಖಲೆಗಳನ್ನು ಸೃಷ್ಟಿಸಿಕೊಳ್ಳುತ್ತಿದೆ. ಐದು ಪಂದ್ಯಗಳ ಸರಣಿಯಲ್ಲಿ ಮೊದಲೆರಡು ಪರಾಭವ ಅನುಭವಿಸಿರುವ ಟೀಮ್ ಇಂಡಿಯಾ ಸರಣಿ ಸೋಲಿನ ಅಂಚಿನಲ್ಲಿದೆ. ಈ ಮೂಲಕ ಸತತ ಸರಣಿ ಗೆಲುವಿನ ದಾಖಲೆಯನ್ನು ಕಳೆದುಕೊಳ್ಳುವ ಸಾಧ್ಯತೆಗಳಿವೆ. 2021ರಲ್ಲಿ ಶ್ರೀಲಂಕಾ ವಿರುದ್ಧ ಭಾರತ ತಂಡ ಕೊನೆಯ ಬಾರಿ ಸರಣಿ ಸೋತಿತ್ತು. ಎರಡನೇ ತಂಡವು ಶ್ರೀಲಂಕಾ ಪ್ರವಾಸ ಕೈಗೊಂಡು ಟಿ20 ಸರಣಿಯಲ್ಲಿ ಸೋತಿತ್ತು. ಈಗ, ಹಾರ್ದಿಕ್ ಪಾಂಡ್ಯ ಮತ್ತು ತಂಡವು ಮತ್ತೆ ಅದೇ ಗತಿಯನ್ನು ಎದುರಿಸುತ್ತಿದೆ. ವೆಸ್ಟ್ ಇಂಡೀಸ್ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಸೋಲು ಅನುಭವಿಸಿದರೆ ಟೀಂ ಇಂಡಿಯಾ ಎರಡು ವರ್ಷಗಳ ಬಳಿಕ ಮೊದಲ ಬಾರಿಗೆ ಸರಣಿ ಸೋಲನುಭವಿಸಲಿದೆ. ವಿಂಡೀಸ್ ವಿರುದ್ಧ ಇದು 6 ವರ್ಷಗಳಲ್ಲಿ ಭಾರತದ ಮೊದಲ ಸರಣಿ ಸೋಲು ಎನಿಸಿಕೊಳ್ಳಲಿದೆ.

ಇದನ್ನೂ ಓದಿ : World Cup 2023 : ಪಾಕ್​ ತಂಡಕ್ಕೆ ಇನ್ನೂ ಅಭದ್ರತೆ; ಪರಿಶೀಲನೆಗೆ ಬರುತ್ತದಂತೆ ನಿಯೋಗ!

ಮೊದಲ ಎರಡು ಪಂದ್ಯಗಳು ಭಾರತ ತಂಡದ ಯೋಜನೆಯ ಪ್ರಕಾರ ನಡೆಯಲಿಲ್ಲ. ಮೊದಲ ಟಿ20ಯಲ್ಲಿ ಜೇಸನ್ ಹೋಲ್ಡರ್ ಮಿಂಚಿದರೆ, 2ನೇ ಟಿ20ಯಲ್ಲಿ ನಿಕೋಲಸ್ ಪೂರನ್ ಹೀರೋ ಆದರೂ. ಭಾರತದ ತಂಡದ ನಿರ್ಧಾರವೂ ಕೈಕೊಟ್ಟಿತು. ಇದರೊಂದಿಗೆ 5 ಪಂದ್ಯಗಳ ಸರಣಿಯಲ್ಲಿ ಭಾರತ 0-2 ಅಂತರದಲ್ಲಿ ಹಿನ್ನಡೆ ಅನುಭವಿಸಿದೆ. ಗಯಾನಾದಲ್ಲಿ ಮತ್ತೊಂದು ಸೋಲು ಎದುರಾದರೆ ಭಾರತ ತಂಡವು ಅಪರೂಪದ ಟಿ 20 ಸರಣಿ ದಾಖಲೆಯನ್ನು ಕಳೆದುಕೊಳ್ಳಲಿದೆ.

ವಿಂಡೀಸ್​ ವಿರುದ್ಧವೇ ದಾಖಲೆ ಆರಂಭ

ಅಚ್ಚರಿಯೆಂದರೆ ಭಾರತ ತಂಡದ ಗೆಲುವಿನ ಓಟವು ವೆಸ್ಟ್ ಇಂಡೀಸ್ ವಿರುದ್ಧ ತವರಿನಲ್ಲಿಯೇ ಪ್ರಾರಂಭವಾಗಿತ್ತು. ವಿಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ಭಾರತ 3-0 ಅಂತರದ ಕ್ಲೀನ್​ ಸ್ವೀಪ್ ಸಾಧನೆ ಮಾಡಿತ್ತು. ಏಷ್ಯಾ ಕಪ್ ಟಿ 20 ಅಥವಾ ಟಿ 20 ವಿಶ್ವಕಪ್ ಸೋಲು ಹೊರತುಪಡಿಸಿ ಭಾರತ ತಂಡದ್ವಿಪಕ್ಷೀಯ ಸರಣಿಗಳಲ್ಲಿ ಎಲ್ಲಾ ತಂಡಗಳ ವಿರುದ್ಧ ಉತ್ತಮ ರೆಕಾರ್ಡ್ ಕಾಯ್ದುಕೊಂಡಿದೆ.

ಕಳೆದ ಟಿ20 ಸರಣಿಯಲ್ಲಿ ಭಾರತ 2-1 ಅಂತರದಲ್ಲಿ ನ್ಯೂಜಿಲೆಂಡ್ ವಿರುದ್ಧ ಜಯ ಸಾಧಿಸಿತ್ತು. ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಭಾರತ ಈವರೆಗೆ 8 ಪಂದ್ಯಗಳನ್ನು ಗೆದ್ದಿದ್ದು ಮತ್ತು 4 ಪಂದ್ಯಗಳಲ್ಲಿ ಸೋಲು ಕಂಡಿದೆ. ಇದರಲ್ಲಿ ಪ್ರಸ್ತುತ ಸರಣಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಎರಡು ಪಂದ್ಯಗಳು ಸೇರಿವೆ.

ಭಾರತ ತಂಡದ ತಪ್ಪೇನು?

Exit mobile version