ರಾಜ್ಕೋಟ್: ಇಂಗ್ಲೆಂಡ್(IND vs ENG) ವಿರುದ್ಧ ಸಾಗುತ್ತಿರುವ ಮೂರನೇ ಟೆಸ್ಟ್(India vs England 3rd Test) ಪಂದ್ಯದಲ್ಲಿ ಅಜೇಯ ಶತಕ ಬಾರಿಸಿ ಸಂಭ್ರಮಿಸಿದ ಟೀಮ್ ಇಂಡಿಯಾದ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್(Yashasvi Jaiswal) ಸದ್ಯ 2024ರ ಸಾಲಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ.
ಜೈಸ್ವಾಲ್ಗೂ ಮುನ್ನ ಅಗ್ರ ಸ್ಥಾನದಲ್ಲಿ ನ್ಯೂಜಿಲ್ಯಾಂಡ್ನ ಅನುಭವಿ ಆಟಗಾರ ಕೇನ್ ವಿಲಿಯಮ್ಸನ್ ಕಾಣಿಸಿಕೊಂಡಿದ್ದರು. ವಿಲಿಯಮ್ಸನ್ ಈ ವರ್ಷದಲ್ಲಿ 6 ಇನಿಂಗ್ಸ್ ಆಡಿ 486 ರನ್ ಕಲೆಹಾಕಿದ್ದಾರೆ. ಇದೀಗ ಜೈಸ್ವಾಲ್ 10 ಇನಿಂಗ್ಸ್ನಿಂದ 535 ರನ್ ಬಾರಿಸಿ ಅಗ್ರಸ್ಥಾನ ಪಡೆದಿದ್ದಾರೆ. ವಿಲಿಯಮ್ಸನ್ 2ನೇ ಸ್ಥಾನಕ್ಕೆ ಕುಸಿದಿದ್ದಾರೆ. 11 ಇನಿಂಗ್ಸ್ ಆಡಿ 416 ರನ್ ಬಾರಿಸಿರುವ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮ ಅವರು ಮೂರನೇ ಸ್ಥಾನದಲ್ಲಿದ್ದಾರೆ.
ಇಲ್ಲಿನ ನಿರಂಜನ್ ಶಾ ಕ್ರೀಡಾಂಗಣದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ 3 ನೇ ಟೆಸ್ಟ್ ಪಂದ್ಯದಲ್ಲಿ (IND vsENG) ಯಶಸ್ವಿ ಜೈಸ್ವಾಲ್ ತಮ್ಮ ಮೂರನೇ ಟೆಸ್ಟ್ ಶತಕ ಪೂರೈಸಿದ್ದಾರೆ. ಜೈಸ್ವಾಲ್ (Yashasvi Jaiswal) 122 ಎಸೆತಗಳನ್ನು ತೆಗೆದುಕೊಳ್ಳುವ ಮೂಲಕ ತಮ್ಮ ರೋಚಕ ಮೂರಂಕಿ ಮೊತ್ತವನ್ನು ಪೂರ್ಣಗೊಳಿಸಿದರು. ಈ ಮೂಲಕ 3ನೇ ಇನ್ನಿಂಗ್ಸ್ನಲ್ಲಿ ಪ್ರವಾಸಿ ಆಂಗ್ಲರ ಬಳಗದ ಬೌಲಿಂಗ್ ದಾಳಿಯನ್ನು ಪುಡಿಗಟ್ಟಿದರು. ಇದೇ ವೇಳೆ ಜೈಸ್ವಾಲ್ ಹೊಸ ದಾಖಲೆಯನ್ನು ಮಾಡಿದರು. ಅದೂ ವಿರಾಟ್ ಕೊಹ್ಲಿ (Virat Kohli) ಬಳಿಕ ಈ ಸಾಧನೆ ಮಾಡಿದ ಆಟಗಾರ ಎಂಬ ಖ್ಯಾತಿ ಪಡೆದುಕೊಂಡರು.
ಜೈಸ್ವಾಲ್ ಶತಕದ ಬಳಿಕ ಇಂಗ್ಲೆಂಡ್ ವಿರುದ್ಧದ ಹಾಲಿ ಸರಣಿಯಲ್ಲಿ 400 ರನ್ಗಳ ಗಡಿ ದಾಟಿದರು. ಅಲ್ಲದೆ ಅವರು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ ನಂತರ 400ಕ್ಕೂ ಹೆಚ್ಚು ರನ್ ಗಳಿಸಿದ ಭಾರತದ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಇದನ್ನೂ ಓದಿ Cheteshwar Pujara: ದೇಶೀಯ ಕ್ರಿಕೆಟ್ನಲ್ಲಿ 63ನೇ ಶತಕ ಬಾರಿಸಿದ ಚೇತೇಶ್ವರ್ ಪೂಜಾರ
ಆರಂಭದಲ್ಲಿ ಯಶಸ್ವಿ ಜೈಸ್ವಾಲ್ ಕ್ಲಾಸಿಕ್ ಟೆಸ್ಟ್ ಶೈಲಿಯಲ್ಲಿ ಎಚ್ಚರಿಕೆಯಿಂದ ಇನಿಂಗ್ಸ್ ಆರಂಭಿಸಿದರು. ಅವರ ಆರಂಭಿಕ ಪಾಲುದಾರ ಮತ್ತು ನಾಯಕ ರೋಹಿತ್ ಶರ್ಮಾ ಅಬ್ಬರಿಸಲು ಯತ್ನಿಸಿ ಔಟಾದರು. ಆದರೆ ಜೈಸ್ವಾಲ್ ತಮ್ಮ ಮೊದಲ 39 ಎಸೆತಗಳಲ್ಲಿ ಕೇವಲ 9 ರನ್ ಗಳಿಸಿದರು. ಆದರೆ, ಚಹಾ ವಿರಾಮಕ್ಕೆ ಮೊದಲು ರೋಹಿತ್ ಔಟ್ ಆದ ನಂತರ 22 ವರ್ಷದ ಆಟಗಾರ ವೇಗವನ್ನು ಬದಲಾಯಿಸಿದರು. ಬೌಂಡರಿ, ಸಿಕ್ಸರ್ಗಳ ಸುರಿಮಳೆ ಸುರಿಸಿದರು. ಸದ್ಯ ಭಾರತ ದ್ವಿತೀಯ ಇನಿಂಗ್ಸ್ನಲ್ಲಿ 2 ವಿಕೆಟ್ ನಷ್ಟಕ್ಕೆ 196 ರನ್ ಬಾರಿಸಿದ್ದು, ಒಟ್ಟಾರೆಯಾಗಿ 322 ರನ್ಗಳ ಮುನ್ನಡೆ ಪಡೆದುಕೊಂಡಿದೆ. 126 ರನ್ಗಳ ಮುನ್ನಡೆಯೊಂದಿಗೆ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಭಾರತ ಉತ್ತಮವಾಗಿ ಬ್ಯಾಟ್ ಮಾಡಿ ಪ್ರಾಬಲ್ಯ ಸಾಧಿಸಿದೆ.