Site icon Vistara News

IND vs WI ODI | ವಿಜಯಕ್ಕಾಗಿ ಕೊನೇ ಹತ್ತು ಓವರ್‌ಗಳಲ್ಲಿ ಶತಕ ಬಾರಿಸಿತ್ತು ಭಾರತ, ಇದೂ ಒಂದು ದಾಖಲೆ

IND vs WI ODI

ಪೋರ್ಟ್‌ ಆಫ್‌ ಸ್ಪೇನ್‌: ವೆಸ್ಟ್‌ ಇಂಡೀಸ್‌ ವಿರುದ್ಧ (IND vs WI ODI) ರೋಚಕ ೨ ವಿಕೆಟ್‌ಗಳ ಜಯ ಸಾಧಿಸಿದ ಭಾರತ ತಂಡ ಗೆಲುವಿಗಾಗಿ ಕೊನೇ ೧೦ ಓವರ್‌ಗಳಲ್ಲಿ ೧೦೦ ರನ್‌ ಮಾಡಿತ್ತು. ಇದು ಭಾರತ ತಂಡ ಚೇಸಿಂಗ್‌ ಜಯದ ವೇಳೆ ಗಳಿಸಿದ ಗರಿಷ್ಠ ರನ್‌.

೩೧೨ ರನ್‌ಗಳ ರನ್‌ ಚೇಸ್ ವೇಳೆ ಭಾರತ ತಂಡ ೪೦ ಓವರ್‌ ಮುಕ್ತಾಯಗೊಂಡಾಗ ೫ ವಿಕೆಟ್‌ ನಷ್ಟಕ್ಕೆ ೨೧೨ ರನ್ ಬಾರಿಸಿತ್ತು. ಈ ವೇಳೆ ಟೀಮ್‌ ಇಂಡಿಯಾ ಸೋಲಿನ ಭೀತಿಗೆ ಸಿಲುಕಿತ್ತು. ಪ್ರಮುಖ ಐದು ವಿಕೆಟ್‌ಗಳು ಉರುಳಿದ್ದ ಕಾರಣ ಗೆಲುವು ಕಷ್ಟ ಎನಿಸಿತ್ತು. ಈ ವೇಳೆ ಸಿಡಿದೆದ್ದ ಅಕ್ಷರ್ ಪಟೇಲ್‌ ೨೭ ಎಸೆತಗಳಿಗೆ ಅರ್ಧ ಶತಕ ಬಾರಿಸುವ ಜತೆಗೆ 35 ಎಸೆತಕ್ಕೆ ೫೪ ರನ್‌ ಬಾರಿಸಿದ್ದರು. ಇವರ ಸ್ಫೋಟಕ ಬ್ಯಾಟಿಂಗ್‌ ನೆರವಿನಿಂದ ಭಾರತ ತಂಡ ಇನ್ನೂ ೨ ಎಸೆತಗಳು ಬಾಕಿ ಇರುವಂತೆಯೇ ಗೆಲುವು ಕಂಡಿತ್ತು.

ಕೊನೇ ೧೦ ಓವರ್‌ಗಳಲ್ಲಿ ಭಾರತ ತಂಡಕ್ಕೆ ಗೆಲುವಿಗಾಗಿ ೧೦೦ ರನ್ ಬೇಕಾಗಿತ್ತು. ಆದರೆ ಭಾರತ ತಂಡ ೫೮ ಎಸೆತಗಳಲ್ಲಿಯೇ ೧೦೦ ರನ್‌ ಬಾರಿಸುವುದರೊಂದಿಗೆ ೩೧೨ ರನ್‌ಗ ಗುರಿಯನ್ನು ಭೇದಿಸಿತು. ಇದರೊಂದಿಗೆ ರನ್‌ ಚೇಸ್ ಜಯದ ವೇಳೆ ಕೊನೇ ೬೦ ಎಸೆತಗಳಲ್ಲಿ ಗರಿಷ್ಠ ರನ್‌ ಬಾರಿಸಿದ ೪ನೇ ತಂಡ ಎನಿಸಿಕೊಂಡಿತು.

ನಾಲ್ಕು ತಂಡಗಳ ಪಟ್ಟಿ ಇಂತಿವೆ

ರನ್‌ತಂಡವಿರುದ್ಧತಾಣವರ್ಷ
109ಪಾಕಿಸ್ತಾನಬಾಂಗ್ಲಾದೇಶಮೀರ್‌ಪುರ್‌2014
102ನ್ಯೂಜಿಲೆಂಡ್‌ಆಸ್ಟ್ರೇಲಿಯಾಕ್ರೈಸ್ಟ್‌ಚರ್ಚ್‌2005
101ನ್ಯೂಜಿಲೆಂಡ್‌ಐರ್ಲೆಂಡ್‌ಡಬ್ಲಿನ್‌ 2022
100ಭಾರತವೆಸ್ಟ್‌ ಇಂಡೀಸ್ಪೋರ್ಟ್‌ ಆಫ್‌ ಸ್ಪೇನ್‌2022

ಇದನ್ನೂ ಓದಿ | India vs West Indies 2nd ODI| ಅಕ್ಷರ್ ಪಟೇಲ್‌ ಅಬ್ಬರ, ವೆಸ್ಟ್‌ ಇಂಡೀಸ್‌ ವಿರುದ್ಧ ಭಾರತಕ್ಕೆ ಜಯ

Exit mobile version