ಪ್ಯಾರಿಸ್: ಟೀಮ್ ಇಂಡಿಯಾದ ಮಾಜಿ ನಾಯಕ ಹಾಗೂ ಆಟಗಾರ ಮಹೇಂದ್ರ ಸಿಂಗ್ ಧೋನಿ(MS dhoni) ಅವರು ತಮ್ಮ ಕುಟುಂಬದ ಜತೆ ಪ್ಯಾರಿಸ್ ಪ್ರವಾಸದಲ್ಲಿದ್ದಾರೆ. ಇಲ್ಲಿನ ಪ್ರಸಿದ್ಧ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಾ ತಮ್ಮ ಪ್ರವಾಸವನ್ನು ಎಂಜಾಯ್ ಮಾಡುತ್ತಿದ್ದಾರೆ. ಕಳೆದ ವಾರ ಧೋನಿ ಅವರ ಪತ್ನಿ ಸಾಕ್ಷಿ ಅವರು ಪ್ರವಾಸದ ಫೋಟೊಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಇದೀಗ ಅಭಿಮಾನಿಯೊಬ್ಬ(MS dhoni Fan) ಧೋನಿ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದಾನೆ. ಈ ಫೋಟೊ ವೈರಲ್ ಆಗಿದೆ.
ಧೋನಿ ಅವರು ಪ್ಯಾರಿಸ್ನ ಪ್ರವಾಸಿ ಸ್ಥಳವೊಂದಕ್ಕೆ ಭೇಟಿ ನೀಡಿದ ಸಂದರ್ಭ ಅವರ ಅಭಿಮಾನಿಯೊಬ್ಬ ಧೋನಿ ಅವರ ಕಾಲಿಗೆ ಬಿದ್ದಿದ್ದಾನೆ. ಈ ವೇಳೆ ಧೋನಿ ಆತನಿಗೆ ಆಶೀರ್ವಾದ ಮಾಡಿದ್ದಾರೆ. ಈ ಫೋಟೊವನ್ನು ಕಂಡ ಧೋನಿ ಅಭಿಮಾನಿಗಳು ನೀವು ಜಿಜವಾಗಿಯೂ ಅದೃಷ್ಟಶಾಲಿ ಎಂದು ಕಮೆಂಟ್ ಮಾಡಿದ್ದಾರೆ.
ಧೋನಿ(MS Dhoni) ಯಾವಾಗಲೂ ತಮ್ಮ ವ್ಯಕ್ತಿತ್ವದಿಂದ ಅವರ ಅಭಿಮಾನಿಗಳ ಹೃದಯವನ್ನು ಗೆಲ್ಲುತ್ತಾರೆ. ಹೀಗಾಗಿ ಧೋನಿ ಎಂದರೆ ಅಭಿಮಾನಿಗಳಿಗೊಂದು ಎಮೋಷನ್ (ಭಾವನೆ). ಅವರು ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು(MS Dhoni Fan) ಹೊಂದಿದ್ದಾರೆ. ಅವರ ಭೇಟಿಗಾಗಿ ಅಭಿಮಾನಿಗಳು ಚಾತಕ ಪಕ್ಷಿಗಳಂತೆ ಕಾದು ಕುಳಿತಿರುತ್ತಾರೆ. ಕೆಲ ಅಭಿಮಾನಿಗಳು ಧೋನಿಯನ್ನು ಭೇಟಿಯಾಗಿ ಅವರಿಗೆ ವಿಶೇಷ ಉಡುಗೊರೆಯನ್ನು ನೀಡುತ್ತಾರೆ.
ಧೋನಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿ ಕೆಳವು ವರ್ಷಗಳಾಗಿವೆ. ಕೇವಲ ಐಪಿಎಲ್ ಟೂರ್ನಿಯಲ್ಲಿ(IPL 2024) ಮಾತ್ರ ಆಡುತ್ತಿದ್ದಾರೆ. ಈ ಆವೃತ್ತಿಯಲ್ಲಿ ಧೋನಿ ಅವರು ಐಪಿಎಲ್ಗೆ ವಿದಾಯ ಹೇಳಲಿದ್ದಾರೆ ಎನ್ನಲಾಗಿತ್ತು. ಆದರೆ ಧೋನಿ ಇದುವರೆಗೆ ತಮ್ಮ ನಿವೃತ್ತಿ ಪ್ರಕಟಿಸಿಲ್ಲ. ಮುಂದಿನ ಬಾರಿಯೂ ಅವರು ಆಡಲಿದ್ದಾರೆ ಎಂದು ಫ್ರಾಂಚೈಸಿ ಮೂಲಗಳು ಮಾಹಿತಿ ನೀಡಿದೆ.
ಇದನ್ನೂ ಓದಿ MS Dhoni’s last-ball Heroics: ಧೋನಿ ಮಿಂಚಿನ ವೇಗದ ರನೌಟ್; ಭಾರತಕ್ಕೆ 1 ರನ್ ರೋಚಕ ಜಯ; ಇದು ಮರೆಯಲಾಗದ ನೆನಪು
ಭಾರತ ಸುತ್ತುವ ಆಸೆ ಇದೆ
ಕಳೆದ ವರ್ಷ ಸಂದರ್ಶನವೊಂದರಲ್ಲಿ ಅಭಿಮಾನಿಯೊಬ್ಬರು ಪ್ರವಾಸದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ವೇಳೆ, “ಪ್ರಮಾಣಿಕವಾಗಿ ಹೇಳಬೇಕೆಂದರೆ ನಾನು ಹೆಚ್ಚು ಪ್ರಯಾಣ ಮಾಡಿದ್ದೇನೆ. ಆದರೆ, ಅದು ಪ್ರವಾಸವಲ್ಲ. ನನ್ನ ಕ್ರಿಕೆಟ್ ಆಡುವ ಸಮಯದಲ್ಲಿ ಮಾಡಿದ ಪ್ರಯಾಣ. ಕ್ರಿಕೆಟ್ ಸರಣಿಗಾಗಿ ನಾನು ಹಲವು ದೇಶಕ್ಕೆ ಭೇಟಿ ನೀಡಿದ್ದೇನೆ. ಆದರೆ ಅಲ್ಲಿರುವ ಯಾವುದೇ ಪ್ರವಾಸಿ ತಾಣಗಳಿಗೆ ಹೋಗಿಲ್ಲ. ಕ್ರಿಕೆಟ್ ಆಡಿದ ಬಳಿಕ ನೇರವಾಗಿ ಭಾರತಕ್ಕೆ ಬರುತ್ತಿದೆ. ನನ್ನ ಪತ್ನಿಗೆ ಟ್ರಾವೆಲ್ ಎಂದರೆ ಬಲು ಇಷ್ಟ. ಕ್ರಿಕೆಟ್ ನಿವೃತ್ತಿ ಬಳಿಕ ನಾನು ಖಂಡಿತಾ ಪ್ರವಾಸ ಮಾಡುವ ಎಲ್ಲ ಯೋಜನೆಗಳನ್ನು ಈಗಾಗಲೇ ರೂಪಿಸಿದ್ದೇನೆ. ಭಾರತವೇ ನನ್ನ ಮೊದಲ ಆಯ್ಕೆ ಮತ್ತು ಆದ್ಯತೆ ಎಂದು ಧೋನಿ ಹೇಳಿದ್ದರು. “ಭಾರತದಲ್ಲಿ ಹಲವು ಸುಂದರ ತಾಣಗಳಿವೆ. ನಾನು ನನ್ನ ಮೊದಲ ಪ್ರವಾಸವನ್ನು ನಮ್ಮ ದೇಶದಲ್ಲೇ ಮಾಡಿ ಇಲ್ಲಿನ ಪ್ರವಾಸೋದ್ಯಮಕ್ಕೆ ಬೆಂಬಲ ಸೂಚಿಸುತ್ತೇನೆ” ಎಂದು ಧೋನಿ ಅಂದು ಸಂದರ್ಶನವೊಂದರಲ್ಲಿ ಹೇಳಿದ್ದರು.