Site icon Vistara News

MS Dhoni : ಇವರು ಧೋನಿಯ ಅದೃಷ್ಟವಂತ ಅಭಿಮಾನಿ

MS Dhoni

ಬೆಂಗಳೂರು: ಎಂಎಸ್ ಧೋನಿ ಜಗತ್ತು ಕಂಡ ಅತಿದೊಡ್ಡ ಕ್ರಿಕೆಟ್ ಐಕಾನ್​ಗಳಲ್ಲಿ ಒಬ್ಬರು. ಅಭಿಮಾನಿಗಳು ತಮ್ಮ ಹೃದಯದಲ್ಲಿ ಧೋನಿಗೆ ದೊಡ್ಡ ಸ್ಥಾನ ನೀಡಿದ್ದಾರೆ. ನಿವೃತ್ತಿಯ ನಂತರವೂ ಅವರ ಅಭಿಮಾನಿಗಳು ಅವರು ಹೋದಲ್ಲೆಲ್ಲಾ ಅವರನ್ನು ಹಿಂಬಾಲಿಸುತ್ತಾರೆ. ಧೋನಿ ಕೂಡ ಸಾಮಾನ್ಯವಾಗಿ ಅವರೆಲ್ಲರನ್ನೂ ಭೇಟಿಯಾಗುವಷ್ಟು ಸೌಹಾರ್ದಯುತ ಮತ್ತು ತಾಳ್ಮೆಯಿಂದಿರುತ್ತಾರೆ. ಇತ್ತೀಚೆಗೆ, ಧೋನಿ ತಮ್ಮ ಅಭಿಮಾನಿಯೊಬ್ಬರ ಹುಟ್ಟುಹಬ್ಬದ ಸಂತೋಷಕೂಟದಲ್ಲಿ ಭಾಗವಹಿಸಿದ್ದರು ಎಂಬುದು ಸಾಮಾಜಿಕ ಜಾಲತಾಣಗಳ ಮೂಲಕ ಬಹಿರಂಗೊಂಡಿದೆ. ಅವರನ್ನು ಕ್ರಿಕೆಟ್​ನ ಅತ್ಯಂತ ಅದೃಷ್ಟವಂತ ಎಂದು ಕರೆಯಲಾಗಿದೆ.

ವಿಡಿಯೊದಲ್ಲಿ ಧೋನಿ ಇತರ ಅತಿಥಿಗಳೊಂದಿಗೆ ಅಭಿಮಾನಿಗಳ ಕೈಯಿಂದ ಕೇಕ್ ತಿನ್ನುತ್ತಿರುವುದನ್ನು ಕಾಣಬಹುದು. ಅಭಿಮಾನಿ ಕೂಡ ವೀಡಿಯೊಗೆ “ಭೂಮಿಯ ಮೇಲಿನ ಅತ್ಯಂತ ಅದೃಷ್ಟಶಾಲಿ ವ್ಯಕ್ತಿ” ಎಂದು ಶೀರ್ಷಿಕೆ ಕೊಟ್ಟುಕೊಂಡಿದ್ದಾರೆ. ಏತನ್ಮಧ್ಯೆ, ಸುಬೋಧ್ ಸಿಂಗ್ ಕುಶ್ವಾಹ ಈ ವೀಡಿಯೊವನ್ನು ಹಂಚಿಕೊಂಡಿದ್ದು, ಅವರು ಧೋನಿ ಬಗ್ಗೆ ಸಕ್ರಿಯವಾಗಿ ಪೋಸ್ಟ್ ಮಾಡುತ್ತಿರುತ್ತಾರೆ.

ಧೋನಿಯ ಮೊಣಕಾಲಿನ ಎಕ್ಸ್-ರೇ ಕಂಡು ಅಭಿಮಾನಿಗಳಿಗೆ ಹೆಚ್ಚಿದ ಆತಂಕ!

ಬಹುನಿರೀಕ್ಷಿತ 17ನೇ ಆವೃತ್ತಿಯ ಆಟಗಾರರ ಮಿನಿ ಹರಾಜು ಇದೇ ಡಿಸೆಂಬರ್​ 19 ರಂದು ದುಬೈನಲ್ಲಿ ನಡೆಯಲಿದೆ. ಎಲ್ಲ ಫ್ರಾಂಚೈಸಿಗಳು ಆಟಗಾರರ ಖರೀದಿಗೆ ಸಿದ್ಧತೆ ನಡೆಸುತ್ತಿರುವ ಬೆನ್ನಲ್ಲೇ ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ನಾಯಕ ಮಹೇಂದ್ರ ಸಿಂಗ್​ ಧೋನಿ(MS Dhoni) ಅವರ ಮೊಣಕಾಲಿನ ಎಕ್ಸ್‌-ರೇ(Ms dhoni’s knee X-Ray) ಒಂದರ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಇದನ್ನೂ ಓದಿ : ಒಂದು ವಿಕೆಟ್ ಕಿತ್ತು 2 ದಿಗ್ಗಜ ಆಟಗಾರರ ದಾಖಲೆ ಸರಿಗಟ್ಟಿದ ಮಿಚೆಲ್ ಸ್ಟಾರ್ಕ್‌

ಧೋನಿ ಅವರ ಎಕ್ಸ್‌-ರೇ ಫೋಟೊ ಕಂಡ ಅವರ ಅಭಿಮಾನಿಗಳಿಗೆ ಚಿಂತೆಯೊಂದು ಮೂಡಿದ್ದು, ಧೋನಿ 2024ರ ಐಪಿಎಲ್​ ಆಡಲಿದ್ದಾರಾ ಎನ್ನುವ ಆತಂಕ ಕಾಡಲಾರಂಭಿಸಿದೆ. ವೈರಲ್​ ಆಗಿರುವ ಫೋಟೊದಲ್ಲಿ “ಇದು ಧೋನಿಯ ಮೊಣಕಾಲಿನ ಎಕ್ಸ್-ರೇ. ಮುರಿದು ಹೋಗಿರುವ ಈ ಮೂಳೆ ಸರಿಹೋಗಲು ಮತ್ತು ಅವರು ಚೇತರಿಸಿಕೊಳ್ಳಲು ಕನಿಷ್ಠ 9-10 ತಿಂಗಳುಗಳು ಬೇಕಾಗಬಹುದು” ಎಂದು ಬರೆಯಲಾಗಿದೆ.

ಅಸಲಿಗೆ ಇದು ಧೋನಿ ಅವರ ಮೊಣಕಾಲಿನ ಎಕ್ಸ್-ರೇ ಎನ್ನುವುದಕ್ಕೆ ಯಾವುದೇ ಸಾಕ್ಷಿಗಳಿಲ್ಲ. ಅಲ್ಲದೆ ಧೋನಿ ಅವರು ಈ ಫೋಟೊವನ್ನು ಕೂಡ ಹಂಚಿಕೊಂಡಿಲ್ಲ. ಐಪಿಎಲ್ ಹರಾಜು ಹತ್ತಿರ ಬರುತ್ತಿದ್ದು ಜತೆಗೆ 17ನೇ ಆವೃತ್ತಿಯ ಐಪಿಎಲ್​ ಧೋನಿ ಪಾಲಿಗೆ ಕೊನೆಯ ಐಪಿಎಲ್​ ಎನ್ನುವ ಮಾತುಗಳು ಕೂಡ ಕೇಳಿ ಬರುತ್ತಿದೆ. ಇದೇ ಕಾರಣಕ್ಕೆ ಧೋನಿ ಅಭಿಮಾನಿಗಳಲ್ಲಿ ಹೆಚ್ಚಿನ ಆತಂಕ ಮತ್ತು ಕುತೂಹಲ ಕೆರಳಿಸುವ ನಿಟ್ಟಿನಲ್ಲಿ ಕೆಲ ನೆಟ್ಟಿಗರು ಈ ರೀತಿ ಸುಳ್ಳು ಎಕ್ಸ್-ರೇ ಫೋಟೊ ಹಂಚಿಕೊಂಡು ಇದು ಧೋನಿಯ ಮೊಣಕಾಲಿನ ಎಕ್ಸ್-ರೇ ಎಂದು ಎಲ್ಲಡೆ ಶೇರ್​ ಮಾಡುತ್ತಿದ್ದಾರೆ.

ಈ ಬಾರಿ ನಿವೃತ್ತಿ ಖಚಿತ

ಮಹೇಂದ್ರ ಸಿಂಗ್​ ಧೋನಿ ಅವರು ಇದೇ ವರ್ಷ ನಡೆದ 16ನೇ ಆವೃತ್ತಿಯ ಐಪಿಎಲ್​ ಬಳಿಕ ವಿದಾಯ ಹೇಳುತ್ತಾರೆ ಎನ್ನಲಾಗಿತ್ತು. ಅದರಲ್ಲೂ ಚೆನ್ನೈ ಸೂಪರ್​ ಕಿಂಗ್ಸ್​ ಫೈನಲ್​ ತಲುಪಿದಾಗ ಅಭಿಮಾನಿಗಳಲ್ಲಿ ಧೋನಿ ಖಚಿತವಾಗಿ ತಮ್ಮ ನಿವೃತ್ತಿ ನಿರ್ಧಾರ ಘೋಷಿಸುತ್ತಾರೆ ಎಂದು ಬೇಸರಗೊಂಡಿದ್ದರು. ಆದರೆ ಧೋನಿ ಅವರು ಕಪ್​ ಗೆದ್ದ ಬಳಿಕ ಅಭಿಮಾನಿಗಳ ಒತ್ತಾಯದ ಮೇರೆಗೆ ನಾನು ಮುಂದಿನ ಬಾರಿಯ ಐಪಿಎಲ್​ನಲ್ಲಿ ಆಡುತ್ತೇನೆ ಎಂದು ಹೇಳಿದ್ದರು. ಆದರೆ ಈ ಬಾರಿಯ ಐಪಿಎಲ್​ ಬಳಿಕ ಅವರು ನಿವೃತ್ತಿ ಹೇಳುವುದು ಖಚಿತವಾಗಿದೆ

Exit mobile version