Site icon Vistara News

MS Dhoni | ಐಸಿಸಿ ಕಪ್​ ಗೆಲ್ಲಲು ಮಹೇಂದ್ರ ಸಿಂಗ್​ ಧೋನಿ ನೆರವು ಬಯಸಿದ ಬಿಸಿಸಿಐ; ವರದಿ

MS Dhoni

ನವದೆಹಲಿ: ಆಸ್ಟ್ರೇಲಿಯಾದಲ್ಲಿ ಕೊನೆಗೊಂಡ ಐಸಿಸಿ ಟಿ20 ವಿಶ್ವ ಕಪ್‌ 2022ರಲ್ಲೂ ಭಾರತ ಕ್ರಿಕೆಟ್​ ತಂಡ ಟ್ರೋಫಿ ಗೆಲ್ಲುವ ಕನಸು ನನಸಾಗಲಿಲ್ಲ. ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ 10 ವಿಕೆಟ್‌ಗಳ ಹೀನಾಯ ಸೋಲು ಅನುಭವಿಸುವ ಮೂಲಕ ಬರಿಗೈಯಲ್ಲಿ ಮರಳಿತು. ಇದೀಗ ಟೀಮ್​ ಇಂಡಿಯಾದ ಐಸಿಸಿ ಟ್ರೋಫಿಯ ಕನಸನ್ನು ನನಸು ಮಾಡುವ ಪಣತೊಟ್ಟಿರುವ ಬಿಸಿಸಿಐ ಮಾಜಿ ನಾಯಕ ಎಂ.ಎಸ್​. ಧೋನಿ(MS Dhoni) ಅವರ ಮೊರೆ ಹೋಗಲಿದೆ ಎಂದು ವರದಿಯೊಂದು ತಿಳಿಸಿದೆ.

ಮಹೇಂದ್ರ ಸಿಂಗ್ ಧೋನಿ ವಿಶ್ವ ಕ್ರಿಕೆಟ್ ಕಂಡಂತಹ ಅತ್ಯಂತ ಪ್ರಬುದ್ಧ, ಯಶಸ್ವಿ ನಾಯಕರಲ್ಲಿ ಒಬ್ಬರು. ಇವರ ನಾಯಕತ್ವದಲ್ಲಿ ಭಾರತ 2007ರ ಟಿ20 ವಿಶ್ವ ಕಪ್, 2011ರ ಏಕ ದಿನ ವಿಶ್ವ ಕಪ್ ಮತ್ತು 2013ರ ಚಾಂಪಿಯನ್ ಟ್ರೋಫಿ ಭಾರತ ತಂಡ ಗೆದ್ದಿತ್ತು. ಈ ಬಳಿಕ ಭಾರತ ಕ್ರಿಕೆಟ್​ ತಂಡ ಒಂದೂ ಐಸಿಸಿ ಟ್ರೋಫಿಯನ್ನು ಗೆದ್ದಿಲ್ಲ.

ದಿಪಕ್ಷೀಯ ಸರಣಿಯನ್ನು ಗೆದ್ದು ಬೀಗುತ್ತಿರುವ ಟೀಮ್​ ಇಂಡಿಯಾ ವಿಶ್ವದ ನಂ. 1 ಹಾಗೂ ಸಮರ್ಥ ತಂಡ ಎಂಬ ಹೆಗ್ಗಳಿಕೆ ಗಳಿಸಿದೆ. ಆದರೆ ಐಸಿಸಿ ಟೂರ್ನಿಯಲ್ಲಿ ಮಾತ್ರ ತೀರಾ ಕಳೆಪೆ ಮಟ್ಟದ ಪ್ರದರ್ಶನ ತೋರುವ ಮೂಲಕ ಹಿನ್ನಡೆ ಅನುಭವಿಸುತ್ತಿದೆ. ಮುಂದಿನ ವರ್ಷ ಭಾರತದಲ್ಲೇ ನಡೆಯಲಿರುವ ಏಕ ದಿನ ವಿಶ್ವ ಕಪ್​ ಟೂರ್ನಿಯನ್ನು ಮುಂದಿಟ್ಟು ಇದೀಗ ಬಿಸಿಸಿಐ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಳ್ಳು ಮುಂದಾಗಿದೆ. ಭಾರತ ಕ್ರಿಕೆಟ್​ ಕಂಡ ಶ್ರೇಷ್ಠ ನಾಯಕ ಮಹೇಂದ್ರ ಸಿಂಗ್​ ಧೋನಿ ಅವರ ಮುಂದಾಳತ್ವದಲ್ಲಿ ತಂಡದ ಸಂಯೋಜನೆ ಮತ್ತು ಮಾಸ್ಟರ್​ ಪ್ಲ್ಯಾನ್​ ರೂಪಿಸಲು ಬಿಸಿಸಿಐ ಧೋನಿ ನೆರವು ಕೇಳಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ | Sachin Tendulkar | ಕ್ರಿಕೆಟ್‌ ದೇವರ ಆಟದ ಗತ ವೈಭವದ ನೆನಪಿಸುವ ನವೆಂಬರ್‌ 15

Exit mobile version