Site icon Vistara News

MS Dhoni: ಎಸ್​ಬಿಐನಲ್ಲಿ ಕೆಲಸ ಆರಂಭಿಸಿದ ಮಹೇಂದ್ರ ಸಿಂಗ್​ ಧೋನಿ; ವಿಡಿಯೊ ವೈರಲ್​

MS Dhoni

ಮುಂಬಯಿ: ಟೀಮ್​ ಇಂಡಿಯಾದ ಆಟಗಾರ ಹಾಗೂ 2 ವಿಶ್ವಕಪ್​ ವಿಜೇತ ನಾಯಕ ಮಹೇಂದ್ರ ಸೀಂಗ್​ ಧೋನಿ(MS Dhoni) ಅವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಕ್ಕೆ ಬ್ರಾಂಡ್ ಅಂಬಾಸಿಡರ್(brand ambassador) ಆಗಿ ನೇಮಕಗೊಂಡಿದ್ದಾರೆ. ಸಾರ್ವಜನಿಕ ಕ್ಷೇತ್ರದಲ್ಲಿ ಅತಿದೊಡ್ಡ ಅಭಿಮಾನಿ ಬಳಗವನ್ನು ಹೋಂದಿರುವ ಧೋನಿ ಅವರನ್ನು ರಾಯಭಾರಿಯಾಗಿ ನೇಮಕ ಮಾಡಿರುವುದು ಸಂತಸ ತಂದಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(State Bank of India) ತನ್ನ ಪ್ರಕಟನೆಯಲ್ಲಿ ತಿಳಿಸಿದೆ.

ಅಂಬಾಸಿಡರ್ ಆಗಿರುವ ಧೋನಿ ಅವರು ಎಸ್​ಬಿಐನ ಮಾರ್ಕೆಟಿಂಗ್ ಮತ್ತು ಜಾಹೀರಾತಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಧೋನಿ ಒಳಗೊಂಡ ಮೊದಲ ಜಾಹಿರಾತು ಕೂಡ ಪ್ರಸಾರ ಕಂಡಿದೆ. ಇದರ ವಿಡಿಯೊವನ್ನು ಎಸ್​ಬಿಐ ತನ್ನ ಅಧಿಕೃತ ಟ್ವಿಟರ್ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದೆ.

“ಧೋನಿ ಅವರನ್ನು ನಮ್ಮ ಬ್ಯಾಂಕ್​ನ ಬ್ರಾಂಡ್ ಅಂಬಾಸಿಡರ್ ಆಗಿ ನೇಮಕಗೊಂಡಿರುವುದು ಸಂತಸ ತಂದಿದೆ. ಎಸ್‌ಬಿಐ ಜತೆಗಿನ ಧೋನಿ ಒಡನಾಟ ನಮ್ಮ ಬ್ರ್ಯಾಂಡ್‌ಗೆ ಹೊಸ ಹುರುಪು ನೀಡಲಿದೆ” ಎಂದು ಎಸ್‌ಬಿಐ ಅಧ್ಯಕ್ಷ ದಿನೇಶ್ ಖಾರಾ ಹೇಳಿದರು.

ಇದನ್ನೂ ಓದಿ MS Dhoni : ಧೋನಿ ಹಣ ಹಂಚುತ್ತಿದ್ದಾರೆ ಎಂದು ಮಹಿಳೆಯನ್ನು ನಂಬಿಸಿ 1 ವರ್ಷದ ಮಗುವಿನ ಅಪಹರಣ

ಅತಿದೊಡ್ಡ ವಾಣಿಜ್ಯ ಬ್ಯಾಂಕ್

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಠೇವಣಿಗಳು, ಶಾಖೆಗಳು, ಗ್ರಾಹಕರು ಮತ್ತು ಉದ್ಯೋಗಿಗಳ ವಿಷಯದಲ್ಲಿ ಅತಿದೊಡ್ಡ ವಾಣಿಜ್ಯ ಬ್ಯಾಂಕ್ ಆಗಿದೆ. ದೇಶದಲ್ಲೇ ಅತಿ ದೊಡ್ಡ ಸಾಲ ನೀಡುವ ಸಂಸ್ಥೆಯೂ ಆಗಿದ್ದು, ಇದುವರೆಗೆ 30 ಲಕ್ಷಕ್ಕೂ ಹೆಚ್ಚು ಭಾರತೀಯ ಕುಟುಂಬಗಳ ಮನೆ ಖರೀದಿ ಕನಸುಗಳನ್ನು ಈಡೇರಿಸಿದೆ. ನಂಬಿಕೆ ಮತ್ತು ನಾಯಕತ್ವದ ಮೌಲ್ಯಗಳನ್ನು ಪ್ರತಿಬಿಂಬಿಸುವ ತನ್ನ ಗ್ರಾಹಕರೊಂದಿಗೆ ಆಳವಾದ ಸಂಬಂಧಗಳನ್ನು ನಿರ್ಮಿಸುವ ಬ್ಯಾಂಕ್‌ನ ಬದ್ಧತೆಯನ್ನು ಸಂಕೇತಿಸುತ್ತದೆ ಎಂದು ಎಸ್‌ಬಿಐ ತಿಳಿಸಿದೆ.

ಇದನ್ನೂ ಓದಿ IND vs ENG: ಬುಮ್ರಾ ಬೌಲಿಂಗ್​ ಪ್ರದರ್ಶನ ಕೊಂಡಾಡಿದ ಪಾಕಿಸ್ತಾನದ ಮಾಜಿ ಸ್ಟಾರ್​ ವೇಗಿ

ಧೋನಿಯ ಹೆಸರಲ್ಲಿ ಮಗುವಿನ ಅಪಹರಣ

ಧೋನಿ ಹೆಸರನ್ನು ಬಳಸಿಕೊಂಡು ತಾಯಿಯೊಬ್ಬಳನ್ನು ವಂಚಿಸಿ ಆಕೆಯ ಹೆಣ್ಣು ಮಗುವನ್ನು ಅಪಹರಿಸಿದ ಘಟನೆ ಜಾರ್ಖಡ್​​ನ ರಾಂಚಿಯಲ್ಲಿ ನಡೆದಿತ್ತು. ಪೊಲೀಸರ ಪ್ರಕಾರ, ಅಪಹರಣಕಾರರು ಮಗುವಿನ ತಾಯಿಗೆ ಧೋನಿ ಬಡವರಿಗೆ ಹಣ ಮತ್ತು ಮನೆಗಳನ್ನು ವಿತರಿಸುತ್ತಿದ್ದಾರೆ ಎಂದು ಯಾಮಾರಿಸಿ ಮಗುವನ್ನು ಅಪಹರಣ ಮಾಡಿದ್ದರು.

ಈ ಘಟನೆ ಮಂಗಳವಾರ (ಅಕ್ಟೋಬರ್ 24) ನಡೆದಿದೆ. ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ. ಇದು ಪ್ರತ್ಯೇಕ ಕೃತ್ಯವೇ ಅಥವಾ ಮಕ್ಕಳನ್ನು ಅಪಹರಿಸುವಲ್ಲಿ ಭಾಗಿಯಾಗಿರುವ ಗ್ಯಾಂಗ್​​ನ ಯೋಜಿತ ಪಿತೂರಿಯೇ ಎಂದು ಕಂಡುಹಿಡಿಯಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.

ಮೂರು ದಿನಗಳ ಹಿಂದೆ ಮಧು ದೇವಿ ಎಂಬ ಮಹಿಳೆ ಇಬ್ಬರು ಮಕ್ಕಳೊಂದಿಗೆ ರಾಂಚಿಯ ಅಂಗಡಿಯೊಂದರಲ್ಲಿ ವಸ್ತುಗಳನ್ನು ಖರೀದಿ ಮಾಡುತ್ತಿದ್ದಾಗ ದುಷ್ಕರ್ಮಿಗಳು ಕೃತ್ಯ ಎಸಗಿದ್ದಾರೆ. ಬೈಕ್​​ನಲ್ಲಿ ಬಂದಿದ್ದ ಪುರುಷ ಮತ್ತು ಮಹಿಳೆ, ಧೋನಿ ಅಗತ್ಯವಿರುವವರಿಗೆ ಹಣವನ್ನು ನೀಡುತ್ತಿದ್ದಾರೆ ಎಂದು ಹೇಳಿದ್ದರು. ಅದನ್ನು ನಂಬಿದ್ದ ಮಧು ದೇವಿ ಅವರೊಂದಿಗೆ ಹೋಗಿದ್ದು ಈ ವೇಳೆ ಬೈಕ್​ನಲ್ಲಿ ಮಗುವಿನ ಸಮೇತ ಪರಾರಿಯಾಗಿದ್ದರು.

Exit mobile version