ರಾಂಚಿ: ಜುಲೈ 7 ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ(MS Dhoni Birthday) ಅವರ ಜನ್ಮದಿನ(dhoni birthday). ಅವರಿಗೆ 43ನೇ ವರ್ಷದ ಸಂಭ್ರಮ. ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳು(ms dhoni fans) ಸಾಮಾಜಿಕ ಜಾಲ ತಾಣದಲ್ಲಿ ಧೋನಿಗೆ ಹರಸಿ ಹಾರೈಸಿದ್ದಾರೆ. ಹೈದರಾಬಾದ್ನ ಅಭಿಮಾನಿಗಳು ಧೋನಿಯ ದೊಡ್ಡ ಕಟೌಟ್ ನಿಲ್ಲಿಸಿ ತಮ್ಮ ನೆಚ್ಚಿನ ಆಟಗಾರನ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ್ದಾರೆ.
ಧೋನಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ದೂರ ಉಳಿದಿದ್ದರೂ ಅವರ ಮೇಲಿನ ಕ್ರೇಜ್ ಮಾತ್ರ ಕಿಂಚಿತ್ತು ಕಡಿಮೆಯಾಗಿಲ್ಲ. ಅವರು ಕ್ರಿಕೆಟ್ ಆಡಬೇಕೆಂಬುವುದು ಅಭಿಮಾನಿಗಳ ಆಶಯವಾಗಿದೆ. ಇದಕ್ಕೆ ಈ ಬಾರಿಯ ಐಪಿಎಲ್ ಟೂರ್ನಿಯೇ ಉತ್ತಮ ನಿದರ್ಶನ. ಧೋನಿ ಅವರು ಈ ಬಾರಿಯ ಐಪಿಎಲ್ ಬಳಿಕ ನಿವೃತ್ತಿ ಘೋಷಿಸುತ್ತಾರೆ ಎನ್ನಲಾಗಿತ್ತು. ಇದೇ ಕಾರಣಕ್ಕೆ ಅವರ ಅಭಿಮಾನಿಗಳು ಚೆನ್ನೈ ಪಂದ್ಯ ಎಲ್ಲೆಲ್ಲಿ ನಡೆಯುತ್ತದೋ ಅಲ್ಲೆಲ್ಲ ಹೋಗಿ ಧೋನಿ ಆಟವನ್ನು ಕಣ್ತುಂಬಿಕೊಂಡಿದ್ದಾರೆ. ಜತೆಗೆ ಧೋನಿ ಅವರು ಮೈದಾನಕ್ಕೆ ಬರುವ ವೇಳೆ ಮೊಬೈಲ್ ಪ್ಲ್ಯಾಶ್ ಲೈಟ್ಗಳನ್ನು ಹಾಕಿ ವಿಶೇಷ ಗೌರವ ಸೂಚಿಸುತ್ತಿದ್ದರು.
ಧೋನಿ ಎಂದರೆ ಅಭಿಮಾನಿಗಳಿಗೆ ಕ್ರೇಜ್. ಇದೀಗ ಧೋನಿ ಅವರು 43 ವರ್ಷಕ್ಕೆ ಕಾಲಿಟ್ಟಿದ್ದಾರೆ. ಅವರ ಅಭಿಮಾನಿಗಳು ಚೆನ್ನೈ ಸೇರಿ ವಿವಿದೆಡೆ ದೊಡ್ಡ ಕಟೌಟ್ ನಿರ್ಮಿಸಿ ನೆಚ್ಚಿನ ಆಟಗಾರನಿಗೆ ಹರಸಿ ಹಾರೈಸಿದ್ದಾರೆ.
- ಕ್ಯಾಪ್ಟನ್ ಕೂಲ್ ಕುರಿತ ಕೆಲವು ಇಂಟರೆಸ್ಟಿಂಗ್ ಅಂಶಗಳು
- 1. ಧೋನಿ ಹೆಚ್ಚಾಗಿ ಮೊಬೈಲ್ ಬಳಸುವುದಿಲ್ಲ. ಇನ್ನು ಸಾಮಾಜಿಕ ಜಾಲತಾಣಗಳಿಂದ ಅವರು ಅಂತರ ಕಾಯ್ದುಕೊಳ್ಳುತ್ತಾರೆ. ಟ್ವಿಟರ್‌ನಲ್ಲಿ 80 ಲಕ್ಷಕ್ಕೂ ಅಧಿಕ ಫಾಲೋವರ್‌ಗಳನ್ನು ಹೊಂದಿರುವ ಅವರು ಕೊನೆಯ ಬಾರಿ ಟ್ವೀಟ್ ಮಾಡಿದ್ದು 2021ರಲ್ಲಿ. ಇನ್‌ಸ್ಟಾಗ್ರಾಂನಲ್ಲಿ 4.38 ಕೋಟಿ ಫಾಲೋವರ್‌ಗಳನ್ನು ಹೊಂದಿರುವ ತಾಲಾ, ಫೆಬ್ರವರಿಯಿಂದ ಯಾವುದೇ ವಿಡಿಯೊ ಪೋಸ್ಟ್ ಮಾಡಿಲ್ಲ.
- 2.ಧೋನಿಗೆ ಪೆಟ್ಸ್ ಎಂದರೆ ತುಂಬ ಇಷ್ಟ. ಸ್ಯಾಮ್, ಲಿಲ್ಲಿ, ಗಬ್ಬರ್ ಹಾಗೂ ಜೋಯಾ ಎಂಬ ನಾಲ್ಕು ಶ್ವಾನಗಳನ್ನು ಸಾಕಿದ್ದಾರೆ. ಅಷ್ಟೇ ಅಲ್ಲ, ರಾಂಚಿಯಲ್ಲಿರುವ ಫಾರ್ಮ್‌ಹೌಸ್‌ನಲ್ಲಿ Honey ಎಂಬ ಗಿಳಿ, ಚೇತಕ್ ಎಂಬ ಕುದುರೆ ಸಾಕಿದ್ದಾರೆ.
- 3.ಧೋನಿ ಕ್ರಿಕೆಟ್‌ಗೆ ಕಾಲಿಡುವ ಮೊದಲು ಫುಟ್ಬಾಲ್ ಆಡುತ್ತಿದ್ದರು. ಬ್ಯಾಡ್ಮಿಂಟನ್ ಕೂಡ ಅವರ ನೆಚ್ಚಿನ ಆಟವಾಗಿತ್ತು. ಆದರೆ, ಅವರು ಕ್ರಿಕೆಟ್‌ನಲ್ಲಿ ವೃತ್ತಿಜೀವನ ಆರಂಭಿಸಿದರು. ಮುಂದೆ ಆಗಿದ್ದೆಲ್ಲ ಈಗ ಇತಿಹಾಸ.
- 4.ಮಹೇಂದ್ರ ಸಿಂಗ್ ಧೋನಿ ಅವರಿಗೆ ಬೈಕ್‌ಗಳೆಂದರೆ ಪಂಚಪ್ರಾಣ. ಅವರ ಬಳಿ ಒಂದು ಶೋರೂಮ್‌ನಲ್ಲಿರುವಷ್ಟು ಅಂದರೆ, 70 ದುಬಾರಿ ಬೈಕ್‌ಗಳಿವೆ. ಹಾರ್ಲೆ ಡೇವಿಡ್‌ಸನ್‌ನಿಂದ ಹಿಡಿದು ಸುಜುಕಿ ಹಯಬುಸವರೆಗೆ ದುಬಾರಿ ಬೈಕ್‌ಗಳು ಅವರ ಬಳಿ ಇವೆ. ಹಲವು ಐಷಾರಾಮಿ ಕಾರುಗಳನ್ನೂ ಧೋನಿ ಹೊಂದಿದ್ದಾರೆ.
- 5.ವಿಕೆಟ್ ಕೀಪಿಂಗ್‌ನಲ್ಲಿ ಧೋನಿ ವಿಶ್ವದಾಖಲೆ ಹೊಂದಿದ್ದಾರೆ. 2018ರಲ್ಲಿ ಕೇವಲ 0.08 ಸೆಕೆಂಡ್‌ನಲ್ಲಿ ಸ್ಟಂಪ್‌ಔಟ್ ಮಾಡುವ ಮೂಲಕ ವೆಸ್ಟ್ ಇಂಡೀಸ್‌ನ ಕೀಮೊ ಪೌಲ್‌ರನ್ನು ಪೆವಿಲಿಯನ್‌ಗೆ ಕಳುಹಿಸಿದ್ದರು. ಕುಲದೀಪ್ ಯಾದವ್ ಆಗ ಬೌಲಿಂಗ್ ಮಾಡಿದ್ದರು. ಇದು ವಿಶ್ವದಲ್ಲೇ ವೇಗದ ಸ್ಟಂಪಿಂಗ್ ಎನಿಸಿದೆ.