Site icon Vistara News

MS Dhoni Birthday: ಧೋನಿ ನಾಯಕರಾಗಿದ್ದಾಗ ಬಳಸಿದ ಮಹತ್ವದ ಗೆಲುವಿನ ತಂತ್ರಗಳು ಇಲ್ಲಿವೆ

MS Dhoni Birthday

MS Dhoni Birthday: Interesting Facts About the Legendary India Skipper, and His Top Knocks

ಬೆಂಗಳೂರು ಭಾರತಕ್ಕೆ 2 ವಿಶ್ವಕಪ್(ಟಿ20, ಏಕದಿನ) ಗೆದ್ದ ಕೊಟ್ಟ ನಾಯಕ ಮಹೇಂದ್ರ ಸಿಂಗ್‌ ಧೋನಿಗೆ(MS Dhoni Birthday) 43ನೇ ಜನುಮದಿನದ ಸಂಭ್ರಮ. ಕ್ರಿಕೆಟ್‌ ಮೈದಾನದಲ್ಲಿ ಬ್ಯಾಟಿಂಗ್‌, ವಿಕೆಟ್‌ ಕೀಪಿಂಗ್‌ ಅಥವಾ ನಾಯಕನಾಗೇ ಇರಲಿ ಶಾಂತಚಿತ್ತ ಅವರ ಮುಖ್ಯ ಗುಣ. ಎಂತಹ ಸನ್ನಿವೇಶವಿದ್ದರೂ ಧೋನಿ(MS Dhoni) ತಾಳ್ಮೆ ಕಳೆದುಕೊಳ್ಳುವುದು ವಿರಳ. ಇದಕ್ಕಾಗಿ ಅವರಿಗೆ ಕ್ಯಾಪ್ಟನ್‌ ಕೂಲ್‌’ ಎಂಬ ಹೆಸರು ಕೂಡ ಇದೆ. ಧೋನಿ ಎಂದರೆ ಅಭಿಮಾನಿಗಳಿಗೊಂದು ಎಮೋಷನ್‌. ನಾಯಕನಾಗಿ ಧೋನಿ ತೆಗೆದುಕೊಂಡ ಕೆಲವು ನಿರ್ಧಾರಗಳು ಭಾರತ ತಂಡಕ್ಕೆ ಹೇಗೆ ಹೇಗೆ ನೆರವಾಯಿತು ಎಂಬುದರ ಕುತೂಹಲಕಾರಿ ಸಂಗತಿ ಹೀಗಿದೆ

ಜೋಗಿಂದರ್ ಶರ್ಮಾಗೆ ಕೊನೆ ಓವರ್​ ನೀಡಿದ್ದು!

2007ರಲ್ಲಿ ನಡೆದ ಚೊಚ್ಚಲ ಟಿ 20 ವಿಶ್ವಕಪ್ ಫೈನಲ್​ನಲ್ಲಿ ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಿತ್ತು. ಸಾಧಾರಣ ಗುರಿ ಬೆನ್ನತ್ತಿದ್ದ ಪಾಕ್​ ಓಂದೆಡೆ ವಿಕೆಟ್ ಬೀಳುತ್ತಿದ್ದರೂ ಮಿಸ್ಬಾ ಉಲ್ ಹಕ್ ನಿಂತು ಆಡುತ್ತಿದ್ದರು. ಕೊನೆಯ ಓವರ್ ನಲ್ಲಿ 13 ರನ್ ಬೇಕಾಗಿತ್ತು. ಕೈಯಲ್ಲಿ ಇದ್ದಿದ್ದು ಒಂದು ವಿಕೆಟ್. ಜೋಗಿಂದರ್ ಶರ್ಮಾರ ಎರಡನೇ ಎಸೆತವನ್ನು ಸಿಕ್ಸರ್​ಗೆ ಅಟ್ಟಿದ ಮಿಸ್ಬಾ ಮೂರನೇ ಎಸೆತವನ್ನು ಫೈನ್ ಲೆಗ್​ಗೆ ಸ್ಕೂಪ್ ಮಾಡಿದ್ದರು. ಆದರೆ ಚೆಂಡು ಶ್ರೀಶಾಂತ್ ಕೈ ಸೇರಿತ್ತು. ಪಾಕಿಸ್ತಾನ ಆಲ್​ಔಟ್​ ಆಯಿತು. ಭಾರತ ಕೇವಲ 5 ರನ್​ ಅಂತರದಿಂದ ಗೆದ್ದು ಟ್ರೋಫಿ ಎತ್ತಿ ಹಿಡಿಯಿತು. ಇಲ್ಲಿಂದ ಧೋನಿ ಯುಗ ಕೂಡ ಆರಂಭವಾಯಿತು. ಅನಾನುಭವಿ ಜೋಗಿಂದರ್ ಶರ್ಮಾ ಕೈಗೆ ಧೋನಿ ಚೆಂಡು ಕೊಟ್ಟ ನಿರ್ಧಾರ ಪಂದ್ಯದ ಗತಿಯನ್ನೇ ಬದಲಿಸಿತು. ಪಂದ್ಯದ ನಂತರ ಧೋನಿ, ಮಧ್ಯಮ ವೇಗದ ಬೌಲರ್ ಜೋಗಿಂದರ್​ ಮೇಲೆ ನನಗೆ ನಂಬಿಕೆ ಇತ್ತು. ಹಾಗಾಗಿ ಇದು ಸುಲಭ ನಿರ್ಧಾರವಾಗಿತ್ತು ಎಂದು ಸ್ಪಷ್ಟಪಡಿಸಿದ್ದರು.

ಚಾಂಪಿಯನ್ಸ್ ಟ್ರೋಫಿಯಲ್ಲಿ ಇಶಾಂತ್ ಶರ್ಮಾಗೆ ಬೌಲಿಂಗ್​ ಕೊಟ್ಟದ್ದು

2013ರಲ್ಲಿ ನಡೆದಿದ್ದ ಚಾಂಪಿಯನ್ಸ್​ ಟ್ರೋಫಿ ಫೈನಲ್​ನಲ್ಲಿ ಭಾರತ ಮತ್ತು ಇಂಗ್ಲೆಂಡ್​ ಮುಖಾಮುಖಿಯಾಗಿತ್ತು. ನಿಧಾನಗತಿಯ ಎಡ್ಜ್ ಬಾಸ್ಟನ್ ಪಿಚ್​ನಲ್ಲಿ ಇಂಗ್ಲೆಂಡ್ 130 ರನ್ ಗಳ ಗುರಿ ಬೆನ್ನಟ್ಟುತ್ತಿತ್ತು. ಈ ಅವಧಿಯಲ್ಲಿ ಮಳೆಯ ಅವಕೃಪೆಯೂ ಎದುರಾಯಿತು. ಈ ವೇಳೆ ಧೋನಿಗೆ ಬೌಲಿಂಗ್​ಗೆ ಇಳಿಸುವ ಸವಾಲು ಎದುರಾಯಿತು. ವಿಶ್ವಾಸಾರ್ಹ ಸ್ಪಿನ್ ಜೋಡಿ ರವೀಂದ್ರ ಜಡೇಜಾ ಮತ್ತು ಆರ್ ಅಶ್ವಿನ್ ಅವರನ್ನು ಬಳಸಿಕೊಂಡು ಇಂಗ್ಲೆಂಡ್ ಬ್ಯಾಟರ್​ಗಳನ್ನು ಕಟ್ಟಿ ಹಾಕಿದರು. ಆದರೂ ಆತಿಥೇಯ ಆಂಗ್ಲರ ಪಡೆಗೆ ಕೊನೇ 18 ಎಸೆತಗಳಲ್ಲಿ ಕೇವಲ 28 ರನ್​ ಬೇಕಾಗಿತ್ತು. ಈ ವೇಳೆ ಧೋನಿ ಇಶಾಂತ್ ಶರ್ಮಾ ಕೈಗೆ ಚೆಂಡನ್ನು ನೀಡಿದರು.

ಇದನ್ನೂ ಓದಿ MS Dhoni Birthday: ಸಲ್ಮಾನ್​ ಖಾನ್​ ಜತೆ ಕೇಕ್​ ಕತ್ತರಿಸಿ ಹುಟ್ಟುಹಬ್ಬ ಆಚರಿಸಿದ ಧೋನಿ

ಅವರ ಎಸೆತಕ್ಕೆ ಇಯಾನ್ ಮಾರ್ಗನ್ ಸಿಕ್ಸರ್ ಭಾರಿಸಿದ ಜತೆಗೆ ಶರ್ಮಾ ಎರಡು ವೈಡ್​ ನೀಡಿದ ಬಳಿಕ ಧೋನಿಯ ನಿರ್ಧಾರ ತಲೆಕೆಳಗಾದಂತೆ ಕಂಡಿತು. ಆದರೆ, ನಂತರ ನಡೆದಿದ್ದೇ ಬೇರೆ. ಇಶಾಂತ್ ನಿಧಾನಗತಿಯ ಚೆಂಡನ್ನು ಸಿಕ್ಸರ್ ಕಡೆಗೆ ಕಳುಹಿಸಲು ಹೋದ ಮಾರ್ಗನ್​ ಔಟಾದರು. ಮುಂದಿನ ಎಸೆತದಲ್ಲಿ ರವಿ ಬೋಪಾರಾ ವಿಕೆಟ್ ಪಡೆದರು. ಪಿಚ್​​ನಲ್ಲಿ ತಳವೂರಿದ್ದ ಬ್ಯಾಟರ್​​ಗಳನ್ನು ಪೆವಿಲಿಯನ್​ಗೆ ಕಳುಹಿಸಿ ಭಾರತದ ಜಯಕ್ಕೆ ಹಾದಿ ಮಾಡಿಕೊಟ್ಟರು ಇಶಾಂತ್​. ಅಲ್ಲಿಗೆ ಧೋನಿಯ ತಂತ್ರಗಾರಿಕೆ ಮತ್ತೆ ಫಲಕೊಟ್ಟಂತಾಯಿತು.

2011 ರ ವಿಶ್ವಕಪ್ ಫೈನಲ್​ ಪಂದ್ಯದಲ್ಲಿ ಬ್ಯಾಟಿಂಗ್​ ಮುಂಬಡ್ತಿ


ನಾಯಕನಾಗಿ ಧೋನಿ ಅವರ ಅತ್ಯಂತ ಪ್ರಸಿದ್ಧ ಮತ್ತು ಕ್ಷಿಪ್ರ ನಿರ್ಧಾರದಲ್ಲಿ 2011ರಲ್ಲಿ ನಡೆದಿದ್ದ ಏಕದಿನ ವಿಶ್ವಕಪ್​ ಫೈನಲ್ ಕೂಡ ಒಂದು. ಶ್ರೀಲಂಕಾ ವಿರುದ್ಧದ 2011 ರ ವಿಶ್ವಕಪ್ ಫೈನಲ್​​ನಲ್ಲಿ ತಾವೇ ಸ್ವತಃ ಯುವರಾಜ್ ಸಿಂಗ್ ಅವರಿಗಿಂತ ಮುಂಚಿತವಾಗಿ ಬ್ಯಾಟ್​ ಮಾಡಲು ಇಳಿದಿರುವುದು. ತಂಡದ ಮೂರನೇ ವಿಕೆಟ್ ಪತನದ ನಂತರ ಅವರು ತಾವೇ ಬ್ಯಾಟ್​ ಹಿಡಿದು ಆಡಲು ಮುಂದಾದರು. ಗೌತಮ್​ ಗಂಭೀರ್​ ಜತೆ ಅಮೂಲ್ಯ ಜತೆಯಾಟ ನೀಡುವ ಜತೆಗೆ ಲಂಕಾದ ಸ್ಪಿನ್ ಬೌಲರ್​ಗಳ ತಂತ್ರವನ್ನು ಅವರಿಬ್ಬರು ವಿಫಲಗೊಳಿಸಿದರು. ಅಲ್ಲದೇ ತಾವು ಕೊನೇ ತನಕ ಉಳಿದು 97 ರನ್ ಬಾರಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ಇದು ಭಾರತ ಕ್ರಿಕೆಟ್ ತಂಡದ ಪಾಲಿಗೆ ಐತಿಹಾಸಿಕ ನಿರ್ಧಾರವೇ ಸರಿ.

ಲಾರ್ಡ್ಸ್​ನಲ್ಲಿ ಇಶಾಂತ್ ಶರ್ಮಾ ಬೌನ್ಸರ್ ದಾಳಿ


ಭಾರತವು 2014ರ ಇಂಗ್ಲೆಂಡ್​ ಪ್ರವಾಸದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯಲು ಹೆಣಗಾಡಿತ್ತು. ಆದರೆ ಪ್ರವಾಸದ ಎರಡನೇ ಟೆಸ್ಟ್​​ನಲ್ಲಿ ಅದು ಬದಲಾಯಿತು. ಅಲ್ಲಿ ಧೋನಿ ನಾಯಕತ್ವದಲ್ಲಿ ಆಡಿದ ಭಾರತ ತಂಡ ಪುಟಿದೆದ್ದಿತು. ಆ ಪಂದ್ಯದಲ್ಲಿ ಇಂಗ್ಲೆಂಡ್​ ತಂಡಕ್ಕೆ 6 ವಿಕೆಟ್​ಗಳು ಕೈಯಲ್ಲಿರುವಾಗ 140 ರನ್​ಗಳ ಅಗತ್ಯವಿತ್ತು . ಹೀಗಾಗಿ ಗೆಲುವು ಇಂಗ್ಲೆಂಡ್​ ತಂಡದ್ದು ಎಂದು ಭಾವಿಸಲಾಗಿತ್ತು. ಧೋನಿ ತಂತ್ರಗಾರಿಕೆ ಬಳಸಿದರು. ಇಶಾಂತ್​ ಶರ್ಮಾಗೆ ಚೆಂಡು ಕೊಟ್ಟು ಶಾರ್ಟ್ ಪಿಚ್ ದಾಳಿ ಮಾಡಲು ಹೇಳಿದರು. ಶರ್ಮಾ ಮಿಂಚಿದರು. ಜೀವನ ಶ್ರೇಷ್ಠ 7 ವಿಕೆಟ್​ ಪಡೆದರು. ಕೇವಲ 74 ರನ್ ನೀಡಿ ಈ ಸಾಧನೆ ಮಾಡಿದರು. ಭಾರತಕ್ಕೆ 95 ರನ್​ಗಳ ಗೆಲುವು ಲಭಿಸಿತು. ಇಶಾಂತ್​ ಅವರ ಶಾರ್ಟ್​​ ಪಿಚ್ ಹಾಗೂ ಬೌನ್ಸರ್​ಗಳು ಕೆಲಸ ಮಾಡಿದವು. ಧೋನಿಯ ತಂತ್ರಗಾರಿಕೆ ಮೇಲುಗೈ ಸಾಧಿಸಿತ್ತು.

ಪೊಲಾರ್ಡ್ ವಿರುದ್ಧ ಸ್ಟ್ರೈಟ್-ಆನ್ ಫೀಲ್ಡಿಂಗ್​ ತಂತ್ರ


ಎಂಎಸ್ ಧೋನಿ ನಾಯಕತ್ವದಲ್ಲಿ ಫೀಲ್ಡಿಂಗ್ ಸೆಟ್ಟಿಂಗ್​ ಕೂಡ ಅದ್ಭುತವಾಗಿತ್ತು. 2010ರ ಐಪಿಎಲ್ ಫೈನಲ್​ನಲ್ಲಿ ಇದಕ್ಕೊಂದು ತಾಜಾ ಉದಾಹರಣೆಯಿದೆ. ಸಿಎಸ್​ಕೆ ಮತ್ತು ಮುಂಬಯಿ ನಡುವಿನ ಫೈನಲ್​ ಹಣಾಹಣಿಯದರು. ವಿಂಡೀಸ್ ದೈತ್ಯ ಕೀರನ್ ಪೊಲಾರ್ಡ್ ಚೆನ್ನೈ ಕೈಯಿಂದ ಜಯ ಕಸಿಯುವ ಪ್ರಯತ್ನ ಮಾಡುತ್ತಿದ್ದರು. 9 ಎಸೆತಗಳಲ್ಲಿ 27 ರನ್ ಗಳಿಸಿದ್ದರು ಪೊಲಾರ್ಡ್​. ಇದನ್ನು ಗ್ರಹಿಸಿದ ಧೋನಿ ಮ್ಯಾಥ್ಯೂ ಹೇಡನ್ ಅವರನ್ನು ಮ್ಯಾಥ್ಯೂ ಹೇಡನ್ ಅವರನ್ನು ಸ್ಟ್ರೈನ್ ಆನ್​ ಬಳಿ ಫೀಲ್ಡಿಂಗ್ ನಿಲ್ಲಿಸಿದರು. ಪೊಲಾರ್ಡ್​ ಕ್ಯಾಚ್​ ನೀಡಿ ನಿರ್ಗಮಿಸಿದರು. ಧೋನಿ 2017 ರ ಫೈನಲ್​ನಲ್ಲಿ ರೈಸಿಂಗ್ ಪುಣೆ ಸೂಪರ್​ಜೈಂಟ್ಸ್​ ತಂಡ ಪರವಾಗಿ ಅದೇ ತಂತ್ರ ಬಳಸಿ ಪೊಲಾರ್ಡ್ ಅವರನ್ನು ಔಟ್​ ಮಾಡಿಸಿದರು. 2022ರಲ್ಲಿ ಪೊಲಾರ್ಡ್ ಅವರ ಅಂತಿಮ ಐಪಿಎಲ್​ ಋತುವಿನಲ್ಲೂ ಅವರನ್ನು ಅದೇ ರೀತಿ ಔಟ್​ ಮಾಡಿಸಿದ್ದರು ಧೋನಿ.

Exit mobile version