ಬೆಂಗಳೂರು: ಎಂಎಸ್ ಧೋನಿ ಇನ್ನೂ ಒಂದು ಐಪಿಎಲ್ ಋತುವಿನಲ್ಲಿ ಆಡುತ್ತಾರೆಯೇ? ಅವರ ಮೊಣಕಾಲಿನ ಸಮಸ್ಯೆ ಎರಡು ತಿಂಗಳ ಕಾಲ ನಡೆಯುವ ಐಪಿಎಲ್ ಆಡಲು ಸಹರಿಸುತ್ತದೆಯೇ? ಸಿಎಸ್ಕೆಗೆ ಅಭೂತಪೂರ್ವ ಆರನೇ ಐಪಿಎಲ್ ಪ್ರಶಸ್ತಿಯನ್ನು ಗೆಲ್ಲಲು ಅವರು ಸಹಾಯ ಮಾಡಬಹುದೇ? ಎಂಬ ಪ್ರಶ್ನೆಗಳು ಮತ್ತೆ ಶುರವಾಗಿದೆ. ಐಪಿಎಲ್ 2024 ಋತುವಿಗೆ ಇನ್ನೂ ಏಳು ತಿಂಗಳು ಬಾಕಿ ಇದ್ದು, ಎಲ್ಲರ ಕಣ್ಣುಗಳು ಮತ್ತೊಮ್ಮೆ ಧೋನಿ ಮೇಲೆ ನೆಟ್ಟಿವೆ. ಆದಾಗ್ಯೂ, ಸಿಎಸ್ಕೆ ನಾಯಕ ಡಿಸೆಂಬರ್ ವೇಳೆಗೆ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.
ಇದೇ ಮೊದಲ ಬಾರಿಗೆ ಧೋನಿ ಐಪಿಎಲ್ ಆಡುವ ನಿರ್ಧಾರದ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದಾರೆ. ಐಪಿಎಲ್ 2024 ರ ಉಳಿಸಿಕೊಂಡಿರುವ ಆಟಗಾರರ ಪಟ್ಟಿ ನವೆಂಬರ್ 15 ರಂದು ಬಿಡುಗಡೆಯಾಗಲಿದೆ. ಐಪಿಎಲ್ ಮಿನಿ ಹರಾಜು ಡಿಸೆಂಬರ್ 13 ಅಥವಾ 14 ರಂದು ದುಬೈನಲ್ಲಿ ನಡೆಯಲಿದೆ ಎನ್ನಲಾಗಿದೆ. ಹೀಗಾಗಿ ನವೆಂಬರ್ ಎರಡನೇ ವಾರದಲ್ಲಿ ಧೋನಿ 17ನೇ ಆವೃತ್ತಿಯ ಐಪಿಎಲ್ ಆಡುತ್ತಾರೋ ಇಲ್ಲವೋ ಎಂಬುದು ಅಭಿಮಾನಿಗಳಿಗೆ ತಿಳಿಯಲಿದೆ.
41 ವರ್ಷದ ಅವರು ಧೋನಿ ಪ್ರಸ್ತುತ ಜಾರ್ಖಂಡ್ನಲ್ಲಿದ್ದಾರೆ. ಫಾರ್ಮ್ ಹೌಸ್ ಸೇರಿದಂತೆ ನಾನಾ ಕಾಡೆ ತಮ್ಮ ಬಿಡುವಿನ ಸಮಯವನ್ನು ಕಳೆಯುತ್ತಿದ್ದಾರೆ. ಐಪಿಎಲ್ ನಂತರ ಸಿಎಸ್ಕೆ ನಾಯಕ ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅದರಿಂದಲೂ ಸಂಪೂರ್ಣವಾಗಿ ಸುಧಾರಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
ಧೋನಿ ಚೇತರಿಸಿಕೊಳ್ಳುತ್ತಿದ್ದಾರೆ: ಸಾಕ್ಷಿ
ಮೊಣಕಾಲು ಶಸ್ತ್ರಚಿಕಿತ್ಸೆಯಿಂದ ಧೋನಿ ಚೆನ್ನಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅವರ ಪತ್ನಿ ಸಾಕ್ಷಿ ಬಹಿರಂಗಪಡಿಸಿದ್ದಾರೆ. ಐಪಿಎಲ್ 2023 ಸೀಸನ್ ಮುಗಿದ ಕೂಡಲೇ ಸಿಎಸ್ಕೆ ನಾಯಕ ಶಸ್ತ್ರಚಿಕಿತ್ಸೆ ಮೊರೆ ಹೋಗಿದ್ದರು . ಶಸ್ತ್ರಚಿಕಿತ್ಸೆಯ ಬಗ್ಗೆ ಸಿಎಸ್ಕೆ ಸಿಇಒ ಕಾಶಿ ವಿಶ್ವನಾಥನ್ ಅವರೊಂದಿಗೆ ಸಂವಹನ ನಡೆಸಿದ ಧೋನಿ ಸಿಎಸ್ಕೆಗಾಗಿ ಮತ್ತೊಂದು ಋತುವಿನಲ್ಲಿ ಆಡುವ ಮೊದಲು ಅಥವಾ ನಿವೃತ್ತರಾಗುವ ಮೊದಲು ಸಮಯ ತೆಗೆದುಕೊಳ್ಳುವ ಬಗ್ಗೆಯೂ ಪ್ರಸ್ತಾಪಿಸಿದರು.
ಇದನ್ನೂ ಓದಿ
ICC World Cup 2023 : ಈಡನ್ ಗಾರ್ಡನ್ಸ್ನಲ್ಲಿ ಗೋಡೆ ಕುಸಿತ, ವಿಶ್ವ ಕಪ್ ಪಂದ್ಯಕ್ಕೆ ಆತಂಕ
AUS vs NZ: ಕಿವೀಸ್ ವಿರುದ್ಧ ನಡೆದೀತೇ ಕಾಂಗರೂ ಕಾರ್ಬಾರು?
Asia Cup | ವೇಗದ ಬೌಲರ್‌ಗೆ ಗಾಯ, ಪಾಕ್ ನಾಯಕನಿಗೆ ಶುರುವಾಯ್ತು ಟೆನ್ಷನ್
ಜಿಟಿ ವಿರುದ್ಧದ ಫೈನಲ್ ಪಂದ್ಯದ ನಂತರ, ಧೋನಿ ಹರ್ಷ ಭೋಗ್ಲೆ ಅವರಿಗೆ ನಿವೃತ್ತಿ ಘೋಷಿಸದಿರುವ ಬಗ್ಗೆ ಹೇಳಿದರು. ಅಭಿಮಾನಿಗಳಿಗೆ ಉಡುಗೊರೆಯಾಗಿ ಐಪಿಎಲ್ನ ಮತ್ತೊಂದು ಋತುವನ್ನು ಆಡಲು ಬಯಸುತ್ತೇನೆ ಎಂದು ಹೇಳಿದ್ದರು. ಆದಾಗ್ಯೂ, ವಿಕೆಟ್ ಕೀಪರ್ ಬ್ಯಾಟರ್ ನಿರ್ಧಾರವು ಅವರ ಚೇತರಿಕೆಯ ಮೇಲೆ ಮಾತ್ರ ಅವಲಂಬಿತವಾಗಿದೆ. ಐಪಿಎಲ್ 2024 ಋತುವಿಗೆ ಇನ್ನೂ ಎಂಟು ತಿಂಗಳುಗಳು ಬಾಕಿ ಇರುವಾಗ, ಸಿಎಸ್ಕೆಯ ಹಿತದೃಷ್ಟಿಯಿಂದ ನಿರ್ಧಾರ ತೆಗೆದುಕೊಳ್ಳಲು ಭಾರತದ ಮಾಜಿ ನಾಯಕನಿಗೆ ಇನ್ನೂ ಸಾಕಷ್ಟು ಸಮಯವಿದೆ.
ಧೋನಿಯ ಹೆಸರಲ್ಲಿ ಮಗುವಿನ ಅಪಹರಣ
ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ (MS Dhoni) ಹೆಸರನ್ನು ಬಳಸಿಕೊಂಡು ತಾಯಿಯೊಬ್ಬಳನ್ನು ವಂಚಿಸಿ ಆಕೆಯ ಹೆಣ್ಣು ಮಗುವನ್ನು ಅಪಹರಿಸಿದ ಘಟನೆ ಜಾರ್ಖಡ್ನ ರಾಂಚಿಯಲ್ಲಿ ನಡೆದಿದೆ. ಪೊಲೀಸರ ಪ್ರಕಾರ, ಅಪಹರಣಕಾರರು ಮಗುವಿನ ತಾಯಿಗೆ ಧೋನಿ ಬಡವರಿಗೆ ಹಣ ಮತ್ತು ಮನೆಗಳನ್ನು ವಿತರಿಸುತ್ತಿದ್ದಾರೆ ಎಂದು ಯಾಮಾರಿಸಿ ಮಗುವನ್ನು ಅಪಹರಣ ಮಾಡಿದ್ದರು.
ಈ ಘಟನೆ ಮಂಗಳವಾರ (ಅಕ್ಟೋಬರ್ 24) ನಡೆದಿದೆ. ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ. ಇದು ಪ್ರತ್ಯೇಕ ಕೃತ್ಯವೇ ಅಥವಾ ಮಕ್ಕಳನ್ನು ಅಪಹರಿಸುವಲ್ಲಿ ಭಾಗಿಯಾಗಿರುವ ಗ್ಯಾಂಗ್ನ ಯೋಜಿತ ಪಿತೂರಿಯೇ ಎಂದು ಕಂಡುಹಿಡಿಯಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.
ಮೂರು ದಿನಗಳ ಹಿಂದೆ ಮಧು ದೇವಿ ಎಂಬ ಮಹಿಳೆ ಇಬ್ಬರು ಮಕ್ಕಳೊಂದಿಗೆ ರಾಂಚಿಯ ಅಂಗಡಿಯೊಂದರಲ್ಲಿ ವಸ್ತುಗಳನ್ನು ಖರೀದಿ ಮಾಡುತ್ತಿದ್ದಾಗ ದುಷ್ಕರ್ಮಿಗಳು ಕೃತ್ಯ ಎಸಗಿದ್ದಾರೆ. ಬೈಕ್ನಲ್ಲಿ ಬಂದಿದ್ದ ಪುರುಷ ಮತ್ತು ಮಹಿಳೆ, ಧೋನಿ ಅಗತ್ಯವಿರುವವರಿಗೆ ಹಣವನ್ನು ನೀಡುತ್ತಿದ್ದಾರೆ ಎಂದು ಹೇಳಿದ್ದರು. ಅದನ್ನು ನಂಬಿದ್ದ ಮಧು ದೇವಿ ಅವರೊಂದಿಗೆ ಹೋಗಿದ್ದು ಈ ವೇಳೆ ಬೈಕ್ನಲ್ಲಿ ಮಗುವಿನ ಸಮೇತ ಪರಾರಿಯಾಗಿದ್ದಾರೆ.