Site icon Vistara News

MS Dhoni: ಧೋನಿ ಎಂದರೆ ಎಮೋಷನ್; ಸೋಶಿಯಲ್‌ ಮೀಡಿಯಾದಲ್ಲಿ ಫುಲ್​ ಟ್ರೆಂಡ್​

MS Dhoni

ಚೆನ್ನೈ: ಎಂ.ಎಸ್.ಧೋನಿ, ಕ್ಯಾಪ್ಟನ್‌ ಕೂಲ್‌, ಮಾಹಿ, ತಾಲಾ… ಎಂದೆಲ್ಲ ಪ್ರೀತಿಯಿಂದ ಕರೆಸಿಕೊಳ್ಳುವ ಮಹೇಂದ್ರ ಸಿಂಗ್‌ ಧೋನಿ ಎಂದರೆ ಅಭಿಮಾನಿಗಳಿಗೊಂದು ಎಮೋಷನ್ (ಭಾವನೆ). ಅವರು ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಧೋನಿ(MS Dhoni) ಕೂಡ ತಮ್ಮ ಅಭಿಮಾನಿಗಳ ಮೇಲೆ ಹೆಚ್ಚಿನ ಪ್ರೀತಿ ತೋರುತ್ತಾರೆ. ಅಭಿಮಾನಿಗಳ ಒತ್ತಾಸೆಯಕ್ಕೆ ಮಣಿದು ತಮ್ಮ ಐಪಿಎಲ್​ ನಿವೃತ್ತಿಯನ್ನು ಕೂಡ ಮುಂದೂಡಿದ್ದರು. ಇದೀಗ 17ನೇ ಆವೃತ್ತಿಯ ಐಪಿಎಲ್​ಗಾಗಿ(IPL 2024) ಧೋನಿ ಚೆನ್ನೈಯಲ್ಲಿ ಬರದಿಂದ ಅಭ್ಯಾಸ ಆರಂಭಿಸಿದ್ದಾರೆ. ಈ ಬಾರಿ ಧೋನಿ ಐಪಿಎಲ್​ ಟೂರ್ನಿಗೆ ವಿದಾಯದ ಹೇಳುವುದು ಈಗಾಗಲೇ ಖಚಿತವಾಗಿದೆ. ಇದೇ ಕಾರಣಕ್ಕೆ ಅವರ ಅಭಿಮಾನಿಗಳು ಟೂರ್ನಿ ಆರಂಭಕ್ಕೂ ಮುನ್ನವೇ ಅವರ ಹಲವು ವಿಡಿಯೊಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಒಟ್ಟಾರೆಯಾಗಿ ಧೋನಿ ಐಪಿಎಲ್​ ಮುಗಿಯುವ ತನಕ ಟ್ವಿಟರ್​ ಎಕ್ಸ್​​ ಟ್ರೆಂಡ್​ ಆಗಿರಲಿದ್ದಾರೆ.

ಧೋನಿ ಅವರು ಈ ಹಿಂದಿನ ಐಪಿಎಲ್​ ಟೂರ್ನಿಗಳಲ್ಲಿ ಆಡಿರುವ ದೃಶ್ಯಗಳನ್ನು ಎಡಿಟ್​ ಮಾಡಿ ಇದಕ್ಕೆ ಲಿಯೋ ಸಿನಿಮಾದ ಮತ್ತು ಜೈಲರ್​ ಚಿತ್ರದಲ್ಲಿ ಖ್ಯಾತ ಸಿಂಗರ್​ ಅನಿರುದ್ಧ್ ರವಿಚಂದರ್ ಅವರು ಹಾಡಿರುವ ಹಾಡಿಗೆ ಧೋನಿಯ ಬ್ಯಾಟಿಂಗ್​ ಮತ್ತು ಮೈದಾನಕ್ಕೆ ಎಂಟ್ರಿ ಕೊಡುವ ದೃಶ್ಯಗಳನ್ನು ಜೋಡಿಸಿ ಹರಿಬಿಟ್ಟಿದ್ದಾರೆ.

ಧೋನಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿ ಕೆಳವು ವರ್ಷಗಳಾಗಿವೆ. ಕೇವಲ ಐಪಿಎಲ್​ ಟೂರ್ನಿಯಲ್ಲಿ(IPL 2024) ಮಾತ್ರ ಆಡುತ್ತಿದ್ದಾರೆ. ಕಳೆದ ವರ್ಷವೇ ಧೋನಿ ಅವರು ಐಪಿಎಲ್​ಗೆ ವಿದಾಯ ಹೇಳಲು ನಿರ್ಧರಿಸಿದ್ದರು. ಆದರೆ ಅಭಿಮಾನಿಗಳ ಒತ್ತಾಯದ ಮೇರೆಗೆ ತಮ್ಮ ನಿವೃತ್ತಿಯನ್ನು ಮುಂದೆ ಹಾಕಿದ್ದರು. ಈ ಬಾರಿಯ ಟೂರ್ನಿ ಅವರಿಗೆ ವಿದಾಯದ ಟೂರ್ನಿಯಾಗಲಿದೆ. ಈ ಮೂಲಕ ಧೋನಿ ಎಲ್ಲ ಮಾದರಿಯ ಕ್ರಿಕಟ್​ಗೂ ಗುಡ್​ಬೈ ಹೇಳಲಿದ್ದಾರೆ. ಹಾಲಿ ಚಾಂಪಿಯನ್​ ಆಗಿರುವ ಚೆನ್ನೈ(chennai super kings) ತಂಡ ಆರ್​ಸಿಬಿ ವಿರುದ್ಧ ಮಾರ್ಚ್ 22ರಂದು ನಡೆಯುವ ಉದ್ಘಾಟನ ಪಂದ್ಯವನ್ನಾಡುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ.

ಇದನ್ನೂ ಓದಿ IPL 2024: ಡೆಲ್ಲಿ ತಂಡಕ್ಕೆ ಎಂಟ್ರಿ ಕೊಟ್ಟ ವಿಶ್ವ ದಾಖಲೆಯ ಶತಕ ವೀರ; ಎದುರಾಳಿಗಳಿಗೆ ನಡುಕ!

ಕಳೆದ ಬಾರಿಯ ಐಪಿಎಲ್ ಟೂರ್ನಿಯುದ್ದಕ್ಕೂ ಧೋನಿ ಕಾಲಿನ ಗಾಯಕ್ಕೆ ತುತ್ತಾಗಿದ್ದರೂ ಆಡಿದ್ದರು. ನೋವು ನಿವಾರಕ ಪ್ಲಾಸರ್​ಗಳನ್ನು ಧರಿಸಿ ಆಡಿದ್ದರು. ಟೂರ್ನಿ ಮುಗಿದ ಬಳಿಕ ತಮ್ಮ ಮೊಣಕಾಲು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಮುಂಬೈನ ಖಾಸಗಿ ಆಸ್ಪತ್ರೆಯೊಂದರಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಸದ್ಯ ಉತ್ತಮ ಫಿಟ್​ನೆಸ್​ ಹೊಂದಿದ್ದಾರೆ. ಉದ್ದನೆಯ ಕೂದಲು ಕೂಡ ಬಿಟ್ಟಿದ್ದು ಕ್ರಿಕೆಟ್​ಗೆ ಪದಾರ್ಪಣೆ ಮಾಡುವಾಗ ಇದ್ದ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ.

ಮಹೇಂದ್ರ ಸಿಂಗ್​ ಧೋನಿಯ(MS Dhoni) ಆಟವನ್ನು ಕಣ್ತುಂಬಿಕೊಳ್ಳಲು ಅವರ ಅಭಿಮಾನಿಗಳು ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ. ಈಗಾಗಲೇ ಧೋನಿ ಅವರು ನೆಟ್ಸ್​ನಲ್ಲಿ(training session for CSK) ಭರ್ಜರಿ ಬ್ಯಾಟಿಂಗ್​ ಅಭ್ಯಾಸ ನಡೆಸುತ್ತಿದ್ದಾರೆ. 3 ದಿನಗಳ ಹಿಂದಷ್ಟೇ ವಿಂಟೇಜ್ ಶೈಲಿಯ ಉದ್ದನೆಯ ಕೂದಲಿನೊಂದಿಗೆ ಧೋನಿ ಬ್ಯಾಟಿಂಗ್​ ನಡೆಸುತ್ತಿರುವ ಫೋಟೊ ವೈರಲ್​ ಆಗಿತ್ತು

Exit mobile version