Site icon Vistara News

Ms Dhoni | ಆಟೋಗ್ರಾಫ್ ಕೇಳಿದ ಅಭಿಮಾನಿಗೆ ಬೆನ್ನಿನ ಮೇಲೆ ಸಹಿ ಹಾಕಿದ ಧೋನಿ!

ms dhoni

ಮುಂಬಯಿ: ಟೀಮ್​ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿಗೆ ಅಸಂಖ್ಯಾತ ಅಭಿಮಾನಿಗಳಿದ್ದಾರೆ. ಧೋನಿ ಎಲ್ಲೇ ಸಿಕ್ಕರೂ ಅಭಿಮಾನಿಗಳು ನೆಚ್ಚಿನ ಆಟಗಾರನ ಆಟೋಗ್ರಾಫ್​ಗಾಗಿ ಅವರ ಹಿಂದೆ ಬೀಳುತ್ತಾರೆ. ಈಗ ಅಂತಹದ್ದೇ ಒಂದು ಘಟನೆ ನಡೆದಿದೆ. ಆಟೋಗ್ರಾಫ್ ಕೇಳಿದ ಅಭಿಮಾನಿಗೆ ಧೋನಿ ಆತನ ಬೆನ್ನಿನ ಮೇಲೆ ಆಟೋಗ್ರಾಫ್ ನೀಡಿದ್ದಾರೆ. ಈ ವಿಡಿಯೊ ವೈರಲ್​ ಆಗಿದೆ.

ಎಂ.ಎಸ್​ ಧೋನಿಯ ಅಪ್ಪಟ ಅಭಿಮಾನಿಯೊಬ್ಬ ಧೋನಿಯನ್ನು ಕಂಡು ಓಡೋಡಿ ಬಂದು ಆಟೋಗ್ರಾಫ್ ಕೇಳಿದ್ದಾನೆ ಈ ವೇಳೆ ಧೋನಿ ಆತನ ಬೆನ್ನಿನ ಮೇಲೆ ತನ್ನ ಸಹಿ ಹಾಕಿದ್ದಾರೆ. ತನ್ನ ಬಿಳಿ ಟೀ ಶರ್ಟ್‌ ಮೇಲೆ ಧೋನಿ ಆಟೋಗ್ರಾಫ್ ಪಡೆದ ಈ ಅಭಿಮಾನಿಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆ ವ್ಯಕ್ತವಾಗಿದೆ. ಧೋನಿ ಆಟೋಗ್ರಾಫ್ ಪಡೆದ ನೀವು ಅದೃಷ್ಟವಂತರು ಎಂದು ಕಮೆಂಟ್​ ಮಾಡಿದ್ದಾರೆ.

ಸದ್ಯ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿರುವ ಧೋನಿ, ಐಪಿಎಲ್​ನಲ್ಲಿ ಚೆನ್ನೈ ತಂಡವನ್ನು ಮುನ್ನಡೆಸುತ್ತಿದ್ದಾರೆ. ತನ್ನ ನಾಯಕತ್ವದಲ್ಲಿ ತಂಡವನ್ನು 4 ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿರುವ ಧೋನಿ ಈ ಬಾರಿ ನಡೆಯಲಿರುವ 16ನೇ ಆವೃತ್ತಿಯ ಐಪಿಎಲ್​ ಬಳಿಕ ವಿದಾಯ ಹೇಳುವ ಸಾಧ್ಯತೆ ಇದೆ.

ಇದನ್ನೂ ಓದಿ | IND VS BAN | ಬೇಲ್ಸ್‌ ಕೃಪೆಯಿಂದ ಜೀವದಾನ ಪಡೆದ ಶ್ರೇಯಸ್‌ ಅಯ್ಯರ್: ವಿಡಿಯೊ ವೈರಲ್

Exit mobile version