ಮುಂಬಯಿ: 2011ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ(mahendra singh dhoni) ಅವರು ವಾಂಖೆಡೆ ಸ್ಟೇಡಿಯಂನಲ್ಲಿ ಬಾರಿಸಿದ ಗೆಲುವಿನ ಸಿಕ್ಸರ್ನ ಸವಿ ನೆನಪಿಗಾಗಿ ಮುಂಬೈ ಕ್ರಿಕೆಟ್ ಅಸೋಸಿಯೇಶನ್ ಮಹತ್ವದ ನಿರ್ಧಾರವೊಂದುನ್ನು ಕೈಗೊಂಡಿದೆ. ಈ ಸಿಕ್ಸರ್ ಬಡಿದ ಸೀಟ್‌ಗೆ ಧೋನಿ ಅವರ ಹೆಸರನ್ನು ಇಡಲು ನಿರ್ಧಾರ ಕೈಗೊಂಡಿದೆ.
ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಧೋನಿ ಬಾರಿಸಿದ ಸಿಕ್ಸರ್, ಸ್ಟ್ಯಾಂಡ್ ಒಂದರ ಸೀಟ್‌ಗೆ ಬಡಿದಿತ್ತು. ಈಗ ಅದೇ ಸೀಟ್‌ಗೆ ಧೋನಿ ಹೆಸರಿಡಲು ಎಂಸಿಎ ತೀರ್ಮಾನ ಮಾಡಿದೆ. ಅದರೊಂದಿಗೆ ಧೋನಿಯ ಹೆಸರು, ವಿಶ್ವಕಪ್ ಗೆಲುವಿನ ಶಾಟ್ ಹಾಗೂ ಐತಿಹಾಸಿಕ ಕ್ಷಣವನ್ನು ಸದಾ ನೆನಪಿನಲ್ಲಿಡುವಂತೆ ಮಾಡಲು ಎಂಸಿಎ ಮುಂದಾಗಿದೆ. ಆ ಮೂಲಕ ಕ್ರೀಡಾಂಗಣವೊಂದರ ಸೀಟ್‌ಗೆ ತನ್ನ ಹೆಸರನ್ನು ಹೊಂದಿರುವ ಭಾರತದ ಮೊಟ್ಟಮೊದಲ ಆಟಗಾರ ಎನ್ನುವ ಕೀರ್ತಿಗೂ ಎಂಎಸ್ ಧೋನಿ ಪಾತ್ರರಾಗಲಿದ್ದಾರೆ. ಧೋನಿ ಬಾರಿಸಿದ ಈ ಸಿಕ್ಸರ್ ಮೂಲಕ ಭಾರತದ 28 ವರ್ಷಗಳ ಬಳಿಕ ವಿಶ್ವಕಪ್ ಟ್ರೋಫಿ ಎತ್ತಿ ಸಂಭ್ರಮಿಸಿತ್ತು. ಭಾರತ ವಿಶ್ವ ಕಪ್ ಗೆದ್ದು ಏಪ್ರಿಲ್ 2ಕ್ಕೆ 12 ವರ್ಷ ಪೂರ್ತಿಗೊಂಡಿದೆ.
ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಪ್ರಕಾರ ಶನಿವಾರ (ಏಪ್ರಿಲ್ 8) ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಐಪಿಎಲ್ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ. ವಾಂಖೆಡೆ ಮೈದಾನದಲ್ಲಿ ಉಭಯ ತಂಡಗಳ ಈ ಹೋರಾಟ ನಡೆಯಲಿದೆ. ಇದೇ ವೇಳೆ ಧೋನಿ ಹೆಸರಿನ ಸೀಟ್ ಅನಾವರಣ ಮಾಡಲು ಎಂಸಿಎ ನಿರ್ಧಾರ ಮಾಡಿದೆ. ಧೋನಿಯೂ ಕೂಡ ಹಾಜರಿರುವುದರಿಂದ ಅವರ ಸಮ್ಮುಖದಲ್ಲೇ ಕಾರ್ಯಕ್ರಮ ನಡೆಸಲು ಎಂಸಿಎ ನಿರ್ಧಾರಿಸಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ IPL 2023 : ಲಕ್ನೊ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ 12 ರನ್ ಜಯ
2020ರಲ್ಲಿ ಈ ಸಲಹೆಯನ್ನು ಎಂಸಿಎ ಸದಸ್ಯರಾಗಿದ್ದ ಅಜಿಂಕ್ಯಾ ನಾಯ್ಕ್ ನೀಡಿದ್ದರು. ಆದರೆ ಅಪೆಕ್ಸ್ ಕೌನ್ಸಿಲ್ ಈ ನಿರ್ಧಾರವನ್ನು ಪಾಸ್ ಮಾಡಿರಲಿಲ್ಲ. ಇದೀಗ ಧೋನಿ ಹೆಸರಿಡಲು ಗ್ರೀನ್ ಸಿಗ್ನಲ್ ಸಿಕ್ಕಿದೆ.