ಮುಂಬಯಿ: 2011ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ(MS Dhoni) ಅವರು ವಾಂಖೆಡೆ ಸ್ಟೇಡಿಯಂನಲ್ಲಿ ಬಾರಿಸಿದ ಗೆಲುವಿನ ಸಿಕ್ಸರ್ನ ಸವಿ ನೆನಪಿಗಾಗಿ ಮುಂಬೈ ಕ್ರಿಕೆಟ್ ಅಸೋಸಿಯೇಶನ್ ಇದೇ ಎಪ್ರೀಲ್ನಲ್ಲಿ ಈ ಸಿಕ್ಸರ್ ಬಡಿದ ಸೀಟ್ಗೆ ಧೋನಿ ಅವರ ಹೆಸರನ್ನು ಇಟ್ಟಿತ್ತು. ಇದೀಗ 2023ರ ವಿಶ್ವಕಪ್(icc world cup 2023) ಪಂದ್ಯಕ್ಕೆ 2 ಆಸನಗಳ ಟಿಕೆಟ್‌ಗಳನ್ನು ಹರಾಜು ಹಾಕುವುದಾಗಿ ಘೋಷಿಸಿದೆ. ಹರಾಜಿನಿಂದ ಬರುವ ಹಣವನ್ನು ಪ್ರತಿಭಾನ್ವಿತ ಕ್ರಿಕೆಟಿಗರ ತರಬೇತಿಗೆ ಬಳಸುವಂತೆ ಸ್ವತಃ ಧೋನಿಯೇ ಸಲಹೆ ನೀಡಿ ಎಂದು ಎಂಸಿಎ ತಿಳಿಸಿದೆ.
ವಿಶ್ವ ಕಪ್ ವಿಜಯದ 12ನೇ ವಾರ್ಷಿಕೋತ್ಸವವನ್ನು ಏಪ್ರಿಲ್ 2ರಂದು ಮುಂಬಯಿಯ ವಾಂಖೆಡೆ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿತ್ತು. ಇದೇ ವೇಳೆ ಮಹೇಂದ್ರ ಸಿಂಗ್ ಧೋನಿಗೆ ಸನ್ಮಾನ ಮಾಡಿ ಬಳಿಕ ಚೆಂಡು ಬಿದ್ದ ಜಾಗದಲ್ಲಿನ ನಾಲ್ಕು ಆಸನಗಳಿಗೆ ಧೋನಿ ಅವರ ಹೆಸರನ್ನು ಇಡಲಾಗಿತ್ತು. ಇದೀಗ ಎಂಸಿಎ ಕ್ರಿಕೆಟ್ ವೆಬ್‌ಸೈಟ್‌ನಲ್ಲಿ, ‘2011 ವರ್ಲ್ಡ್ ಕಪ್ ಮೆಮೋರಿಯಲ್ ಸೀಟ್’ ಎನ್ನುವ ಸೆಕ್ಷನ್ ಅಡಿ ಇಲ್ಲಿನ ಎರಡು ಸೀಟ್ ಖರೀದಿಸಲು ಆಯ್ಕೆಯೊಂದನ್ನು ನೀಡಲಾಗಿದೆ.
ಹಾಸ್ಪಿಟಾಲಿಟಿ ವ್ಯವಸ್ಥೆ
ಈ ಕುರಿತಂತೆ ಮಾತನಾಡಿರುವ ಮುಂಬೈ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಅಮೋಲ್ ಕಾಳೆ “ಎರಡು ಸೀಟುಗಳಗೆ ಶಾಶ್ವತವಾಗಿ ಎಂ ಎಸ್ ಧೋನಿ ಹೆಸರಿಡಲಾಗಿದೆ. ವಿಶ್ವಕಪ್ ವೇಳೆ ಈ ಸೀಟ್‌ಗಳನ್ನು ಸುಂದರವಾಗಿ ಡಿಸೈನ್ ಮಾಡಲಿದ್ದೇವೆ. ಈ ಸೀಟ್‌ಗಳು ಒಂದು ರೀತಿ ಸೋಪಾ ರೀತಿಯಲ್ಲಿ ಇರಲಿದ್ದು, ಹಾಸ್ಪಿಟಾಲಿಟಿ ವ್ಯವಸ್ಥೆಯನ್ನು ಹೊಂದಿರಲಿದೆ. ಮುಂದಿನ 10 ದಿನಗಳಲ್ಲಿ ನಾವು ಈ ಸೀಟ್‌ಗಳ ಹರಾಜು ಹಾಕಲಿದ್ದೇವೆ” ಎಂದು ತಿಳಿಸಿದ್ದಾರೆ.
#WATCH | Mumbai: MS Dhoni inaugurates 2011 World Cup victory memorial at the Wankhede stadium
— ANI (@ANI) April 7, 2023
Memorial has been built at the location where MS Dhoni’s historic winning six from 2011 WC had landed in the stands pic.twitter.com/PEGSksnWNa
ಫೈನಲ್ ಪಂದ್ಯದಲ್ಲಿ ಭಾರತ ತಂಡದ ಗೆಲುವಿಗೆ 275 ರನ್ಗಳು ಬೇಕಾಗಿದ್ದವು. ಅಂತೆಯೇ ಆರಂಭಿಕ ಬ್ಯಾಟರ್ ಗೌತಮ್ ಗಂಭೀರ್ 97 ರನ್ ಬಾರಿಸಿ ಉತ್ತಮ ಅಡಿಪಾಯ ಹಾಕಿಕೊಟ್ಟಿದ್ದರು. ಸೆಹ್ವಾಗ್ ಸೊನ್ನೆಗೆ ಔಟಾಗಿದ್ದರೆ ಸಚಿನ್ ಕೊಡಗೆ 18 ರನ್. ಆದರೆ, ಕೊನೇ ಹಂತದಲ್ಲಿ ಕ್ರೀಸ್ಗೆ ತಳವೂರಿ ಆಡಿದ್ದ ನಾಯಕ ಧೋನಿ ಅಜೇಯ 91 ರನ್ ಬಾರಿಸಿ ಭಾರತದ ಗೆಲುವಿಗೆ ಕಾರಣರಾಗಿದ್ದರು. ಅಂತೆಯೇ ಇನಿಂಗ್ಸ್ನ ಕೊನೇ ಓವರ್ನಲ್ಲಿ ಲಂಕಾ ಬೌಲರ್ ನುವಾನ್ ಕುಲಶೇಖರ ಅವರ ಎಸೆತಕ್ಕೆ ಸಿಕ್ಸರ್ ಬಾರಿಸಿದ್ದರು. ಅದು ಭಾರತದ ವಿಜಯ ರನ್ ಆಗಿತ್ತು.
ಅಕ್ಟೋಬರ್ 5ರಿಂದ ನವೆಂಬರ್ 19ರ ವರೆಗೆ ಭಾರತದ ಆತಿಥ್ಯದಲ್ಲಿ ಏಕದಿನ ವಿಶ್ವಕಪ್ ಟೂರ್ನಿ ನಡೆಯಲಿದೆ. ನ್ಯೂಜಿಲ್ಯಾಂಡ್ ತಂಡ ಉದ್ಘಾಟನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ ಕಣಕ್ಕಿಳಿಯುವ ಮೂಲಕ ತನ್ನ ವಿಶ್ವಕಪ್ ಅಭಿಯಾನ ಆರಂಭಿಸಲಿದೆ. ಈ ಪಂದ್ಯ ಅಹಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ.