ರಾಂಚಿ: ಮಹೇಂದ್ರ ಸಿಂಗ್ ಧೋನಿ(MS Dhoni) ಭಾರತ ಕ್ರಿಕೆಟ್ ತಂಡಕ್ಕೆ ಎರಡು ವಿಶ್ವ ಕಪ್ ಮತ್ತು ಐಸಿಸಿ ಟ್ರೋಫಿ ಗೆದ್ದು ಕೊಟ್ಟ ನಾಯಕ. ಕ್ರಿಕೆಟ್ ಮೈದಾನದಲ್ಲಿ ಶಾಂತಿಯಿಂದ ವರ್ತಿಸುವ ಅವರು, ಬ್ಯಾಟಿಂಗ್, ವಿಕೆಟ್ ಕೀಪಿಂಗ್ ಅಥವಾ ನಾಯಕನಾಗೇ ಇರಲಿ ಶಾಂತಚಿತ್ತದಿಂದ ಕಂಡು ಬರುತ್ತಾರೆ. ಎಂತಹ ಸನ್ನಿವೇಶವಿದ್ದರೂ ಧೋನಿ ತಾಳ್ಮೆ ಕಳೆದುಕೊಳ್ಳುವುದು ವಿರಳ. ಇದಕ್ಕಾಗಿ ಅವರಿಗೆ “ಕ್ಯಾಪ್ಟನ್ ಕೂಲ್’ ಎಂಬ ಹೆಸರು ಕೂಡ ಇದೆ. ಇಂದು(ಜುಲೈ 7) ಅವರಿಗೆ 42ನೇ ಹುಟ್ಟುಹಬ್ಬದ(ms dhoni birthday) ಸಂಭ್ರಮ. ಆದರೆ ಅವರಿಗೂ ಮೂಢನಂಬಿಕೆ(superstition) ಮೇಲೆ ವಿಶ್ವಾಸವಿತ್ತು.
ಹಲವು ಕ್ರಿಕೆಟ್(cricket news) ಆಟಗಾರರಂತೆ ಧೋನಿ ಕೂಡ ಮೂಢನಂಬಿಕೆಯನ್ನು ನಂಬುತ್ತಿದ್ದರು. ಮಹತ್ವದ ಪಂದ್ಯ ಆಡುವ ಮುನ್ನ ಅವರು ಅಕ್ಕಿ ಮತ್ತು ಮೊಸರಿನಿಂದ ತಯಾರಿಸಿದ ಕಿಚಡಿಯನ್ನು ಮಾತ್ರ ಸವಿದು ಪಂದ್ಯವನ್ನಾಡಲು ಮೈದಾನಕ್ಕೆ ಇಳಿಯುತ್ತಿದ್ದರಂತೆ. ಈ ವಿಚಾರವನ್ನು ಮಾಜಿ ಆಟಗಾರ ವೀರೇಂದ್ರ ಸೆಹವಾಗ್(Virender Sehwag) ಅವರು ಸಂದರ್ಶನವೊಂದರಲ್ಲಿ ಹೇಳಿದ್ದರು.
ತಮ್ಮ ಕಿಚಡಿಯ ಭವಿಷ್ಯವನ್ನು ಹಿಂದೊಮ್ಮೆ ಧೋನಿ ಅವರು ವಿಶ್ವಕಪ್ ಗೆಲುವಿನ ಸಂಭ್ರದ ವೇಳೆ ಪರೋಕ್ಷವಾಗಿ. ಹೇಳಿದ್ದರು. ಕಿಚಡಿ ತಿಂದಿದ್ದು ಹೆಚ್ಚು ಪ್ರಯೋಜನವಾಯಿತು ಎಂದು ಹೇಳಿದ್ದರು.
“2011ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಶ್ರೀಲಂಕಾ ವಿರುದ್ಧ ಫೈನಲ್ ಆಡುವ ಮುನ್ನ ಎಲ್ಲ ಆಟಗಾರರು ಕೂಡ ಭೋಜನವನ್ನು ಮಾಡಿದ್ದೆವು. ಆದರೆ ಧೋನಿ ಮಾತ್ರ ಅಕ್ಕಿ ಹಾಗೂ ಮೊಸರಿನಿಂದ ತಯಾರಿಸಿದ ಕಿಚಡಿಯನ್ನು ಮಾತ್ರ ತಿಂದಿದ್ದರು. ಇದು ಸೇವಿಸಿ ಆಡಿದರೆ ಪಂದ್ಯ ಗೆಲ್ಲುತ್ತದೆ ಎಂಬುದು ಅವರ ನಂಬಿಕೆಯಾಗಿತ್ತು. ಹೀಗಾಗಿ ಧೋನಿ ಕಿಚಡಿ ತಿಂದು ಪಂದ್ಯ ಆಡಿದ್ದರು. ಅವರ ನಂಬಿಕೆಯಂತೆ ಭಾರತ ಕಪ್ ಕೂಡ ಗೆದ್ದಿತ್ತು. ಗೆಲುವಿನ ಸಿಕ್ಸರ್ ಕೂಡ ಅವರೇ ಬಾರಿಸಿದ್ದರು” ಎಂದು ಧೋನಿಗೆ ಇದ್ದ ಮೂಢನಂಬಿಕೆಯ ವಿಷಯವನ್ನು ಅವರ ಸಹ ಆಟಗಾರನಾಗಿದ್ದ ವೀರೇಂದ್ರ ಸೆಹವಾಗ್ ರಿವಿಲ್ ಮಾಡಿದ್ದರು.
ಇದನ್ನೂ ಓದಿ MS Dhoni: ಕ್ಯಾಪ್ಟನ್ ಕೂಲ್ ಧೋನಿಯೂ ಆ್ಯಂಗ್ರಿಮ್ಯಾನ್ ಆಗಿ ಬದಲಾಗಿದ್ದರು!
ಧೋನಿ ಅವರು ತಮ್ಮ ತವರಾದ ರಾಂಚಿಯಲ್ಲಿರುವ ಮಾ ದಿಯೋರಿ ದೇವಸ್ಥಾನಕ್ಕೆ ಭೇಟಿ ನೀಡುತ್ತಲೇ ಇರುತ್ತಾರೆ. ಇಲ್ಲಿ ವಿಶೇಷ ಪೋಜೆ ಸಲ್ಲಿಸಿ ದೇವರ ದರ್ಶನ ಪಡೆಯುತ್ತಿರುತ್ತಾರೆ. ಯಾವುದೇ ಮಹತ್ವದ ಟೂರ್ನಿಗೂ ಮುನ್ನ ಧೋನಿ ಅವರು ಈ ದೇವಸ್ಥಾನಕ್ಕೆ ಒಮ್ಮೆ ಭೇಟಿ ನೀಡಿ ದೇವರ ದರ್ಶನ ಪಡೆಯುವುದು ಅವರ ನಂಬಿಕೆಯಾಗಿದೆ. ಧೋನಿ ಈ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಫೋಟೊಗಳು ಅನೇಕ ಬಾರಿ ವೈರಲ್ ಕೂಡ ಆಗಿತ್ತು.