ನವದೆಹಲಿ: ವಿಶ್ವಕಪ್ ವಿಜೇತ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಎಸ್ ಧೋನಿ(MS Dhoni) ವಿರುದ್ಧ ಅವರ ಮಾಜಿ ವ್ಯಾಪಾರ ಪಾಲುದಾರರು(MS Dhoni ex-business partners) ಸಲ್ಲಿಸಿರುವ ಮಾನನಷ್ಟ ಮೊಕದ್ದಮೆಯನ್ನು(defamation ) ದೆಹಲಿ ಹೈಕೋರ್ಟ್(Delhi High Court) ಜನವರಿ 29 ರಂದು ವಿಚಾರಣೆ ನಡೆಸಲಿದೆ.
ಹೈಕೋರ್ಟ್ ಧೋನಿ ವಿರುದ್ಧದ ಪ್ರಕರಣದ ಬಗ್ಗೆ ತಿಳಿಸುವಂತೆ ರಿಜಿಸ್ಟ್ರಾರ್‌ಗೆ ಸೂಚಿಸಿದ್ದು, ನ್ಯಾಯಮೂರ್ತಿ ಪ್ರತಿಭಾ ಸಿಂಗ್ ಅವರ ಪೀಠವು ಪ್ರಸ್ತುತ ಮೊಕದ್ದಮೆಯನ್ನು ನೇರವಾಗಿ ಧೋನಿಗೆ ತಿಳಿಸುವುದು ಸೂಕ್ತವೆಂದು ಪರಿಗಣಿಸಿದೆ. ನ್ಯಾಯಾಲಯವು ರಿಜಿಸ್ಟ್ರಾರ್ ಅವರಿಗೆ ಇಮೇಲ್ ನೀಡಲು ಮತ್ತು ಅವರನ್ನು ಪ್ರತಿನಿಧಿಸುವ ಕಾನೂನು ಸಂಸ್ಥೆಗೆ ಸೂಚನೆಯನ್ನು ಕಳುಹಿಸಲು ಕೇಳಿದೆ.
ಧೋನಿ ಅವರ ಮಾಜಿ ಉದ್ಯಮ ಪಾಲುದಾರರಾದ ಮಿಹಿರ್ ದಿವಾಕರ್ ಮತ್ತು ಸೌಮ್ಯ ದಾಸ್ ಅವರ ವಿರುದ್ಧ ದೆಹಲಿ ಹೈಕೋರ್ಟ್‌ನಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಜತೆಗೆ ಮೆಟಾ, ಎಕ್ಸ್ , ಯೂಟ್ಯೂಬ್, ಗೂಗಲ್ ಮತ್ತು ಹಲವಾರು ಇತರ ಮಾಧ್ಯಮ ಸಂಸ್ಥೆಗಳು ಮತ್ತು ವೆಬ್ ಪೋರ್ಟಲ್‌ಗಳ ವಿರುದ್ಧವೂ ಮೊಕದ್ದಮೆ ಹೂಡಿದ್ದಾರೆ.
ಈ ಮೊಕದ್ದಮೆಯಲ್ಲಿ, ದಿವಾಕರ್ ಮತ್ತು ಸೌಮ್ಯ ದಾಸ್ ಅವರು ಧೋನಿ ವಿಚಾರದಲ್ಲಿ ತಮ್ಮ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಸೇರಿದಂತೆ ಹಲವು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಮಾನಹಾನಿಕರ, ಸುಳ್ಳು ಮತ್ತು ದುರುದ್ದೇಶಪೂರಿತ ಹೇಳಿಕೆಗಳನ್ನು ಪ್ರಕಟಿಸದಂತೆ ತಡೆಯಾಜ್ಞೆ ಕೋರಿದ್ದಾರೆ.
ಇದನ್ನೂ ಓದಿ Ram Mandir : ಧೋನಿಗೆ ಸಿಕ್ಕಿತು ರಾಮ ಮಂದಿರ ಉದ್ಘಾಟನೆಯ ಆಹ್ವಾನ
“ಧೋನಿ ನನ್ನ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಿ, ನನ್ನ ಹೆಸರು ಕೆಡಿಸಲು ಪ್ರಯತ್ನಿಸಿದ್ದಾರೆ. ಧೋನಿಯ ಆರೋಪ ಕೇಳಿ ಕೆಲ ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮಗಳು ನನ್ನ ಬಗ್ಗೆ ಸುಳ್ಳು ಸುದ್ದಿಯನ್ನು ಪ್ರಸಾರ ಮಾಡುತ್ತಿದೆ. ಇದನ್ನು ತಕ್ಷಣ ನಿಲ್ಲಿಸಬೇಕು. ಸತ್ಯ ಏನೆಂಬಹುದನ್ನು ಮೊದಲು ತಿಳಿದು ಆ ಬಳಿಕ ಸುದ್ದಿಯನ್ನು ಪ್ರಸಾರ ಮಾಡಬೇಕು. ನನ್ನ ಬಗ್ಗೆ ಪ್ರಸಾರವಾದ ಸುದ್ದಿ ಸಂಪೂರ್ಣವಾಗಿ ಆಧಾರರಹಿತವಾಗಿದೆ. ಇದರಿಂದ ಮತ್ತು ನನ್ನ ಸಾಮಾಜಿಕ ಖ್ಯಾತಿ ಹಾಗೂ ವ್ಯಾಪಾರದಲ್ಲಿ ನಷ್ಟವನ್ನುಂಟುಮಾಡಲು ನನ್ನ ಮಾನಹಾನಿಗಾಗಿ ಮಾಡಲಾಗಿದೆ” ಎಂದು ಮಿಹಿರ್ ದಿವಾಕರ್ ಕೆಲ ದಿನಗಳ ಹಿಂದೆ ಮಾಧ್ಯಮದ ಮುಂದೆ ಹೇಳಿದ್ದರು.
ಧೋನಿಯೇ ಹಣ ನೀಡಬೇಕು
“ಸಂಸ್ಥೆಯಲ್ಲಿ ಧೋನಿ ಹಾಗೂ ಅವರ ನಿರ್ದೇಶಕರು ಅವ್ಯವಹಾರ ನಡೆಸಿ, ನನ್ನ ಮೇಲೆ ಆರೋಪ ಹೋರಿಸುತ್ತಿದ್ದಾರೆ. ಆರ್ಕಾ ಅಕಾಡೆಮಿಯ ಲಾಭ, ಶೇರುಗಳಲ್ಲಿ ಒಪ್ಪಂದವಾಗಿತ್ತು ಎಂದು ಧೋನಿ ಹೇಳಿದ್ದಾರೆ. ಆದರೆ ಒಪ್ಪಂದದಲ್ಲಿ ಈ ರೀತಿ ಉಲ್ಲೇಖವೇ ಆಗಿಲ್ಲ. ಇದೆಲ್ಲ ಸುಳ್ಳು. ಧೋನಿಯ ವ್ಯವಹಾರಗಳನ್ನು ನಾನು ನೋಡಿಕೊಳ್ಳುತ್ತಿದ್ದೆ. ಅವರೇ ನನಗೆ 5 ಕೋಟಿ ನೀಡಬೇಕು. ನಾನು ಧೋನಿಗೆ ಯಾವುದೇ ಹಣ ಬಾಕಿ ಇಟ್ಟಿಲ್ಲ. ಎಲ್ಲ ಒಪ್ಪಂದದ ಮತ್ತು ವ್ಯವಹಾರದ ಪತ್ರಗಳು ನನ್ನ ಬಳಿ ಇದೆ” ಎಂದು ದಿವಾಕರ್ ದೂರಿದ್ದರು.
ಧೋನಿಯ ಆರೋಪ
2017ರಲ್ಲಿ ದಿವಾಕರ್ ಅವರು ಧೋನಿಯೊಂದಿಗೆ ಜಾಗತಿಕವಾಗಿ ಕ್ರಿಕೆಟ್ ಅಕಾಡೆಮಿ ಸ್ಥಾಪಿಸಲು ಒಪ್ಪಂದ ಮಾಡಿಕೊಂಡಿದ್ದರು. ಆದರೆ, ದಿವಾಕರ್ ಒಪ್ಪಂದದಲ್ಲಿ ವಿವರಿಸಿರುವ ಷರತ್ತುಗಳನ್ನು ಪಾಲಿಸಲು ವಿಫಲರಾಗಿದ್ದು 15 ಕೋಟಿ ರೂಪಾಯಿ ವಂಚನೆ ಮಾಡಿದ್ದಾರೆ ಎಂದು ಅಕಾಡೆಮಿಯ ಮಿಹಿರ್ ದಿವಾಕರ್, ಸೌಮ್ಯ ವಿಶ್ವಾಸ್ ವಿರುದ್ಧ ರಾಂಚಿ ನ್ಯಾಯಾಲಯದಲ್ಲಿ ಧೋನಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದರು. ಜತೆಗೆ ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಧೋನಿ ಹಲವು ಬಾರಿ ನೋಟಿಸ್ ನೀಡಿದ್ದರು ಎನ್ನಲಾಗಿತ್ತು.