ನವದೆಹಲಿ: ಖಾಸಗಿ ಚಾನೆಲ್ ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಟೀಮ್ ಇಂಡಿಯಾದ ಕುರಿತು ಹಲವು ಆಘಾತಕಾರಿ ವಿಚಾರಗಳನ್ನು ಬಹಿರಂಗಪಡಿಸಿದ ಚೇತನ್ ಶರ್ಮಾ(Chetan Sharma) ಭಾರತ ತಂಡದ ಮುಖ್ಯ ಆಯ್ಕೆಗಾರ ಸ್ಥಾನದಿಂದ ಕೆಳಗಿಳಿದಿದ್ದಾರೆ.
ಚೇತನ್ ಶರ್ಮಾ ರಾಜಿನಾಮೆ ನೀಡಿದ ಬೆನ್ನಲ್ಲೇ ಈ ಸ್ಥಾನಕ್ಕೆ ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ(MS Dhoni) ಅವರನ್ನು ಆಯ್ಕೆ ಮಾಡಿ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಡ್ಯಾನಿಶ್ ಕನೇರಿಯಾ ಅವರು ಬಿಸಿಸಿಐಗೆ ಸಲಹೆ ನೀಡಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಡ್ಯಾನಿಶ್ ಕನೇರಿಯಾ, “ಬಿಸಿಸಿಐ ಅಧಿಕಾರಿಗಳು ಎಂ.ಎಸ್ ಧೋನಿ ಅವರ ಜತೆ ಒಂದು ಬಾರಿ ಮಾತನಾಡಬೇಕು. ಧೋನಿ ಅವರ ಮುಂದಿನ ಯೋಜನೆ ಏನು, ಮತ್ತು ಅವರು ಮುಖ್ಯ ಆಯ್ಕೆಗಾರರಾಗಬಹುದೇ ಎಂದು ಅವರನ್ನು ಕೇಳಬೇಕು” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ Chetan Sharma resign: ಭಾರತೀಯ ಕ್ರಿಕೆಟ್ ಆಯ್ಕೆ ಸಮಿತಿಯ ಮುಖ್ಯಸ್ಥನ ಸ್ಥಾನಕ್ಕೆ ಚೇತನ್ ಶರ್ಮಾ ರಾಜೀನಾಮೆ
ಖಾಸಗಿ ವಾಹಿನಿಯೊಂದು ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಚೇತನ್ ಶರ್ಮಾ ಅವರು ಟೀಮ್ ಇಂಡಿಯಾ ಆಟಗಾರರು ಪೂರ್ಣ ಪ್ರಮಾಣದ ಫಿಟ್ನೆಸ್ ಹೊಂದಲು ಹಾಗೂ ಗಾಯಗಳನ್ನು ಮುಚ್ಚಿಡಲು ನಿಷೇಧಿತ ಇಂಜೆಕ್ಷನ್ ತೆಗೆದುಕೊಳ್ಳುತ್ತಾರೆ, ಹಾಗೂ ಸೌರವ್ ಗಂಗೂಲಿ ಮತ್ತು ವಿರಾಟ್ ಕೊಹ್ಲಿ ವಿವಾದದಲ್ಲಿ ನಿಜವಾಗಿ ನಡೆದಿದ್ದೇನು ಹೀಗೆ ಹಲವು ವಿಚಾರಗಳ ಮಾತನಾಡಿದ ವಿಡಿಯೊವೊಂದು ಲೀಕ್ ಆಗಿತ್ತು.