Site icon Vistara News

ಧೋನಿಗೂ ಇತ್ತು ಮೂಢನಂಬಿಕೆ ಮೇಲೆ ವಿಶ್ವಾಸ; ರಹಸ್ಯ ಬಯಲು ಮಾಡಿದ ಸೆಹವಾಗ್​

MS Dhoni relishes delicious dishes with his wife Sakshi

ನವದೆಹಲಿ: ಮಹೇಂದ್ರ ಸಿಂಗ್‌ ಧೋನಿ(MS Dhoni) ಭಾರತ ಕ್ರಿಕೆಟ್​ ತಂಡಕ್ಕೆ ಎರಡು ವಿಶ್ವ ಕಪ್​ ಮತ್ತು ಐಸಿಸಿ ಟ್ರೋಫಿ ಗೆದ್ದು ಕೊಟ್ಟ ನಾಯಕ. ಕ್ರಿಕೆಟ್‌ ಮೈದಾನದಲ್ಲಿ ಶಾಂತಿಯಿಂದ ವ‌ರ್ತಿಸುವ ಅವರು, ಬ್ಯಾಟಿಂಗ್‌, ವಿಕೆಟ್‌ ಕೀಪಿಂಗ್‌ ಅಥವಾ ನಾಯಕನಾಗೇ ಇರಲಿ ಶಾಂತಚಿತ್ತದಿಂದ ಕಂಡು ಬರುತ್ತಾರೆ. ಎಂತಹ ಸನ್ನಿವೇಶವಿದ್ದರೂ ಧೋನಿ ತಾಳ್ಮೆ ಕಳೆದುಕೊಳ್ಳುವುದು ವಿರಳ. ಇದಕ್ಕಾಗಿ ಅವರಿಗೆ “ಕ್ಯಾಪ್ಟನ್‌ ಕೂಲ್‌’ ಎಂಬ ಹೆಸರು ಕೂಡ ಇದೆ. ಆದರೆ ಅವರಿಗೂ ಮೂಢನಂಬಿಕೆ(superstition) ಮೇಲೆ ವಿಶ್ವಾಸವಿತ್ತು ಎಂದು ಮಾಜಿ ಆಟಗಾರ ವೀರೇಂದ್ರ ಸೆಹವಾಗ್(Virender Sehwag)​ ಹೇಳಿದ್ದಾರೆ.

ಹಲವು ಕ್ರಿಕೆಟ್(cricket news)​ ಆಟಗಾರರಂತೆ ಧೋನಿ ಕೂಡ ಮೂಢನಂಬಿಕೆಯನ್ನು ನಂಬುತ್ತಿದ್ದರು. ಮಹತ್ವದ ಪಂದ್ಯ ಆಡುವ ಮುನ್ನ ಅವರು ಅಕ್ಕಿ ಮತ್ತು ಮೊಸರಿನಿಂದ ತಯಾರಿಸಿದ ಕಿಚಡಿಯನ್ನು ಮಾತ್ರ ಸವಿದು ಪಂದ್ಯವನ್ನಾಡಲು ಮೈದಾನಕ್ಕೆ ಇಳಿಯುತ್ತಿದ್ದರು ಎಂದು ಸೆಹಾವಾಗ್​ ಹೇಳಿದ್ದಾರೆ. ಧೋನಿ ಅವರೇ ಈ ವಿಚಾರವನ್ನು ಪರೋಕ್ಷವಾಗಿ ಒಂದು ಬಾರಿ ಹೇಳಿದ್ದರು. 2011ರ ವಿಶ್ವ ಕಪ್​(2011 World Cup) ಗೆದ್ದ ಬಳಿಕ ನಡೆದ ಕಾರ್ಯಕ್ರಮವೊಂದರಲ್ಲಿ ಧೋನಿ ಅವರು ಕಿಚಡಿ ತಿಂದಿದ್ದು ಹೆಚ್ಚು ಪ್ರಯೋಜನವಾಯಿತು ಎಂದು ಹೇಳಿದ್ದರು.

“2011ರ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಶ್ರೀಲಂಕಾ ವಿರುದ್ಧ ಫೈನಲ್​ ಆಡುವ ಮುನ್ನ ಎಲ್ಲ ಆಟಗಾರರು ಕೂಡ ಭೋಜನವನ್ನು ಮಾಡಿದ್ದೆವು. ಆದರೆ ಧೋನಿ ಮಾತ್ರ ಅಕ್ಕಿ ಹಾಗೂ ಮೊಸರಿನಿಂದ ತಯಾರಿಸಿದ ಕಿಚಡಿಯನ್ನು ಮಾತ್ರ ತಿಂದಿದ್ದರು. ಇದು ಸೇವಿಸಿ ಆಡಿದರೆ ಪಂದ್ಯ ಗೆಲ್ಲುತ್ತದೆ ಎಂಬುದು ಅವರ ನಂಬಿಕೆಯಾಗಿತ್ತು. ಹೀಗಾಗಿ ಧೋನಿ ಕಿಚಡಿ ತಿಂದು ಪಂದ್ಯ ಆಡಿದ್ದರು. ಅವರ ನಂಬಿಕೆಯಂತೆ ಭಾರತ ಕಪ್​ ಕೂಡ ಗೆದ್ದಿತ್ತು. ಗೆಲುವಿನ ಸಿಕ್ಸರ್​ ಕೂಡ ಅವರೇ ಬಾರಿಸಿದ್ದರು” ಎಂದು ಧೋನಿಗೆ ಇದ್ದ ಮೂಢನಂಬಿಕೆಯ ವಿಷಯವನ್ನು ಅವರ ಸಹ ಆಟಗಾರನಾಗಿದ್ದ ವೀರೇಂದ್ರ ಸೆಹವಾಗ್​ ರಿವಿಲ್​ ಮಾಡಿದ್ದಾರೆ. ಆದರೆ ಧೋನಿ ಮಾತ್ರ ಈ ವಿಚಾರವನ್ನು ಎಲ್ಲಯೂ ಅಧಿಕೃತವಾಗಿ ಹೇಳಿಲ್ಲ.

ಇದನ್ನೂ ಓದಿ Team India: ಆಯ್ಕೆ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಅರ್ಜಿ ಸಲ್ಲಿಸಿಲ್ಲ; ಸೆಹವಾಗ್​ ಸ್ಪಷ್ಟನೆ

ಭಾರತ ತಂಡದ ಯುವ ಆಟಗಾರ ಶುಭಮನ್​ ಗಿಲ್​ ಕೂಡ ಆರಂಭದಲ್ಲಿ ಬ್ಯಾಟಿಂಗ್​ಗೆ ಬರುತ್ತಿದ್ದ ವೇಳೆ ಸೊಂಟದಲ್ಲಿ ಸಣ್ಣ ಕೆಂಪು ಬಣ್ಣದ ಬಟ್ಟೆಯೊಂದನ್ನು ಇಟ್ಟುಕೊಂಡು ಆಡುತ್ತಿದ್ದರು. ಸ್ವತಃ ಅವರೇ ಈ ಬಟ್ಟೆಯನ್ನು ತಾನು ಇಟ್ಟುಕೊಂಡರೆ ಆ ದಿನ ಉತ್ತಮ ಬ್ಯಾಟಿಂಗ್​ ಮಾಡಲು ಸಾಧ್ಯವಾಗುತ್ತದೆ. ಇದು ನನ್ನ ಅದೃಷ್ಟ ಮತ್ತು ನಂಬಿಕೆ ಎಂದು ಹೇಳಿದ್ದರು. ಹೀಗೆ ಹಲವು ಕ್ರಿಕೆಟಿಗರು ತಮ್ಮದೇ ಆದ ನಂಬಿಕೆಯನ್ನು ಇಟ್ಟುಕೊಂಡಿದ್ದಾರೆ.

Exit mobile version