Site icon Vistara News

MS Dhoni: ನಟ ಯೋಗಿ ಬಾಬುಗೆ ವಿಶೇಷ ಉಡುಗೊರೆ ನೀಡಿದ ಮಹೇಂದ್ರ ಸಿಂಗ್​ ಧೋನಿ

ms dhoni

#image_title

ಚೆನ್ನೈ: ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) ಅವರು ತಮಿಳಿನ ಹಾಸ್ಯ ನಟ ಯೋಗಿ ಬಾಬು(yogi babu) ಅವರಿಗೆ ವಿಶೇಷ ಉಡುಗೊರೆಯೊಂದನ್ನು ನೀಡಿದ್ದಾರೆ. ಆಟೋಗ್ರಾಫ್ ಇರುವ ಬ್ಯಾಟ್​ವೊಂದನ್ನು ಯೋಗಿ ಅವರಿಗೆ ಗಿಫ್ಟ್ ಆಗಿ ನೀಡಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ದೂರವಾದ ಬಳಿಕ ಧೋನಿ ಅವರು ಸಿನಿಮಾ ಕ್ಷೇತ್ರದತ್ತ ಮುಖಮಾಡಿದ್ದಾರೆ. ‘ಧೋನಿ ಎಂಟರ್​ಟೇನ್​ಮೆಂಟ್’ ಎಂಬ ಹೆರಸರಿನಿಂದ ತನ್ನದೇ ಒಂದು ನಿರ್ಮಾಣ ಸಂಸ್ಥೆ ಹುಟ್ಟುಹಾಕಿದ್ದಾರೆ. ಕಳೆದ ತಿಂಗಳು ಜನವರಿ 27 ರಂದು ಧೋನಿ ಎಂಟರ್​ಟೇನ್​ಮೆಂಟ್ ಕಡೆಯಿಂದ ಚೊಚ್ಚಲ ಸಿನಿಮಾ ಕೂಡ ಘೋಷಣೆ ಆಗಿತ್ತು. ಅವರ ಮೊದಲ ಚಿತ್ರಕ್ಕೆ ‘ಲೆಟ್ಸ್ ಗೆಟ್ ಮ್ಯಾರೀಡ್​’ (Lets Get Married) ಎಂದು ಶೀರ್ಷಿಕೆ ಇಡಲಾಗಿದೆ.

ಲೆಟ್ಸ್ ಗೆಟ್ ಮ್ಯಾರೀಡ್ ‘ಎಲ್​ಜಿಎಂ’ ಎಂಬುದು ಸಿನಿಮಾ ಟೈಟಲ್​ನ ಶಾರ್ಟ್​ಫಾರ್ಮ್​. ರಮೇಶ್ ತಮಿಳ್​ಮಣಿ ಅವರು ಚಿತ್ರವನ್ನು ನಿರ್ದೇಶನ ಮಾಡಿದರೆ, ಸಾಕ್ಷಿ ಸಿಂಗ್ ಧೋನಿ ಅವರು ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಯೋಗಿ ಬಾಬು ನಾಯಕ ನಟನಾಗಿ ನಟಿಸಿದ್ದಾರೆ. ಇದೀಗ ಈ ಚಿತ್ರದ ನಾಯಕ ಯೋಗಿ ಬಾಬು ಅವರಿಗೆ ಧೋನಿ ಅವರು ತನ್ನ ಆಟೋಗ್ರಾಫ್ ಇರುವ ಬ್ಯಾಟ್​ವೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಫೋಟೊವನ್ನು ಯೋಗಿ ಬಾಬು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Exit mobile version