Site icon Vistara News

MS Dhoni: ಲಗ್ನ ಪತ್ರಿಕೆಯಲ್ಲಿ ಮಿಂಚಿದ ಎಂ.ಎಸ್​. ಧೋನಿ ಫೋಟೊ

MS Dhoni: MS Dhoni shines in lagna magazine Dhoni's photo

MS Dhoni: MS Dhoni shines in lagna magazine Dhoni's photo

ಬೆಂಗಳೂರು: ಅಭಿಮಾನಿಯೊಬ್ಬರು ತಮ್ಮ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಟೀಮ್ ಇಂಡಿಯಾದ ಮಾಜಿ ಆಟಗಾರ ಮಹೇಂದ್ರ ಸಿಂಗ್​ ಧೋನಿ(MS Dhoni) ಅವರ ಫೋಟೊ ಹಾಕಿಸಿದ್ದು, ಈ ಲಗ್ನ ಪತ್ರಿಕೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್ ಆಗಿದೆ.

ಮಹೇಂದ್ರ ಸಿಂಗ್​ ಧೋನಿ ಅವರ ಅಪ್ಟಟ ಅಭಿಮಾನಿಯಾಗಿರುವ ಇವರು ಕರ್ನಾಟಕದವರು ಎನ್ನುವುದು ವಿಶೇಷ. ಈ ಅಭಿಮಾನಿಯ ಹೆಸರು ಶಮಂತ್ ಕುಮಾರ್ ಪಿ.ಜಿ (ಸಿದ್ಧಾರ್ಥ್). ತನ್ನ ಹೆಸರಿನ ಜತೆಗೆ ವಧುವಿನ ಹೆಸರು ಭವ್ಯಶ್ರೀ (ರಮ್ಯ) ಎಂದು ಮದುವೆ ಕಾರ್ಡ್‌ನಲ್ಲಿ ಒಂದೆಡೆ ಗಣೇಶನ ಫೋಟೊ ಮುದ್ರಿಸಿದ್ದರೆ, ಮತ್ತೊಂದೆಡೆ ಧೋನಿ ಫೋಟೋವನ್ನು ಸಹ ಮುದ್ರಿಸಿದೆ. ಈ ಫೋಟೊ ವೈರಲ್ ಆಗಿದೆ.

ಇದನ್ನೂ ಓದಿ MS Dhoni: ಟೀಮ್​ ಇಂಡಿಯಾದ ಆಯ್ಕೆ ಸಮಿತಿಗೆ ಧೋನಿ ಮುಖ್ಯಸ್ಥರಾಗಲಿ; ಪಾಕ್​ ಕ್ರಿಕೆಟಿಗ ಸಲಹೆ

ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕನಾಗಿರುವ ಧೋನಿ ಅವ ಫೋಟೊವನ್ನು ಈಗಾಗಲೇ ತಮಿಳುನಾಡಿನ ಹಲವಾರು ಅಭಿಮಾನಿಗಳು ಲಗ್ನ ಪತ್ರಿಕೆಯಲ್ಲಿ ಮುದ್ರಿಸಿ ಅಭಿಮಾನ ವ್ಯಕ್ತಪಡಿಸಿದ್ದಾರೆ. ಇದೀಗ ಕರ್ನಾಟಕದ ಅಭಿಮಾನಿಯೂ ತಮ್ಮ ಲಗ್ನ ಪತ್ರಿಕೆಯಲ್ಲಿ ಧೋನಿ ಚಿತ್ರವನ್ನು ಪ್ರಕಟಿಸಿ ಅಭಿಮಾನ ಮರೆದಿದ್ದಾರೆ.

Exit mobile version