Site icon Vistara News

IPL: ಸಾರ್ವಕಾಲಿಕ ಶ್ರೇಷ್ಠ ಐಪಿಎಲ್‌ ತಂಡಕ್ಕೆ ಧೋನಿ ನಾಯಕ; ರೋಹಿತ್​ಗಿಲ್ಲ ಸ್ಥಾನ

MS Dhoni

ಮುಂಬಯಿ: ಸಾರ್ವಕಾಲಿಕ(IPL all-time greatest team) ಶ್ರೇಷ್ಠ ಐಪಿಎಲ್‌(IPL) ತಂಡದ ನಾಯಕರಾಗಿ ಯಶಸ್ವಿ ನಾಯಕರಲ್ಲಿ ಒಬ್ಬರಾಗಿರುವ ಮಹೇಂದ್ರ ಸಿಂಗ್‌ ಧೋನಿ(MS Dhoni) ಆಯ್ಕೆಯಾಗಿದ್ದಾರೆ. ಅಚ್ಚರಿ ಎಂದರೆ 5 ಬಾರಿ ಐಪಿಎಲ್​ ಟ್ರೋಫಿ ಗೆದ್ದ ರೋಹಿತ್​ ಶರ್ಮ(Rohit Sharma) ಅವರು ಈ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ.

ಮಾಜಿ ಕ್ರಿಕೆಟಿಗರಾದ ವಾಸಿಮ್‌ ಅಕ್ರಮ್‌, ಮ್ಯಾಥ್ಯೂ ಹೇಡನ್‌, ಟಾಮ್‌ ಮೂಡಿ, ಡೇಲ್‌ ಸ್ಟೇನ್‌ ಮತ್ತು 70 ಮಂದಿ ಪತ್ರಕರ್ತರು ಸೇರಿಕೊಂಡು 15 ಸದಸ್ಯರ ಈ ತಂಡವನ್ನು ಪ್ರಕಟಿಸಿದ್ದಾರೆ. ಆದರೆ ರೋಹಿತ್​ ಅವರನ್ನು ಆಯ್ಕೆ ಮಾಡದ್ದು ಎಲ್ಲರಿಗೂ ಅಚ್ಚರಿ ತಂದಿದೆ. ರೋಹಿತ್​ ಅಭಿಮಾನಿಗಳು ಈ ತಂಡ ಸರಿಯಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾರ್ವಕಾಲಿಕ ಶ್ರೇಷ್ಠ ಐಪಿಎಲ್​ ತಂಡಕ್ಕೆ ನಾಯಕನಾಗಿರುವ ಮಹೇಂದ್ರ ಸಿಂಗ್​ ಧೋನಿಗೆ ಈ ಬಾರಿ ಐಪಿಎಲ್ ಟೂರ್ನಿ ವಿದಾಯದ ಕೂಟವಾಗಿದೆ. ಕಳೆದ ವರ್ಷವೇ ಧೋನಿ ಅವರು ಐಪಿಎಲ್​ಗೆ ವಿದಾಯ ಹೇಳಲು ನಿರ್ಧರಿಸಿದ್ದರು. ಆದರೆ ಅಭಿಮಾನಿಗಳ ಒತ್ತಾಯದ ಮೇರೆಗೆ ತಮ್ಮ ನಿವೃತ್ತಿಯನ್ನು ಮುಂದೆ ಹಾಕಿದ್ದರು. ಈ ಬಾರಿಯ ಟೂರ್ನಿ ಅವರಿಗೆ ವಿದಾಯದ ಟೂರ್ನಿಯಾಗಲಿದೆ. ಈ ಮೂಲಕ ಧೋನಿ ಎಲ್ಲ ಮಾದರಿಯ ಕ್ರಿಕಟ್​ಗೂ ಗುಡ್​ಬೈ ಹೇಳಲಿದ್ದಾರೆ.

ಸಾರ್ವಕಾಲಿಕ ಶ್ರೇಷ್ಠ ಐಪಿಎಲ್‌ ತಂಡ


ಮಹೇಂದ್ರ ಸಿಂಗ್​ ಧೋನಿ (ನಾಯಕ), ವಿರಾಟ್​ ಕೊಹ್ಲಿ, ಡೇವಿಡ್​ ವಾರ್ನರ್‌, ಕ್ರಿಸ್​ ಗೇಲ್‌, ಸುರೇಶ್​ ರೈನಾ, ಎಬಿ ಡಿ ವಿಲಿಯರ್, ಸೂರ್ಯಕುಮಾರ್‌ ಯಾದವ್​, ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜ, ಕೈರನ್‌ ಪೊಲಾರ್ಡ್‌, ರಶೀದ್‌ ಖಾನ್‌, ಸುನೀಲ್‌ ನಾರಾಯಣ್‌, ಯಜುವೇಂದ್ರ ಚಹಲ್‌, ಲಸಿತ ಮಾಲಿಂಗ, ಜಸ್‌ಪ್ರೀತ್‌ ಬುಮ್ರಾ.

ಇದನ್ನೂ ಓದಿ MS Dhoni: ಧೋನಿಯ ಫಿಟ್​ನೆಸ್ ಫೋಟೊ​ ಕಂಡು ದಂಗಾದ ಅಭಿಮಾನಿಗಳು

ಭಾರತದಲ್ಲೇ ಐಪಿಎಲ್​!


17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌(IPL 2024) ಭಾರತದಲ್ಲಿಯೇ ಆಯೋಜನೆಗೊಳ್ಳಲಿದೆ ಎಂದು ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್(Chairman Arun Singh Dhumal) ಇತ್ತೀಚೆಗೆ ಖಚಿತಪಡಿಸಿದ್ದರು. ಈ ಹಿಂದೆ, ಲೋಕಸಭೆ ಚುನಾವಣೆಯ ಕಾರಣ ಈ ಬಾರಿಯ ಟೂರ್ನಿ(Indian Premier League) ವಿದೇಶದಲ್ಲಿ ನಡೆಯಲಿದೆ ಎಂದು ಊಹಾಪೋಹಗಳು ಇದ್ದವು. ಆದರೆ ಅರುಣ್ ಧುಮಾಲ್ ಭಾರತದಲ್ಲಿಯೇ ಟೂರ್ನಿ ನಡೆಯಲಿದೆ ಎಂದಿದ್ದಾರೆ.

ಮೂಲಗಳ ಪ್ರಕಾರ ಮಾರ್ಚ್ 22ರಿಂದ ಆರಂಭಗೊಂಡು ಮೇ 26ರಂದು ಫೈನಲ್​ ಏರ್ಪಡುವ ಸಾಧ್ಯತೆ ಇದೆ ಎನ್ನಲಾಗಿದೆ. ಸುದ್ದಿ ಸಂಸ್ಥೆ ಐಎಎನ್‌ಎಸ್‌ನೊಂದಿಗೆ ಮಾತನಾಡಿದ ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್, 17ನೇ ಆವೃತ್ತಿಯ ಐಪಿಎಲ್​ ಭಾರತದಲ್ಲಿ ಆಯೋಜಿಸಲಾಗುವುದು ಎಂದು ಹೇಳಿದ್ದರು.

“ಐಪಿಎಲ್ 17ನೇ ಆವೃತ್ತಿಯ ದಿನಾಂಕವನ್ನ ಬಿಸಿಸಿಐ ಶೀಘ್ರದಲ್ಲೇ ಪ್ರಕಟಿಸಲಿದೆ. ಲೋಕಸಭೆ ಚುನಾವಣೆಯ ದಿನಾಂಕಗಳಿಗಾಗಿ ನಾವು ಕಾಯುತ್ತಿದ್ದೇವೆ. ಲೋಕಸಭೆ ಚುನಾವಣೆ ಘೋಷಣೆಯಾದ ತಕ್ಷಣ ಐಪಿಎಲ್ 17ನೇ ಸೀಸನ್ ವೇಳಾಪಟ್ಟಿಯನ್ನ ಬಿಡುಗಡೆ ಮಾಡುತ್ತೇವೆ” ಎಂದು ಧುಮಾಲ್ ಹೇಳಿದ್ದರು.

Exit mobile version