Site icon Vistara News

MS Dhoni: ಧೋನಿಯ ಹೊಸ ಬ್ಯಾಟ್​ಗೂ ಬಾಲ್ಯದ ಗೆಳೆಯನಿಗೂ ಇರುವ ನಂಟೇನು? ಇಲ್ಲಿದೆ ಇಂಟ್ರೆಸ್ಟಿಂಗ್ ಸ್ಟೋರಿ

MS Dhoni Bat

ರಾಂಚಿ: ಭಾರತ ಕ್ರಿಕೆಟ್​ ಕಂಡ ಮೋಸ್ಟ್ ಸಕ್ಸಸ್‌ಫುಲ್ ಕ್ರಿಕೆಟರ್ ಎಂ.ಎಸ್ ಧೋನಿ ಜೀವನಾಧಾರಿತ ‘ಎಂ.ಎಸ್ ಧೋನಿ, ದಿ ಅನ್‌ಟೋಲ್ಡ್ ಸ್ಟೋರಿ’ ಬಾಲಿವುಡ್ ಚಿತ್ರ 2016ರಲ್ಲಿ ಭಾರಿ ಸದ್ದು ಮಾಡಿತ್ತು. ಧೋನಿ ಯಶೋಗಾಥೆಯ ಈ ಚಿತ್ರ ಬಾಲಿವುಡ್ ಬಾಕ್ಸ್ ಆಫೀಸ್‌ನಲ್ಲಿ ಮಾತ್ರವಲ್ಲ, ಚಿತ್ರ ಪ್ರೀಯರ ಮೆಚ್ಚುಗೆಗೂ ಪಾತ್ರವಾಗಿತ್ತು. ಈ ಸಿನೆಮಾದಲ್ಲಿ ಧೋನಿ ಅವರು ಕ್ರಿಕೆಟ್​ ಆಟಗಾರನಾಗಿ ಬೆಳೆದು ಬಂದ, ಅವರಿಗೆ ನೆರವು ನೀಡಿದ ಹೀಗೆ ಹಲವು ಸಂಗತಿಗಳನ್ನು ತೋರಿಸಲಾಗಿತ್ತು. ಇದೀಗ ಧೋನಿ ತಮ್ಮ ಬಾಲ್ಯದ ಸ್ನೇಹಿತನಿಗೆ ವಿಶೇಷ ಗೌರವ ಸೂಚಿಸಿದ್ದಾರೆ.

ಧೋನಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿ ಕೆಳವು ವರ್ಷಗಳಾಗಿವೆ. ಕೇವಲ ಐಪಿಎಲ್​ ಟೂರ್ನಿಯಲ್ಲಿ(IPL 2024) ಮಾತ್ರ ಆಡುತ್ತಿದ್ದಾರೆ. ಕಳೆದ ವರ್ಷವೇ ಅವರು ವಿದಾಯ ಹೇಳಲು ನಿರ್ಧರಿಸಿದ್ದರು. ಆದರೆ ಅಭಿಮಾನಿಗಳ ಒತ್ತಾಯದ ಮೇರೆಗೆ ತಮ್ಮ ನಿವೃತ್ತಿಯನ್ನು ಮುಂದೆ ಹಾಕಿದ್ದರು. ಈ ಬಾರಿಯ ಟೂರ್ನಿ ಅವರಿಗೆ ವಿದಾಯದ ಟೂರ್ನಿಯಾಗಲಿದೆ. ಈ ಮೂಲಕ ಧೋನಿ ಎಲ್ಲ ಮಾದರಿಯ ಕ್ರಿಕಟ್​ಗೂ ಗುಡ್​ಬೈ ಹೇಳಲಿದ್ದಾರೆ.

ವಿದಾಯದ ಐಪಿಎಲ್​ ಟೂರ್ನಿ ಆಡುತ್ತಿರುವ ಧೋನಿ ಅವರು ಬ್ಯಾಟಿಂಗ್​ ಅಭ್ಯಾಸ ಆರಂಭಿಸಿದ್ದಾರೆ. ಧೋನಿ ಅಭ್ಯಾಸ ನಡೆಸುವ ವಿಡಿಯೊ ಮತ್ತು ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಇದೇ ವೇಳೆ ಧೋನಿ ಬ್ಯಾಟ್ ಕೂಡ ಟ್ರೆಂಡ್​ ಆಗಿದೆ. ಹೌದು ಧೋನಿ ತಮ್ಮ ಬ್ಯಾಟ್​ನಲ್ಲಿ ‘ಪ್ರೈಮ್ ಸ್ಪೋರ್ಟ್ಸ್’ ಎಂದು ಬರೆದುಕೊಂಡಿರುವ ಸ್ಟಿಕ್ಕರ್ ​ ಒಂದನ್ನು ಹಾಕಿದ್ದಾರೆ. ಈ ಹಿಂದೆ ಧೋನಿ ಈ ಸ್ಟಿಕ್ಕರ್ ಹಾಕಿರಲಿಲ್ಲ. ಹೌದು, ಧೋನಿ ಈ ಸ್ಟಿಕ್ಕರ್​ ಹಾಕಲು ಕೂಡ ಒಂದು ಕಾರಣವಿದೆ. ಅದೇನೆಂದರೆ ಪ್ರೈಮ್ ಸ್ಪೋರ್ಟ್ಸ್ ಎನ್ನುವುದು ಧೋನಿ ಅವರ ಬಾಲ್ಯದ ಗೆಳೆಯನ ಕ್ರೀಡಾ ಪರಿಕರಗಳ ಶಾಪ್​ನ ಹೆಸರಾಗಿದೆ. ಧೋನಿ ವೃತ್ತಿಜೀವನದ ಆರಂಭಿಕ ಹಂತದಲ್ಲಿ ಅವರಿಗೆ ಬ್ಯಾಟ್​ ಮತ್ತು ಕ್ರಿಕೆಟ್​ ಕಿಟ್​ಗಳನ್ನು ಈ ಶಾಪ್​ನ ಗೆಳೆಯನೇ ನೀಡಿದ್ದರಂತೆ. ಇದೀಗ ತನ್ನ ಗೆಳೆಯನ ಶಾಪ್​ನ ಪ್ರಚಾರಕ್ಕಾಗಿ ಧೋನಿ ಈ ಶಾಪ್​ನ ಹೆಸರನ್ನು ತನ್ನ ಬ್ಯಾಟ್​ನಲ್ಲಿ ಬರೆದುಕೊಂಡಿದ್ದಾರೆ. ಐಪಿಎಲ್​ನಲ್ಲಿ ಇದೇ ಸ್ಟಿಕ್ಕರ್​ ಇರುವ ಬ್ಯಾಟ್​ನಲ್ಲಿ ಧೋನಿ ಕಣಕ್ಕಿಳಿದರು ಅಚ್ಚರಿಯಿಲ್ಲ.

ಇದನ್ನೂ ಓದಿ MS Dhoni: ಐಪಿಎಲ್​ ಆರಂಭಕ್ಕೂ ಮುನ್ನ ಟೆಂಪಲ್ ರನ್ ಶುರು ಮಾಡಿದ ಎಂ.ಎಸ್​ ಧೋನಿ

ಐಪಿಎಲ್​ ನಿವೃತ್ತಿ ಬಳಿಕ ಏನು ಮಾಡಲಿದ್ದೀರ ಎಂದು ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದ ಧೋನಿ, ಸದ್ಯಕ್ಕೆ ನಾನು ಕ್ರಿಕೆಟ್​ ಬಗ್ಗೆ ಮಾತ್ರ ಯೋಚಿಸುತ್ತಿದ್ದೇನೆ. ಆದರೆ ಒಂದಂತು ನಿಜ, ಕ್ರಿಕೆಟ್​ನಿಂದ ನಿವೃತ್ತಿಯಾದ ಬಳಿಕ ಕೆಲ ಕಾಲ ಆರ್ಮಿಯಲ್ಲಿ ಕರ್ತವ್ಯ ನಿರ್ವಹಿಸುತ್ತೇನೆ ಅದು ನನ್ನ ಜೀವನದ ಪ್ರಮುಖ ಗುರಿ ಎಂದು ಮಾಹಿ ಹೇಳಿದ್ದರು.

ಹಾಲಿ ಚಾಂಪಿಯನ್​ ಆಗಿರುವ ಚೆನ್ನೈ ತಂಡ ಈ ಬಾರಿಯ ಆವೃತ್ತಿಗಾಗಿ ಆಟಗಾರರ ಮಿನಿ ಹರಾಜಿನಲ್ಲಿ ಸ್ಟಾರ್​ ಆಟಗಾರರನ್ನು ಖರೀದಿಸಿ ತಂಡವನ್ನು ಬಲಿಷ್ಠಗೊಳಿಸಿದೆ. ಕಳೆದ ಬಾರಿಯ ಟೂರ್ನಿಯಲ್ಲಿ ಬೆರಳೆಣಿಕೆಯ ಅನುಭವಿ ಆಟಗಾರರನ್ನು ಹೊಂದಿದ್ದರೂ ಕಪ್​ ಗೆದ್ದು ಇತಿಹಾಸ ನಿರ್ಮಿಸಿತ್ತು. ಈ ಬಾರಿ ಬಲಿಷ್ಠವಾಗಿ ಗೋಚರಿಸಿದ ಚೆನ್ನೈ ತಂಡ ಮತ್ತೆ ಕಪ್​ ಗೆಲ್ಲುವುದು ಖಚಿತ ಎಂದು ಟೂರ್ನಿ ಆರಂಭಕ್ಕೂ ಮುನ್ನವೇ ಅಭಿಮಾನಿಗಳು ಭವಿಷ್ಯ ನುಡಿಯಲಾರಂಭಿಸಿದ್ದಾರೆ.

Exit mobile version