Site icon Vistara News

MS Dhoni: ಕೋಟಿ ರೂಪಾಯಿಗಳ ಒಪ್ಪಂದ ನಿರಾಕರಿಸಿ ಗೆಳೆತನಕ್ಕೆ ಬೆಲೆ ಕೊಟ್ಟ ಧೋನಿ

Somi Kohli

ಮುಂಬಯಿ: ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರಾದ ಭಾರತ ತಂಡ ಮಾಜಿ ಆಟಗಾರ ಎಂ.ಎಸ್ ಧೋನಿ(MS Dhoni) ಅವರು ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿ ಕೆಲವು ವರ್ಷಗಳಾಗಿವೆ. ಕೇವಲ ಐಪಿಎಲ್​ ಟೂರ್ನಿಯಲ್ಲಿ(IPL 2024) ಮಾತ್ರ ಆಡುತ್ತಿದ್ದಾರೆ. ಕಳೆದ ವರ್ಷವೇ ಅವರು ವಿದಾಯ ಹೇಳಲು ನಿರ್ಧರಿಸಿದ್ದರು. ಆದರೆ ಅಭಿಮಾನಿಗಳ ಒತ್ತಾಯದ ಮೇರೆಗೆ ತಮ್ಮ ನಿವೃತ್ತಿಯನ್ನು ಮುಂದೆ ಹಾಕಿದ್ದರು. ಈ ಬಾರಿಯ ಟೂರ್ನಿ ಅವರಿಗೆ ವಿದಾಯದ ಟೂರ್ನಿಯಾಗಲಿದೆ. ಈ ಮೂಲಕ ಧೋನಿ ಎಲ್ಲ ಮಾದರಿಯ ಕ್ರಿಕಟ್​ಗೂ ಗುಡ್​ಬೈ ಹೇಳಲಿದ್ದಾರೆ.

ವಿದಾಯದ ಐಪಿಎಲ್​ ಟೂರ್ನಿ ಆಡಲಿರುವ ಧೋನಿ ಅವರು ಟೂರ್ನಿಗಾಗಿ ಈಗಾಗಲೇ ಭರದಿಂದ ಅಭ್ಯಾಸ ನಡೆಸುತ್ತಿದ್ದಾರೆ. ಧೋನಿ ಬ್ಯಾಟಿಂಗ್​ ಅಭ್ಯಾಸ ನಡೆಸುತ್ತಿರುವ ವಿಡಿಯೊ ಮತ್ತು ಫೋಟೊಗಳು ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

ಕೆಲ ದಿನಗಳ ಹಿಂದೆ ಧೋನಿ ಬ್ಯಾಟ್ ಟ್ರೆಂಡ್​ ಆಗಿತ್ತು. ಹೌದು ಧೋನಿ ತಮ್ಮ ಬ್ಯಾಟ್​ನಲ್ಲಿ ‘ಪ್ರೈಮ್ ಸ್ಪೋರ್ಟ್ಸ್’ ಎಂದು ಬರೆದುಕೊಂಡಿರುವ ಸ್ಟಿಕ್ಕರ್ ​ ಒಂದನ್ನು ಹಾಕಿದ್ದರು. ಈ ಹಿಂದೆ ಧೋನಿ ಈ ಸ್ಟಿಕ್ಕರ್ ಹಾಕಿರಲಿಲ್ಲ. ಧೋನಿ ಈ ಸ್ಟಿಕ್ಕರ್​ ಹಾಕಲು ಕೂಡ ಒಂದು ಕಾರಣವಿದೆ. ಅದೇನೆಂದರೆ ಪ್ರೈಮ್ ಸ್ಪೋರ್ಟ್ಸ್ ಎನ್ನುವುದು ಧೋನಿ ಅವರ ಬಾಲ್ಯದ ಗೆಳೆಯನ ಕ್ರೀಡಾ ಪರಿಕರಗಳ ಶಾಪ್​ನ ಹೆಸರಾಗಿದೆ. ಧೋನಿ ವೃತ್ತಿಜೀವನದ ಆರಂಭಿಕ ಹಂತದಲ್ಲಿ ಅವರಿಗೆ ಬ್ಯಾಟ್​ ಮತ್ತು ಕ್ರಿಕೆಟ್​ ಕಿಟ್​ಗಳನ್ನು ಈ ಶಾಪ್​ನ ಗೆಳೆಯನೇ ನೀಡಿದ್ದರಂತೆ. ತನ್ನ ಗೆಳೆಯನ ಶಾಪ್​ನ ಪ್ರಚಾರಕ್ಕಾಗಿ ಧೋನಿ ಈ ಶಾಪ್​ನ ಹೆಸರನ್ನು ತನ್ನ ಬ್ಯಾಟ್​ನಲ್ಲಿ ಬರೆದುಕೊಂಡಿದ್ದರು. ಈ ಬಾರಿಯ ಐಪಿಎಲ್​ನಲ್ಲಿ ಇದೇ ಸ್ಟಿಕ್ಕರ್​ ಇರುವ ಬ್ಯಾಟ್​ನಲ್ಲಿ ಧೋನಿ ಕಣಕ್ಕಿಳಿಯಲಿದ್ದಾರೆ. ಇದೀಗ 2019ರ ಏಕದಿನ ವಿಶ್ವಕಪ್​ನಲ್ಲಿ ಧೋನಿ ಅವರು ತಮ್ಮ ಬ್ಯಾಟ್​ನಲ್ಲಿ BSA ಹೆಸರಿನ ಸ್ಟಿಕ್ಕರ್ ಬಳಿಸಿ ತೋರಿದ ಉದಾರತೆಯನ್ನು BAS ನ ಮಾಲೀಕ ಸೋಮಿ ಕೊಹ್ಲಿ ಬಹಿರಂಗಪಡಿಸಿದ್ದಾರೆ.

ಇದನ್ನೂ ಓದಿ MS Dhoni: ಐಪಿಎಲ್​ ಆರಂಭಕ್ಕೂ ಮುನ್ನ ಟೆಂಪಲ್ ರನ್ ಶುರು ಮಾಡಿದ ಎಂ.ಎಸ್​ ಧೋನಿ

1 ರೂ. ಕೂಡ ಪಡೆಯಲಿಲ್ಲ


ಸಂದರ್ಶನವೊಂದರಲ್ಲಿ ಮಾತನಾಡಿದ ಸೋಮಿ ಕೊಹ್ಲಿ, “ಧೋನಿ ಯಾವುದೇ ಹಣವನ್ನು ಪ್ರಸ್ತಾಪಿಸಲಿಲ್ಲ. ಅವರು ಕೇವಲ ‘ನಿಮ್ಮ ಸ್ಟಿಕ್ಕರ್‌ಗಳನ್ನು ನನ್ನ ಬ್ಯಾಟ್‌ಗಳಿಗೆ ಹಾಕಿ ಮತ್ತು ಅವುಗಳನ್ನು ಅಡ್ಡಲಾಗಿ ಕಳುಹಿಸಿ’ ಎಂದು ಹೇಳಿದ್ದರು. ಈ ವೇಳೆ ನಾನು ಅವರಿಗೆ ಮನವರಿಕೆ ಮಾಡಲು ಪ್ರಯತ್ನಿಸಿದೆ. ಲಾಭದಾಯಕ ಒಪ್ಪಂದವನ್ನು ಬಿಡುತ್ತಿದ್ದೀರಿ ಎಂದು ಹೇಳಿದ್ದೆ. ಧೋನಿ ಪತ್ನಿ ಸಾಕ್ಷಿ, ಅವರ ತಂದೆ, ತಾಯಿಗೂ ವಿನಂತಿಸಿದೆ. ರಾಂಚಿಯಲ್ಲಿರುವ ಧೋನಿಯ ಸಿಎ ಪರಮ್‌ಜಿತ್‌ಗೂ ಕೂಡ ಹೇಳಿದೆ. ಆದರೆ ಧೋನಿ ಇದು ನನ್ನ ನಿರ್ಧಾರ ಎಂದು ಹೇಳಿ ಒಂದು ರೂಪಾಯಿ ಕೂಡ ಪಡೆಯದೆ ಸ್ವ ನಿರ್ಧಾರದಿಂದ ನನ್ನ ಕಂಪೆನಿಯ ಹೆಸರನ್ನು ತಮ್ಮ ಬ್ಯಾಟ್​ನಲ್ಲಿ ಬರೆದು ವಿಶ್ವಕಪ್​ ಆಡಿದ್ದರು. ಅವರ ಈ ಉದಾರತೆಯನ್ನು ನಾನು ಎಂದಿಗೂ ಮರೆಯಲಾರೆ” ಎಂದು ಸೋಮಿ ಕೊಹ್ಲಿ, ಹೇಳಿದ್ದಾರೆ. ಈ ವಿಡಿಯೊ ವೈರಲ್​ ಆಗಿದೆ.

Exit mobile version