Site icon Vistara News

MS Dhoni: ಉದ್ದನೆಯ ಕೇಶ ವಿನ್ಯಾಸದ ಹಿಂದಿನ ಕಾರಣ ತಿಳಿಸಿದ ಧೋನಿ

MS Dhoni long-hair look

ಮುಂಬಯಿ: ಭಾರತ ಕ್ರಿಕೆಟ್​ ತಂಡದ ಮಾಜಿ ನಾಯಕ ಹಾಗೂ ಆಟಗಾರ ಮಹೇಂದ್ರ ಸಿಂಗ್ ಧೋನಿ(MS Dhoni) ಅವರು ತಮ್ಮ ಕ್ರಿಕೆಟ್​ ವೃತ್ತುಇ ಬದಕು ಆರಂಭಿಸುವಾಗ ತಮ್ಮ ಕೇಶ ವಿನ್ಯಾಸದಿಂದಲೇ(ms dhoni hairstyle) ಬಾರಿ ಸುದ್ದು ಮಾಡಿದ್ದರು. ಉದ್ದನೆಯ ಕೇಶ ರಾಶಿಯಿಂದ ದೇಶದಲ್ಲಿ ಹೊಸ ಟ್ರೆಂಡ್ ಸೆಟ್ ಮಾಡಿದ್ದರು. ಇದೀಗ ಅವರು ಮತ್ತೆ ಹಿಂದಿನ ಶೈಲಿಯಂತೆ ಉದ್ದನೆಯ ಕೂದಲು ಬಿಟ್ಟಿದ್ದಾರೆ. ಇದರ ಹಿಂದಿರುವ ರಸಸ್ಯವನ್ನು ಕೂಡ ಅವರು ರಿವಿಲ್​ ಮಾಡಿದ್ದಾರೆ.

ಅಭಿಮಾನಿಗಳ ಪ್ರೀತಿಗೋಸ್ಕರ…

ಕೇಶವಿನ್ಯಾಸದ ಬಗ್ಗೆ ಸಂದರ್ಶನವೊಂದರಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಧೋನಿ, ಉದ್ದನೆಯ ಕೂದಲನ್ನು ಕಾಪಾಡಿಕೊಳ್ಳಲು ಕಷ್ಟವಾಗಿದ್ದರೂ ಕೂಡ ನನ್ನ ಅಭಿಮಾನಿಗಳಿಂದ ಪಡೆದ ಪ್ರೀತಿಗಾಗಿ ಇದನ್ನು ಹೀಗೆ ಬಿಟ್ಟಿದ್ದೇನೆ ಎಂದು ಹೇಳುವ ಮೂಲಕ ತಾವು ಉದ್ದ ಕೂದಲು ಬಿಡಲು ಕಾರಣ ಏನೆಂಬುದನ್ನು ಬಹಿರಂಗಪಡಿಸಿದ್ದಾರೆ. ಅಭಿಮಾನಿಗಳ ಬಗ್ಗೆ ಧೋನಿಗೆ ಇರುವ ಕಾಳಜಿಯನ್ನು ಕೇಳಿ ಅವರ ಅಭಿಮಾನಿಗಳು ಮತ್ತಷ್ಟು ಸಂತಸಗೊಂಡಿದ್ದಾರೆ.

ಇದನ್ನೂ ಓದಿ ಧೋನಿ ಪರಿವಾರದ ಜತೆ ಕ್ರಿಸ್ಮಸ್‌ ಆಚರಿಸಿದ ಪಂತ್​; ಕಾರು ಅಪಘಾತ ನೆನೆದ ಅಭಿಮಾನಿಗಳು!​

ರೆಡಿಯಾಗಲು 1 ಗಂಟೆ ಬೇಕು

“ಈ ಕೇಶವಿನ್ಯಾಸವನ್ನು ನಿರ್ವಹಿಸುವುದು ತುಂಬಾ ಕಷ್ಟ. ಸಣ್ಣ ಕೂದಲು ಇರುವಾಗ ನಾನು ಕೇವಲ 20 ನಿಮಿಷಗಳಲ್ಲಿ ರೆಡಿ ಆಗುತ್ತಿದ್ದೆ, ಈಗ 1 ಗಂಟೆ 10 ನಿಮಿಷಗಳು ತೆಗೆದುಕೊಳ್ಳುತ್ತದೆ. ಅಭಿಮಾನಿಗಳಿಗೋಸ್ಕರ ಮಾತ್ರ ಉದ್ದನೆಯ ಕೇಶವನ್ನು ಬಿಟ್ಟಿದ್ದೇನೆ. ಆದರೆ ಒಂದು ದಿನ ಸಾಕು ಎಂದು ನಿರ್ಧರಿಸುತ್ತೇನೆ” ಎಂದು ಹೇಳಿದ್ದಾರೆ. ಧೋನಿಯ ಈ ಮಾತು ಕೇಳುವಾಗ ಮುಂದಿನ ವರ್ಷದ ಐಪಿಎಲ್​ ಟೂರ್ನಿಯಲ್ಲಿ ವಿದಾಯ ಘೋಷಿಸುವುದು ಖಚಿತ. ಈ ಬಾರಿಯ ಆವೃತ್ತಿಯಲ್ಲೇ ಧೋನಿ ಐಪಿಎಲ್​ ವಿದಾಯ ಹೇಳಬೇಕಿತ್ತು. ಆದರೆ, ಅಭಿಮಾನಿಗಳ ಒತ್ತಾಸೆಯ ಮೇರೆಗೆ ಮತ್ತೊಂದು ಆವೃತ್ತಿ ಆಡಲು ನಿರ್ಧರಿಸಿದ್ದರು.

ನಿವೃತ್ತಿ ಬಳಿಕ ಸೇನೆಯಲ್ಲಿ ಕೆಲಸ ಮಾಡುವೆ…

ಧೋನಿ(MS Dhoni) ಅವರು ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿ ಕೆಳವು ವರ್ಷಗಳಾಗಿವೆ. ಕೇವಲ ಐಪಿಎಲ್​ ಟೂರ್ನಿಯಲ್ಲಿ(IPL 2024) ಮಾತ್ರ ಆಡುತ್ತಿದ್ದಾರೆ. ಮುಂದಿನ ವರ್ಷ ನಡೆಯುವ ಟೂರ್ನಿಯ ಬಳಿಕ ಧೋನಿ ಎಲ್ಲ ಮಾದರಿಯ ಕ್ರಿಕಟ್​ಗೂ ಗುಡ್​ಬೈ ಹೇಳಲಿದ್ದಾರೆ. ನಿವೃತ್ತಿ ಬಳಿಕ ಏನು ಮಾಡಲಿದ್ದೀರ ಎಂದು ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದ ಧೋನಿ. ಸದ್ಯಕ್ಕೆ ನಾನು ಕ್ರಿಕೆಟ್​ ಬಗ್ಗೆ ಮಾತ್ರ ಯೋಚಿಸುತ್ತಿದ್ದೇನೆ. ಆದರೆ ಒಂದಂತು ನಿಜ, ಕ್ರಿಕೆಟ್​ನಿಂದ ನಿವೃತ್ತಿಯಾದ ಬಳಿಕ ಕೆಲ ಕಾಲ ಆರ್ಮಿಯಲ್ಲಿ ಕರ್ತವ್ಯ ನಿರ್ವಹಿಸುತ್ತೇನೆ ಅದು ನನ್ನ ಜೀವನದ ಪ್ರಮುಖ ಗುರಿ ಮಾಹಿ ಹೇಳಿದ್ದರು.

“ನಾನು ಇನ್ನೂ ಕ್ರಿಕೆಟ್ ಆಡುತ್ತಿದ್ದೇನೆ. ಕ್ರಿಕೆಟ್ ನಂತರ ನಾನು ಏನು ಮಾಡುತ್ತೇನೆ ಎಂದು ನೋಡಲು ತುಂಬಾ ಆಸಕ್ತಿದಾಯಕವಾಗಿದೆ. ನಾನು ಖಚಿತವಾಗಿ ಭಾವಿಸುತ್ತೇನೆ, ನಾನು ಸೇನೆಯೊಂದಿಗೆ ಸ್ವಲ್ಪ ಹೆಚ್ಚು ಸಮಯ ಕಳೆಯಲು ಬಯಸುತ್ತೇನೆ, ಏಕೆಂದರೆ ಕಳೆದ ಕೆಲವು ವರ್ಷಗಳಿಂದ ನಾನು ಅದನ್ನು ಮಾಡಲು ಸಾಧ್ಯವಾಗಲಿಲ್ಲ” ಎಂದು ಧೋನಿ ಹೇಳಿದ್ದರು. ಧೋನಿ ಭಾರತದ ಅರೆ ಸೇನಾಪಡೆಯಲ್ಲಿ ಗೌರವ ಲೆಫ್ಟಿನೆಂಟ್‌ ಕರ್ನಲ್‌ ಆಗಿದ್ದಾರೆ. 

Exit mobile version