ಚೆನ್ನೈ: ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್(Chennai Super Kings) ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ(MS Dhoni) ಅವರು 17ನೇ ಆವೃತ್ತಿಯ ಐಪಿಎಲ್(IPL 2024) ಟೂರ್ನಿಗಾಗಿ ಈಗಾಗಲೇ ಅಭ್ಯಾಸ ಆರಂಭಿಸಿದ್ದಾರೆ. ಇದೀಗ ಧೋನಿಯ ಫಿಟ್ ಆ್ಯಂಡ್ ಫೈನ್ ಆಗಿರುವ ಫೋಟೊವೊಂದು ವೈರಲ್ ಆಗಿದೆ. ಜಿಮ್ನಲ್ಲಿ(dhoni fitness gym) ಧೋನಿ ಕಸರತ್ತು ಮಾಡುವ ವೇಳೆ ಈ ಫೋಟೊ ತೆಗೆಯಲಾಗಿದೆ. ‘ಎಂಎಸ್ ಧೋನಿ ಅವರ ಫಿಟ್ನೆಸ್ ಮಟ್ಟ’ ಎಂದು ಅಭಿಮಾನಿಗಳು ಈ ಫೋಟೊಗೆ ಕಮೆಂಟ್ ಮಾಡಿದ್ದಾರೆ.
MS DHONI'S FITNESS LEVEL 💪🔥@MSDhoni #MSDhoni #WhistlePodu pic.twitter.com/LbLa9yct5C
— DHONIsm™ ❤️ (@DHONIism) February 16, 2024
ಜೆರ್ಸಿ ಬಿಡುಗಡೆಗೊಳಿಸಿದ ಸಿಎಸ್ಕೆ
17ನೇ ಆವೃತ್ತಿಯ ಐಪಿಎಲ್ ಟೂರ್ನಿಗಾಗಿ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ಅಭಿಮಾನಿಗಳಿಗಾಗಿ ತಂಡದ ಜೆರ್ಸಿಯನ್ನು ಆನ್ಲೈನ್ನಲ್ಲಿ ಮಾತರಾಟಕ್ಕೆ ಬಿಟ್ಟಿದೆ. ಈಗಾಗಲೇ ಹಲವು ಅಭಿಮಾನಿಗಳು ಜೆರ್ಸಿಯನ್ನು ಖರೀದಇ ಮಾಡಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ವೆಬ್ಸೈಟ್ನಲ್ಲಿ ಈ ಜೆರ್ಸಿಗಳು ಲಭ್ಯವಿದೆ. ಧೋನಿಯ ಜೆರ್ಸಿಗೆ 2,199 ರೂ. ಇದೆ. ಮಕ್ಕಳ ಸೈಜ್ನ ಜೆರ್ಸಿಗೆ 1999 ರೂ. ನಿಗದಿ ಪಡಿಸಲಾಗಿದೆ.
Chennai city filled with #YelloveWear 🫶🏼💛🔥
— Chennai Super Kings (@ChennaiIPL) February 15, 2024
Hit the 🔗 below and pre order the 2024 Official Match Jersey! 🤩
🔗 https://t.co/OLbza1Nhiz
SHOP NOW! 🥳 pic.twitter.com/RBgx5MaBvh
ಬಾಲಿವುಡ್ ನಟಿ ಕತ್ರಿನಾ ಕೈಫ್ ಐಪಿಎಲ್ ಗೆ ಮತ್ತೆ ಲಗ್ಗೆ ಇಡಲಿದ್ದಾರೆ. ಕ್ಯಾಟ್ ಈ ವರ್ಷದ ಐಪಿಎಲ್ ಸೀಸನ್ ನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ರಾಂಡ್ ಅಂಬಾಸಿಡರ್ ಆಗಿ ಸೇರುವ ಸಾಧ್ಯತೆಯಿದೆ. ಒಟ್ಟಾರೆಯಾಗಿ ಐಪಿಎಲ್ 2024 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ನ ಬ್ರಾಂಡ್ ಅಂಬಾಸಿಡರ್ ಆಗಿ ಕತ್ರಿನಾ ಕೈಫ್ ಅವರ ನೇಮಕವು ಫ್ರಾಂಚೈಸಿಯ ಬ್ರಾಂಡ್ ಮೌಲ್ಯವನ್ನು ವೃದ್ಧಿಸಲಿದೆ. ಸ್ಪರ್ಧಾತ್ಮಕ ಕ್ರಿಕೆಟ್ ಕ್ಷೇತ್ರದಲ್ಲಿ ಫ್ರಾಂಚೈಸಿಯ ವ್ಯಾಪ್ತಿಯನ್ನು ಗುರಿಯನ್ನು ಹೊಂದಲಾಗಿದೆ.
A delightful bonus of a quick trip to the hotel gym in Mumbai: a chat with the only other user: @msdhoni. Thanked him for his extraordinary service for the country. Talked of cricket, his trip to Pakistan and his Pakistani fans. Also offered him some completely unsolicited… pic.twitter.com/zU0A7WIW0v
— Ajay Bisaria (@Ajaybis) February 15, 2024
ಇದನ್ನೂ ಓದಿ IPL 2024: ಭಾರತದಲ್ಲೇ ಐಪಿಎಲ್; ಖಚಿತಪಡಿಸಿದ ಅಧ್ಯಕ್ಷ ಅರುಣ್ ಧುಮಾಲ್
ಕಳೆದ ವರ್ಷವೇ ಧೋನಿ ಅವರು ಐಪಿಎಲ್ಗೆ ವಿದಾಯ ಹೇಳಲು ನಿರ್ಧರಿಸಿದ್ದರು. ಆದರೆ ಅಭಿಮಾನಿಗಳ ಒತ್ತಾಯದ ಮೇರೆಗೆ ತಮ್ಮ ನಿವೃತ್ತಿಯನ್ನು ಮುಂದೆ ಹಾಕಿದ್ದರು. ಈ ಬಾರಿಯ ಟೂರ್ನಿ ಅವರಿಗೆ ವಿದಾಯದ ಟೂರ್ನಿಯಾಗಲಿದೆ. ಈ ಮೂಲಕ ಧೋನಿ ಎಲ್ಲ ಮಾದರಿಯ ಕ್ರಿಕಟ್ಗೂ ಗುಡ್ಬೈ ಹೇಳಲಿದ್ದಾರೆ.
MS Dhoni with the 'Prime Sports' sticker bat. It is owned by his friend.
— Mufaddal Vohra (@mufaddal_vohra) February 7, 2024
MS thanking him for all his help during the early stage of his career. pic.twitter.com/sYtcGE6Qal
ಹಾಲಿ ಚಾಂಪಿಯನ್ ಆಗಿರುವ ಚೆನ್ನೈ ತಂಡ ಈ ಬಾರಿಯ ಆವೃತ್ತಿಗಾಗಿ ಆಟಗಾರರ ಮಿನಿ ಹರಾಜಿನಲ್ಲಿ ಸ್ಟಾರ್ ಆಟಗಾರರನ್ನು ಖರೀದಿಸಿ ತಂಡವನ್ನು ಬಲಿಷ್ಠಗೊಳಿಸಿದೆ. ಕಳೆದ ಬಾರಿಯ ಟೂರ್ನಿಯಲ್ಲಿ ಬೆರಳೆಣಿಕೆಯ ಅನುಭವಿ ಆಟಗಾರರನ್ನು ಹೊಂದಿದ್ದರೂ ಕಪ್ ಗೆದ್ದು ಇತಿಹಾಸ ನಿರ್ಮಿಸಿತ್ತು. ಈ ಬಾರಿ ಬಲಿಷ್ಠವಾಗಿ ಗೋಚರಿಸಿದ ಚೆನ್ನೈ ತಂಡ ಮತ್ತೆ ಕಪ್ ಗೆಲ್ಲುವುದು ಖಚಿತ ಎಂದು ಟೂರ್ನಿ ಆರಂಭಕ್ಕೂ ಮುನ್ನವೇ ಅಭಿಮಾನಿಗಳು ಭವಿಷ್ಯ ನುಡಿಯಲಾರಂಭಿಸಿದ್ದಾರೆ.