Site icon Vistara News

MS Dhoni: ನೆಚ್ಚಿನ ಆಟಗಾರನನ್ನು ಹೆಸರಿಸಿದ ಧೋನಿ; ಕೊಹ್ಲಿ, ರೋಹಿತ್​ ಅಲ್ಲ, ಮತ್ಯಾರು?

MS Dhoni

MS Dhoni:Dhoni Picks His Favourite Cricketer And It's Not Virat Kohli Or Rohit Sharma

ರಾಂಚಿ: ಭಾರತ ಕ್ರಿಕೆಟ್​ ತಂಡದ ಮಾಜಿ ಆಟಗಾರ ಮಹೇಂದ್ರ ಸಿಂಗ್​ ಧೋನಿ(MS Dhoni) ಅವರು ತಮ್ಮ ನೆಚ್ಚಿನ ಕ್ರಿಕೆಟಿಗನ ಹೆಸರನ್ನು(Dhoni Picks His Favourite Cricketer) ಬಹಿರಂಗಪಡಿಸಿದ್ದಾರೆ. ಇದುವರೆಗೂ ಅಭಿಮಾನಿಗಳು ಧೋನಿಯ ನೆಚ್ಚಿನ ಕ್ರಿಕೆಟಿಗ ವಿರಾಟ್​ ಕೊಹ್ಲಿ ಅಥವಾ ರೋಹಿತ್​ ಶರ್ಮ ಎಂದು ಭಾವಿಸಿದ್ದರು. ಆದರೆ, ಧೋನಿ ಅವರ ಸದ್ಯದ ಫೇವರಿಟ್​ ಕ್ರಿಕೆಟಿಗನೆಂದರೆ ಅದು ಜಸ್​ಪ್ರೀತ್​ ಬುಮ್ರಾ (Jasprit Bumrah). ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡುವ ವೇಳೆ ಧೋನಿ ಈ ವಿಚಾರವನ್ನು ರಿವೀಲ್​ ಮಾಡಿದ್ದಾರೆ.

ಪ್ರಸ್ತುತ ಕ್ರಿಕೆಟ್​ನಲ್ಲಿ ನಿಮ್ಮ ನೆಚ್ಚಿನ​ ಆಟಗಾರ ಯಾರು ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಧೋನಿ, “ಸದ್ಯ ಫೇವರಿಟ್ ಆಟಗಾರ ವೇಗಿ ಜಸ್​ಪ್ರೀತ್​ ಬುಮ್ರಾ. ಭಾರತ ತಂಡವು ಉತ್ತಮ ಪ್ರದರ್ಶನ ನೀಡುತ್ತಿರುವಾಗ ನಾನು ಬ್ಯಾಟರ್ ನನ್ನು ಆಯ್ಕೆ ಮಾಡುವುದಿಲ್ಲ. ಅವರು ರನ್ ಗಳಿಸುತ್ತಲೇ ಇರುತ್ತಾರೆ. ನಾನು ಬೌಲರ್​ ಬುಮ್ರಾ ಅವರನ್ನು ಆಯ್ಕೆ ಮಾಡುತ್ತೇನೆ” ಎಂದು ಹೇಳುವ ಮೂಲಕ ತಮ್ಮ ನೆಚ್ಚಿನ ಆಟಗಾರ ಬುಮ್ರಾ ಎನ್ನುವುದನ್ನು ತಿಳಿಸಿದ್ದಾರೆ.

ಮುಂದಿನ ಐಪಿಎಲ್​ ಆಡಲಿದ್ದಾರಾ ಧೋನಿ?


ಮಹೇಂದ್ರ ಸಿಂಗ್​ ಧೋನಿ(MS Dhoni) ಅವರು ಕಳೆದ ವರ್ಷವೇ ಐಪಿಎಲ್​ಗೆ ವಿದಾಯ ಹೇಳಲು ನಿರ್ಧರಿಸಿದ್ದರು. ಆದರೆ ಅಭಿಮಾನಿಗಳ ಒತ್ತಾಯದ ಮೇರೆಗೆ ತಮ್ಮ ನಿವೃತ್ತಿಯನ್ನು ಒಂದು ವರ್ಷದ ಮಟ್ಟಿಗೆ ಮುಂದೆ ಹಾಕಿದ್ದರು. ಈ ಬಾರಿಯ ಟೂರ್ನಿ ಅವರಿಗೆ ವಿದಾಯದ ಟೂರ್ನಿ ಎಂದೇ ಹೇಳಲಾಗಿತ್ತು. ಆದ್ಯಾಗೂ ಧೋನಿ ತಮ್ಮ ನಿವೃತ್ತಿ ಬಗ್ಗೆ ಯಾವುದೇ ಅಂತಿಮ ನಿರ್ಧಾರ ಪ್ರಕಟಿಸಿಲ್ಲ. ಇದೀಗ ಅವರು ಮುಂದಿನ ಐಪಿಎಲ್ ಆಡುತ್ತಾರಾ ಎನ್ನುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಾರೀ ಚರ್ಚೆಯಾಗುತ್ತಿದೆ.

ಇದನ್ನೂ ಓದಿ MS Dhoni : ಧೋನಿಯನ್ನು ತಂಡದಲ್ಲಿ ಉಳಿಸಿಕೊಳ್ಳಲು ನಿಯಮವನ್ನೇ ಬದಲಾಯಿಸಲು ಕೋರಿದ ಚೆನ್ನೈ ಸೂಪರ್ ಕಿಂಗ್ಸ್​

​ಕೆಲ ಮೂಲಗಳ ಪ್ರಕಾರ ಡಿಸೆಂಬರ್​ನಲ್ಲಿ ನಡೆಯುವ ಆಟಗಾರರ ಮೆಗಾ ಹರಾಜಿಗೆ ಬಿಸಿಸಿಐ(BCCI) ಈ ನಿಯಯ ಜಾರಿಗೆ ತಂದರೆ ಧೋನಿ ಅವರು 18ನೇ ಆವೃತ್ತಿ ಐಪಿಎಲ್(IPL 2025)​ ಆಡುವುದು ಅನುಮಾನ ಎನ್ನಲಾಗಿದೆ. ಬಿಸಿಸಿಐ ಐಪಿಎಲ್ ಫ್ರಾಂಚೈಸಿಗಳಿಗೆ ಗರಿಷ್ಠ 4 ಆಟಗಾರರನ್ನು ಉಳಿಸಿಕೊಳ್ಳುವ ಅವಕಾಶ ಮಾತ್ರ ನೀಡಿದ್ದಲ್ಲಿ ಧೋನಿಗೆ ಚೆನ್ನೈ(CSK) ತಂಡದಲ್ಲಿ ಅವಕಾಶ ಸಿಗುವುದು ಅನುಮಾನ ಎನ್ನಲಾಗಿದೆ. ಸಿಎಸ್‌ಕೆ ನಾಯಕ ಋತುರಾಜ್ ಗಾಯಕ್ವಾಡ್, ರವೀಂದ್ರ ಜಡೇಜಾ, ಶ್ರೀಲಂಕಾದ ವೇಗಿ ಮತಿಶಾ ಪತಿರಾಣ ಮತ್ತು ಶಿವಂ ದುಬೆ ಅವರನ್ನು ಉಳಿಸಿಕೊಳ್ಳುವ ಯೋಚನೆಯಲ್ಲಿದೆ ಎನ್ನಲಾಗಿದೆ. ಒಂದೊಮ್ಮೆ 4ಕ್ಕಿಂತ ಅಧಿಕ ಆಟಗಾರರನ್ನು ತಂಡದಲ್ಲಿ ಉಳಿಸಿಕೊಳ್ಳುವ ಅವಕಾಶ ನೀಡಿದರೆ ಧೋನಿ ಚೆನ್ನೈ ತಂಡದ ಪರ ಇನ್ನೊಂದು ಐಪಿಎಲ್​ ಆಡಲಿದ್ದಾರೆ ಎಂದು ಫ್ರಾಂಚೈಸಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾಗಿ ಕ್ರಿಕ್‌ಬಜ್‌ ವರದಿ ಮಾಡಿದೆ.

Exit mobile version