ರಾಂಚಿ: ಟೀಮ್ ಇಂಡಿಯಾದ ಮಾಜಿ ವಿಶ್ವಕಪ್ ವಿಜೇತ ನಾಯಕ ಮಹೇಂದ್ರ ಸಿಂಗ್ ಧೋನಿ(MS Dhoni) ಅವರು ತಮ್ಮ ಪುತ್ರಿ ಜೀವಾಳ(MS Dhoni’s Daughter) ಶಾಲಾ ಶುಲ್ಕದ ವಿವಾರದಲ್ಲಿ ಸುದ್ದಿಯಾಗಿದ್ದಾರೆ. 8 ವರ್ಷದ ಜೀವಾ(Ziva) ರಾಂಚಿಯ ಟೌರಿಯನ್ ವರ್ಲ್ಡ್ ಸ್ಕೂಲ್‌ನಲ್ಲಿ(Ziva studies in Taurian World School) ಮೂರನೇ ತರಗತಿಯಲ್ಲಿ ಓದುತ್ತಿದ್ದಾಳೆ. ಜೀವಾ ಶಾಲಾ ಶುಲ್ಕ(Ziva school fees) ವರ್ಷಕ್ಕೆ 2.95 ಲಕ್ಷ ರೂ. ಎಂದು ತಿಳಿದುಬಂದಿದೆ. ಅಂದರೆ ತಿಂಗಳಿಗೆ 25 ಸಾವಿರ ರೂ. ಆಗಿದೆ.
ರಾಂಚಿಯ TWS ಇಂಟರ್ನ್ಯಾಶನಲ್ ಸ್ಕೂಲ್‌ನಲ್ಲಿ ಧೋನಿ ಪುತ್ರಿ ಜೀವಾ ಓದುತ್ತಿದ್ದು, ಇದು ನಗರದ ದೊಡ್ಡ ಶಾಲೆಗಳಲ್ಲಿ ಒಂದಾಗಿದೆ. CBSE ಬೋರ್ಡ್ ಸ್ಕೂಲ್ ಇದಾಗಿದೆ. ಇದನ್ನು 2008ರಲ್ಲಿ ರಾಂಚಿಯಲ್ಲಿ ಸ್ಥಾಪಿಸಲಾಯಿತು. ಈ ಶಾಲೆಯು ಎಲ್ಲ ರೀತಿಯ ವಿಶ್ವ ದರ್ಜೆಯ ಸೌಲಭ್ಯಗಳನ್ನು ಹೊಂದಿದೆ. ಜೀವಾ ಡೇ ಸ್ಕಾಲರ್ ವಿದ್ಯಾರ್ಥಿನಿಯಾಗಿದ್ದಾಳೆ.
ಇದನ್ನೂ ಓದಿ MS Dhoni: ಐಪಿಎಸ್ ಅಧಿಕಾರಿ ವಿರುದ್ಧ ಧೋನಿ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ಮುಂದೂಡಿಕೆ
ಜೀವಾ ಫೆಬ್ರವರಿ 2, 2015 ರಂದು ದೆಹಲಿಯಲ್ಲಿ ಜನಿಸಿದರು. ಧೋನಿ ಅವರ ಪತ್ನಿ ಸಾಕ್ಷಿ ಆಗಾಗ ಜೀವಾ ಫೋಟೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡುತ್ತಲೇ ಇರುತ್ತಾರೆ. ಐಪಿಎಲ್ನ ಪ್ರತಿ ಪಂದ್ಯದಲ್ಲಿಯೂ ತಂದೆಗೆ ವಿಶೇಷ ರೀತಿಯಲ್ಲಿ ಬೆಂಬಲ ಸೂಚಿಸುವ ಮೂಲಕವೂ ಜೀವಾ ಸುದ್ದಿಯಾಗುತ್ತಲೇ ಇರುತ್ತಾಳೆ. ತಂದೆಯಂತೆ ಜೀವಾ ಕೂಡ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸುಮಾರು 2.3 ಮಿಲಿಯನ್ ಪಾಲೋವರ್ಸ್ ಹೊಂದಿದ್ದಾಳೆ. ಜೀವಾ ತನ್ನ ಹೆತ್ತವರು ಮತ್ತು ಅಜ್ಜಿಯೊಂದಿಗೆ ರಾಂಚಿಯಲ್ಲಿ ವಾಸಿಸುತ್ತಿದ್ದಾಳೆ. ಇತ್ತೀಚೆಗೆ ತಂದೆ ಧೋನಿ ಜತೆ ವಿಂಟೆಜ್ ಕಾರಿನಲ್ಲಿ ಪ್ರಯಾಣಿಸಿದ ವಿಡಿಯೊ ವೈರಲ್ ಆಗಿತ್ತು.
ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿರುವ ಧೋನಿ ಕೇವಲ ಐಪಿಎಲ್ ಟೂರ್ನಿಯಲ್ಲಿ ಮಾತ್ರ ಆಡುತ್ತಿದ್ದಾರೆ. (Indian Premier League) 2023ನೇ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 5ನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಈ ಬಾರಿ ಐಪಿಎಲ್ ಬಳಿಕ ಧೋನಿ ನಿವೃತ್ತಿ ಹೇಳಲು ನಿರ್ಧರಿಸಿದ್ದರು. ಆದರೆ ಅಭಿಮಾನಿಗಳ ಆಸೆಯಂತೆ ಇನ್ನೊಂದು ಆವೃತ್ತಿಯ ಐಪಿಎಲ್ ಆಡುವುದಾಗಿ ಫೈನಲ್ ಬಳಿಕ ಧೋನಿ ಹೇಳಿದ್ದರು. ಹೀಗಾಗಿ ಅವರ ಆಟವನ್ನು ಮುಂದಿನ ಆವೃತ್ತಿಯಲ್ಲಿಯೂ ಕಣ್ತುಂಬಿಕೊಳ್ಳಬಹುದಾಗಿದೆ.