ಮುಂಬಯಿ : ದೈತ್ಯ ಉದ್ಯಮ ಸಂಸ್ಥೆ ರಿಲಯನ್ಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ಅವರು ಶ್ರೀಮಂತ ಫುಟ್ಬಾಲ್ ಕ್ಲಬ್ ಲಿವರ್‌ಪೂಲ್ ಅನ್ನು ಖರೀದಿಸಲು ಮುಂದಾಗಿದ್ದಾರೆ ಎಂಬುದಾಗಿ ವರದಿಯಾಗಿದೆ. ಸದ್ಯ ಕ್ಲಬ್ ಫೆನ್‌ವೇ ಸ್ಪೋರ್ಟ್ಸ್ ಗ್ರೂಪ್ (ಎಫ್‌ಎಸ್‌ಜಿ) ಒಡೆತನದಲ್ಲಿದ್ದು ೩೨೨೦೧ ಕೋಟಿ ರೂಪಾಯಿಗೆ (೪ ಬಿಲಿಯನ್ ಡಾಲರ್ ) ಮಾರಾಟ ಮಾಡಲು ಮುಂದಾಗಿದೆ.
ಕ್ಲಬ್ ಮಾರಾಟ ಮಾಡಲು ಮುಂದಾಗಿರುವ ಹಿನ್ನೆಲೆಯಲ್ಲಿ ಮುಖೇಶ್ ಅಂಬಾನಿ ಅವರು ಖರೀದಿಗಾಗಿ ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ. ೨೦೧೦ರಲ್ಲಿ ಲಿವರ್‌ಪೂಲ್ ಕ್ಲಬ್ ತನ್ನ ತೆಕ್ಕೆಗೆ ತೆಗೆದುಕೊಂಡ ಎಫ್‌ಎಸ್‌ಜಿ ಸಂಸ್ಥೆಯು ಕಳೆದ ವಾರ ಮಾರಾಟಕ್ಕೆ ಮುಂದಾಗಿದ್ದೇವೆ ಎಂದು ಹೇಳಿಕೆ ನೀಡಿತ್ತು.
ಮುಖೇಶ್ ಅಂಬಾನಿ ಲಿವರ್‌ಪೂಲ್ ಖರೀದಿಸಲು ಆಸಕ್ತಿ ತೋರಿಸಿದ್ದು ಇದೇ ಮೊದಲಲ್ಲ. 2010 ರಲ್ಲಿ, ಸಹಾರಾ ಗ್ರೂಪ್‌ನ ಅಧ್ಯಕ್ಷ ಸುಬ್ರೊತೊ ರಾಯ್ ಜೊತೆಗೆ, ರಿಲಯನ್ಸ್ ಇಂಡಸ್ಟ್ರೀಸ್ ಲಿವರ್‌ಪೂಲ್‌ನಲ್ಲಿ 51 ಪ್ರತಿಶತ ಪಾಲನ್ನು ಬಿಡ್ ಮಾಡಲು ಬಯಸಿತು. ಆದಾಗ್ಯೂ, ವದಂತಿಗಳನ್ನು ಆಗಿನ ಲಿವರ್‌ಪೂಲ್ ಮುಖ್ಯ ಕಾರ್ಯನಿರ್ವಾಹಕ ಕ್ರಿಸ್ಟೈನ್ ಪರ್ಸ್ಲೋ ನಿರಾಕರಿಸಿದರು.
ಇದನ್ನೂ ಓದಿ | 5G Services launch | 2023ರ ಡಿಸೆಂಬರ್ ಒಳಗೆ ಪ್ರತಿ ಗ್ರಾಮಕ್ಕೂ 5G ಸೇವೆ: ಮುಖೇಶ್ ಅಂಬಾನಿ