ಮುಂಬಯಿ: ಭಾರತದ ಪ್ರತಿಷ್ಠಿತ ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥೆಯ ಮ್ಯಾನೆಜಿಂಗ್ ಡೈರೆಕ್ಟರ್ ಮುಕೇಶ್ ಅಂಬಾನಿ(Mukesh Ambani) ಅವರು ಲಂಡನ್‌ನ ಖ್ಯಾತ ಫುಟ್ಬಾಲ್ ಕ್ಲಬ್ ಆಗಿರುವ ಅರ್ಸೆನಲ್ ಫುಟ್ಬಾಲ್ ಕ್ಲಬ್ ಖರೀದಿಸಲು ಒಲವು ತೋರಿದ್ದಾರೆ ಎಂದು ವರದಿಯಾಗಿದೆ.
ಈಗಾಗಲೇ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಮಾಲಿಕತ್ವ ಹೊಂದಿರುವ ಅಂಬಾನಿ ಕುಟುಂಬ ಇದೀಗ ಇಂಗ್ಲೆಂಡ್‌ನ ಪ್ರತಿಷ್ಠಿತ ಫುಟ್ಬಾಲ್ ಕ್ಲಬ್ ಮಾಲಿಕರೆನಿಸಿಕೊಳ್ಳಲು ತುದಿಗಾಲಿನಲ್ಲಿ ನಿಂತಿದೆ ಎನ್ನಲಾಗುತ್ತಿದೆ. ಈ ಮೊದಲು ಮುಕೇಶ್ ಅಂಬಾನಿ, ಮ್ಯಾಂಚೆಸ್ಟರ್ ಯುನೈಟೆಡ್ ಹಾಗೂ ಲಿವರ್‌ಪೂಲ್ ತಂಡವನ್ನು ಖರೀದಿಸುತ್ತಾರೆ ಎಂದು ವರದಿಯಾಗಿತ್ತು. ಆದರೆ ಇದೀಗ ರೊನಾಲ್ಡೊ ತಂಡವನ್ನು ತ್ಯಜಿಸಿದ ಬಳಿಕ ಅಂಬಾನಿ, ಅರ್ಸೆನಲ್ ಫುಟ್ಬಾಲ್ ಕ್ಲಬ್ ಮೇಲೆ ಕಣ್ಣಿಟಿದ್ದಾರೆ ಎಂದು ತಿಳಿದು ಬಂದಿದೆ.
ಅರ್ಸೆನಲ್ ತಂಡದ ಅಭಿಮಾನಿ
ಮುಕೇಶ್ ಅಂಬಾನಿಯವರ ಪುತ್ರ ಆಕಾಶ್ ಅಂಬಾನಿ ಅವರು ಅರ್ಸೆನಲ್ ತಂಡದ ಅಪ್ಟಟ ಅಭಿಮಾನಿಯಾಗಿದ್ದಾರೆ. ಜತೆಗೆ ಜಾಗತಿಕ ಮಟ್ಟದಲ್ಲಿ ಫುಟ್ಬಾಲ್‌ಗೆ ಕಾಲಿಡುವುದಾದರೇ ಅರ್ಸೆನಲ್ ತಂಡ ಮೂಲಕ ವಾಣಿಜ್ಯ ವ್ಯವಹಾರಗಳನ್ನು ವಿಸ್ತರಿಸುವ ಒಲವನ್ನು ಅಂಬಾನಿ ಕುಟುಂಬ ಹೊಂದಿದೆ. ಇದೇ ಕಾರಣದಿಂದ ಈ ಕ್ಲಬ್ ಖರೀದಿಸಲು ಅಪ್ಪ ಮತ್ತು ಮಗ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ. ಒಂದೊಮ್ಮೆ ಈ ಒಪ್ಪಂದ ಕುದುರಿದರೆ ಜಗತ್ತಿನ ಪ್ರಮುಖ ಫಟ್ಬಾಲ್ ಕ್ಲಬ್‌ವೊಂದು ಭಾರತೀಯನ ತೆಕ್ಕೆಗೆ ಬರಲಿದೆ.
ಇದನ್ನೂ ಓದಿ | INDvsBAN | ವಿರಾಟ್ ಕೊಹ್ಲಿಯ ಪ್ರದರ್ಶನ ಪ್ರಶ್ನಾತೀತ; ಅನುಮಾನವೇ ಬೇಡ ಎಂದ ಕೆ. ಎಲ್ ರಾಹುಲ್