Site icon Vistara News

WPL 2023 : ಉದ್ಘಾಟನಾ ಆವೃತ್ತಿಯ ಮಹಿಳೆಯರ ಪ್ರೀಮಿಯರ್​​ ಲೀಗ್​ಗೆ ಜೆರ್ಸಿ ಅನಾವರಣ ಮಾಡಿದ ಮುಂಬಯಿ ಇಂಡಿಯನ್ಸ್​

Mumbai Indians unveil jersey for inaugural Women's Premier League

#image_title

ಮುಂಬಯಿ: ಉದ್ಘಾಟನಾ ಆವೃತ್ತಿಯ ಮಹಿಳೆಯ ಪ್ರೀಮಿಯರ್ ಲೀಗ್​ಗೆ (WPL 2023) ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಈ ಹಿನ್ನೆಲೆಯಲ್ಲಿ ಫ್ರಾಂಚೈಸಿಗಳೆಲ್ಲವೂ ಜೋರು ಸಿದ್ಧತೆಗಳನ್ನು ನಡೆಸುಕೊಂಡಿವೆ. ಏತನ್ಮಧ್ಯೆ, ರಿಲಯನ್ಸ್ ಒಡೆತನದ ಮುಂಬಯಿ ಇಂಡಿಯನ್ಸ್​ ಸೂಪರ್​ ಲೀಗ್​ಗೆ ತನ್ನ ಜರ್ಸಿಯನ್ನು ಶನಿವಾರ (ಫೆಬ್ರವರಿ 25ರಂದು) ಅನಾವರಣಗೊಳಿಸಿದೆ. ಪುರುಷರ ತಂಡದ ಜರ್ಸಿಯ ನೀಲಿ ಬಣ್ಣವನ್ನೇ ಇದು ಕೂಡು ಹೊಂದಿದೆ.

ಮಾರ್ಚ್​ 4ರಂದು ಡಬ್ಲ್ಯುಪಿಎಲ್​ನ ಮೊದಲ ಪಂಧ್ಯ ನಡೆಯಲಿದೆ. ಗುಜರಾತ್​ ಜಯಂಟ್ಸ್​ ಹಾಗೂ ಮುಂಬಯಿ ಇಂಡಿಯನ್ಸ್​ ತಂಡದ ನಡುವೆ ಪಂದ್ಯ ನಡೆಯಲಿದೆ. ಮುಖ್ಯ ಕೋಚ್ ಶಾರ್ಲೆಟ್​ ಎಡ್ವರ್ಡ್​ ತರಬೇತಿಯಲ್ಲಿ ಮುಂಬಯಿ ಇಂಡಿಯನ್ಸ್​ ತಂಡದ ಆಟಗಾರರು ಅಭ್ಯಾಸ ಆರಂಭಿಸಿದ್ದಾರೆ. ದೇವಿಕಾ ಪಲ್ಸಿಕರ್ ಜತೆ ಸೇರಿಕೊಂಡು ಲಭ್ಯ ಇರುವ ಆಟಗಾರ್ತಿಯರೊಂದಿಗೆ ಟೂರ್ನಿಗಾಗಿ ಸಿದ್ಧತೆ ನಡೆಸಿಕೊಳ್ಳುತ್ತಿದ್ದಾರೆ.

ಮುಂಬಯಿ ಇಂಡಿಯನ್ಸ್​ ತಂಡದ ಟ್ವೀಟ್​ ಇಲ್ಲಿದೆ

ಇಲ್ಲೊಂದು ಸುದ್ದಿಯಿದೆ. ಬ್ಲ್ಯೂ ಮತ್ತು ಗೋಲ್ಡ್​ ಮುಂಬಯಿ. ಇಲ್ಲಿದೆ ಉದ್ಘಾಟನಾ ಆವೃತ್ತಿಯ ಡಬ್ಲ್ಯುಪಿಎಲ್​ನ ಜರ್ಸಿ ಎಂದು ಮುಂಬಯಿ ಇಂಡಿಯನ್ಸ್​ ತಂಡ ಪ್ರಕಟಿಸಿದೆ.

ಇದನ್ನೂ ಓದಿ : WPL 2023 Schedule: ಡಬ್ಲ್ಯುಪಿಎಲ್‌ ಟೂರ್ನಿಯ ವೇಳಾಪಟ್ಟಿ ಪ್ರಕಟ; ಆರ್​ಸಿಬಿಗೆ ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎದುರಾಳಿ

ಉದ್ಘಾಟನಾ ಆವೃತ್ತಿಯ ಡಬ್ಲ್ಯುಪಿಎಲ್​ ಟೂರ್ನಿಗೆ ಟಾಟಾ ಕಂಪನಿಯು ಪ್ರಾಯೋಜಕತ್ವ ನೀಡಿದೆ. ಡ್ರೀಮ್​ ಇಲೆವೆನ್​ ಹಾಗೂ ಸಿಯೆಟ್​ ಕಂಪನಿಯ ಜತೆಯೂ ಬಿಸಿಸಿಐ ಒಪ್ಪಂದ ಮಾಡಿಕೊಂಡಿದೆ.

Exit mobile version