ನವದೆಹಲಿ: ಭಾರತದ ಯುವ ಲಾಂಗ್ ಜಂಪರ್ ಮುರಳಿ ಶ್ರೀಶಂಕರ್(Murali Sreeshankar) ವಿಶ್ವ ಚಾಂಪಿಯನ್‍ಶಿಪ್‍ಗೆ(World Championships) ಅರ್ಹತೆ ಪಡೆದಿದ್ದಾರೆ. ಭುನೇಶ್ವರದಲ್ಲಿ ನಡೆದ ಅಂತಾರಾಜ್ಯ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್‍ನ ಲಾಂಗ್ ಜಂಪ್‍ನಲ್ಲಿ(long jump) ತಮ್ಮ ಮೊದಲ ಪ್ರಯತ್ನದಲ್ಲಿ 8.41 ಮೀ.ಜಿಗಿದು ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.
ಕೇರಳವನ್ನು ಪ್ರತಿನಿಸುತ್ತಿದ್ದ 24 ವರ್ಷದ ಶ್ರೀಶಂಕರ್ ಈ ವರ್ಷದ ಆರಂಭದಲ್ಲಿ ಜೆಸ್ವಿನ್ ಆಲ್ಡ್ರಿನ್ ಅವರ ರಾಷ್ಟ್ರೀಯ ದಾಖಲೆಯಾದ 8.42 ಮೀ. ಗಿಂತ ಕೇವಲ 1 ಸೆಂ.ಮೀ.ಕೆಳಗೆ ಜಿಗಿಯುವ ಮೂಲಕ ವೈಯಕ್ತಿಕ ಶ್ರೇಷ್ಠ ಸಾಧನೆ ಮೂಲಕ ವಿಶ್ವ ಚಾಂಪಿಯನ್‍ಶಿಪ್‍ಗೆ ಅರ್ಹತೆ ಪಡೆದರು.
ಸಾಧನೆ ಬಳಿಕ ಮಾತನಾಡಿದ ಶ್ರೀಶಂಕರ್, ರಾಷ್ಟ್ರೀಯ ದಾಖಲೆಗಿಂತ ಸ್ವಲ್ಪ ಕಡಿಮೆ ಅಂತರದಲ್ಲಿ ನಾನು ಜಿಗಿದರೂ ಈ ಸಾಧನೆ ನನಗೆ ತೃಪ್ತಿ ನೀಡಿದೆ. ವಿಶ್ವ ಚಾಂಪಿಯನ್ಶಿಪ್ನಲ್ಲಿ ಇನ್ನಷ್ಟು ಉತ್ತಮ ಪ್ರದರ್ಶನ ತೋರುವ ವಿಶ್ವಾಸವಿದೆ” ಎಂದು ಹೇಳಿದರು. ಆಗಸ್ಟ್ನಲ್ಲಿ ಹಂಗೇರಿಯ ಬುಡಾಪೆಸ್ಟ್‌ನಲ್ಲಿ ವಿಶ್ವ ಚಾಂಪಿಯನ್‍ಶಿಪ್ ಟೂರ್ನಿ ನಡೆಯಲಿದೆ.
ಇದನ್ನೂ ಓದಿ Neeraj Chopra: ಲುಸಾನ್ ಡೈಮಂಡ್ ಲೀಗ್‌ನಲ್ಲಿ ಕಣಕ್ಕಿಳಿಯಲಿದ್ದಾರೆ ನೀರಜ್ ಚೋಪ್ರಾ
ಸ್ನಾಯು ಸೆಳೆತದಿಂದ ಚೇತರಿಕೆ ಕಂಡಿರುವ ವಿಶ್ವದ ಅಗ್ರಮಾನ್ಯ ಜಾವೆಲಿನ್ ಥ್ರೊ ಸ್ಪರ್ಧಿ ನೀರಜ್ ಚೋಪ್ರಾ(Neeraj Chopra) ಅವರು ಲುಸಾನ್‌ನಲ್ಲಿ ನಡೆಯಲಿರುವ ಡೈಮಂಡ್ ಲೀಗ್‌ನಲ್ಲಿ ಆಡುವುದು ಬಹುತೇಕ ಖಚಿತವಾಗಿದೆ. ಅವರು ಕೂಡ ವಿಶ್ವ ಚಾಂಪಿಯನ್‍ಶಿಪ್ ಟೂರ್ನಿಯ ಪ್ರಮುಖ ಹೈಲೆಟ್ ಆಗಿದ್ದಾರೆ. ಟೋಕಿಯೋ ಒಲಿಂಪಿಕ್ಸ್ ಚಾಂಪಿಯನ್ ಆಗಿರುವ ನೀರಜ್ ಅವರು ಸದ್ಯ ವಿಶ್ರಾಂತಿಯಲ್ಲಿದ್ದಾರೆ.