Site icon Vistara News

ಡೈಮಂಡ್​ ಲೀಗ್​ನಲ್ಲಿ ಪದಕ ಗೆದ್ದ ಮುರಳಿ, ಲಾಂಗ್​ ಜಂಪ್​ನಲ್ಲಿ ಭಾರತ ಪರ ನೂತನ ದಾಖಲೆ

Murali Sreeshankar

#image_title

ನವ ದೆಹಲಿ: ಭಾರತದ ಅಗ್ರಮಾನ್ಯ ಲಾಂಗ್ ಜಂಪರ್ ಮುರಳಿ ಶ್ರೀಶಂಕರ್ ಪ್ಯಾರೀಸ್​ನಲ್ಲಿ ನಡೆಯುತ್ತಿರುವ ಡೈಮಂಡ್​ ಲೀಗ್​ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ 8.09 ಮೀಟರ್ ಜಿಗಿದ ಅವರು ಮೂರನೇ ಸ್ಥಾನ ಗಿಟ್ಟಿಸಿಕೊಂಡರು. ಈ ಮೂಲಕ ಡೈಮಂಡ್​ ಲೀಗ್​ನಲ್ಲಿ ಭಾರತದ ಪರ ಪದಕದ ಗೆದ್ದ ಮೊದಲ ಲಾಂಗ್​ ಜಂಪರ್ ಎಂಬ ಖ್ಯಾತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಒಲಿಂಪಿಕ್ ಚಾಂಪಿಯನ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಮತ್ತು ಮಾಜಿ ಡಿಸ್ಕಸ್ ಎಸೆತಗಾರ ವಿಕಾಸ್ ಗೌಡ ಭಾರತ ಪರ ಡೈಮಂಡ್ ಲೀಗ್​ನಲ್ಲಿ ಪದಕ ಗೆದ್ದ ಭಾರತೀಯರಾಗಿದ್ದರು. ಇದೀಗ ಮೂರನೆಯವರಾಗಿ ಸಾಧನೆ ಮಾಡಿದ್ದಾರೆ ಮುರಳಿ ಶ್ರೀಶಂಕರ್​. ಕಾಮನ್ವೆಲ್ತ್ ಗೇಮ್ಸ್ ಕೂಟದಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಶ್ರೀಶಂಕರ್ ಶುಕ್ರವಾರ ರಾತ್ರಿ ತಮ್ಮ ಮೂರನೇ ಪ್ರಯತ್ನದಲ್ಲಿ ದಿನದ ಅತ್ಯುತ್ತಮ ಜಿಗಿತವನ್ನು ಸಾಧಿಸಿ ಪದಕ ಗೆದ್ದರು.

ಕಳೆದ ತಿಂಗಳು ಗ್ರೀಸ್​ನಲ್ಲಿ ನಡೆದ ಸ್ಪರ್ಧೆಯಲ್ಲಿ ಚಿನ್ನ ಗೆದ್ದಾಗ ಮರಳಿ ಅತ್ಯುತ್ತಮ 8.18 ಮೀಟರ್ ದೂರ ಜಿಗಿದಿದ್ದರು. ಡೈಮಂಡ್ ಲೀಗ್​ನ ಅವ 8.09 ಮೀಟರ್ ಪ್ರಯತ್ನ ಅದಕ್ಕೆ ಹತ್ತಿರವಾಗಿಲ್ಲ. ಅಂತೆಯೇ 24ರ ಹರೆಯದ ಈ ಲಾಂಗ್​ ಜಂಪರ್​ ಪ್ರತಿಭೆ ಕಳೆದ ವರ್ಷ 8.36 ಮೀಟರ್ ಜಿಗಿದು ವೈಯಕ್ತಿಕ ಶ್ರೇಷ್ಠ ಸಾಧನೆ ಮಾಡಿದ್ದರು.

ಒಲಿಂಪಿಕ್ ಚಾಂಪಿಯನ್ ಮತ್ತು ವಿಶ್ವದ ನಂ.1 ಲಾಂಗ್ ಜಂಪ್​ ಪಟು ಗ್ರೀಸ್​​ನ ಮಿಲ್ಟಿಯಾಡಿಸ್ ಟೆಂಟೊಗ್ಲೋ ಅವರು ಐದನೇ ಸುತ್ತಿನಲ್ಲಿ 8.13 ಮೀಟರ್ ಜಿಗಿತದೊಂದಿಗೆ ಅಗ್ರ ಸ್ಥಾನ ಪಡೆದರು. ವಿಶ್ವ ಚಾಂಪಿಯನ್​ಷಿಪ್​ನ ಕಂಚಿನ ಪದಕ ವಿಜೇತ ಸ್ವಿಟ್ಜರ್ಲೆಂಡ್​ನ ಸೈಮನ್ ಎಹಮ್ಮರ್ ನಾಲ್ಕನೇ ಸುತ್ತಿನಲ್ಲಿ 8.11 ಮೀಟರ್ ಜಿಗಿತದೊಂದಿಗೆ ಎರಡನೇ ಸ್ಥಾನ ಪಡೆದರು.

ಇಲ್ಲಿನ ಚಾರ್ಲೆಟಿ ಸ್ಟೇಡಿಯಂನಲ್ಲಿ ನಡೆದ ಸ್ಪರ್ಧೆಯಲ್ಲಿ ಶ್ರೀಶಂಕರ್ ಮೊದಲೆರಡು ಜಿಗಿತದಲ್ಲಿ 7.79 ಮೀ, 7.94 ಮೀ ದಾಖಲೆ ಮಾಡಿದರು. ಕ್ಯೂಬಾದ ಒಲಿಂಪಿಕ್ ಕಂಚಿನ ಪದಕ ವಿಜೇತ ಮೇಕೆಲ್ ಮಾಸೊ (7.83 ಮೀಟರ್) ಮತ್ತು ಸ್ವೀಡನ್​​ನ ವಿಶ್ವ 4ನೇ ಶ್ರೇಯಾಂಕದ ಸ್ಪರ್ಧಿ ಥೋಬಿಯಾಸ್ ಮಾಂಟ್ಲರ್ (7.82 ಮೀಟರ್) ಅವರನ್ನು ಮುರಳಿ ಹಿಂದಕ್ಕಿದರು.

ನೀರಜ್​ ಚೋಪ್ರಾ ಸಾಧನೆ

ಕಳೆದ ಸೆಪ್ಟೆಂಬರ್​​ನಲ್ಲಿ ಜ್ಯೂರಿಚ್​​ನಲ್ಲಿ ನಡೆದ ಫೈನಲ್ಸ್ ಗೆದ್ದ ನಂತರ ಒಲಿಂಪಿಕ್ ಚಾಂಪಿಯನ್ ಚೋಪ್ರಾ ಜಾವೆಲಿನ್ ಎಸೆತದಲ್ಲಿ ಹಾಲಿ ಡೈಮಂಡ್ ಲೀಗ್ ಚಾಂಪಿಯನ್ ಆಗಿದ್ದರು ಕಳೆದ ತಿಂಗಳು ದೋಹಾದಲ್ಲಿ ನಡೆದ ಋತುವಿನ ಆರಂಭಿಕ ಹಂತವನ್ನು ಗೆಲ್ಲುವ ಮೊದಲು ಅವರು ಲೌಸೆನ್​ನಲ್ಲಿ ಅಗ್ರಸ್ಥಾನದಲ್ಲಿದ್ದರು.2012ರಲ್ಲಿ ನ್ಯೂಯಾರ್ಕ್ ಹಾಗೂ 2014ರಲ್ಲಿ ದೋಹಾದಲ್ಲಿ ಎರಡನೇ ಸ್ಥಾನ ಪಡೆದಿದ್ದರೆ, 2015ರಲ್ಲಿ ಶಾಂಘೈ ಮತ್ತು ಯೂಜೀನ್ ನಲ್ಲಿ ಮೂರನೇ ಸ್ಥಾನ ಪಡೆದಿದ್ದರು.

ಇದನ್ನೂ ಓದಿ : WTC Final 2023 : ಲೆಜೆಂಡ್​ ಸಚಿನ್​ ತೆಂಡೂಲ್ಕರ್​ ದಾಖಲೆ ಮುರಿದ ರೋಹಿತ್​ ಶರ್ಮಾ

ವೈಯಕ್ತಿಕ ಡೈಮಂಡ್ ಲೀಗ್ ಸ್ಪರ್ಧೆಗಳಿಗೆ ಪದಕಗಳನ್ನು ನೀಡಲಾಗುವುದಿಲ್ಲ. ಆದಾಗ್ಯೂ ಡೈಮಂಡ್ ಲೀಗ್ ಸ್ಪರ್ಧೆಯಲ್ಲಿ ಶ್ರೀಶಂಕರ್ ಅವರ ಎರಡನೇ ಪ್ರವೇಶ ಇದಾಗಿದೆ. ಕಳೆದ ವರ್ಷ ಮೊನಾಕೊ ಚರಣದಲ್ಲಿ ಆರನೇ ಸ್ಥಾನ ಪಡೆದಿದ್ದರು. ಸೆಪ್ಟೆಂಬರ್​​ನಲ್ಲಿ ಅಮೆರಿಕದ ಯೂಜಿನ್​ನಲ್ಲಿ ನಡೆಯಲಿರುವ ಋತುವಿನ ಡೈಮಂಡ್ ಲೀಗ್​ಗೆ ಮುರಳಿ ಆರು ಅರ್ಹತಾ ಅಂಕಗಳನ್ನು ಗಿಟ್ಟಿಸಿಕೊಂಡಿದ್ದಾರೆ. .

ಈ ಗೆಲುವಿನ ಮೂಲಕ ಅವರು ಆಗಸ್ಟ್​​ನಲ್ಲಿ ಹಂಗರಿಯ ಬುಡಾಪೆಸ್ಟ್​ನಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್​​ಷಿಪ್​​ ಅರ್ಹತೆ ಪಡೆಯುವ ಪ್ರಯತ್ನದಲ್ಲಿ ಅವರು ಮೌಲ್ಯಯುತ ಶ್ರೇಯಾಂಕ ಅಂಕಗಳನ್ನು ಪಡೆಯಲಿದ್ದಾರೆ. ಕಳೆದ ಒಂದು ತಿಂಗಳಿನಿಂದ ಗ್ರೀಸ್​ನಲ್ಲಿ ತರಬೇತಿ ಪಡೆಯುತ್ತಿರುವ ಶ್ರೀಶಂಕರ್​ ವಿಶ್ವ ಚಾಂಪಿಯನ್ ಶಿಪ್ನ​ ನೇರ ಅರ್ಹತೆಯ ಮಾನದಂಡವಾದ 8.25 ಮೀ ಅನ್ನು ಇನ್ನೂ ಸಾಧಿಸಿಲ್ಲ. ಜುಲೈ 30ರ ಈ ಅರ್ಹತೆಗೆ ಗಡುವಾಗಿದೆ.

ಬುಡಾಪೆಸ್ಟ್ ಟೂರ್ನಿಯ ಶ್ರೇಯಾಂಕದಲ್ಲಿ ಅವರು 20ನೇ ಸ್ಥಾನದಲ್ಲಿರುವುದರಿಂದ ಅವರು ಇನ್ನೂ ವಿಶ್ವ ಶ್ರೇಯಾಂಕದ ಮೂಲಕ ಅರ್ಹತೆ ಪಡೆಯಬಹುದು. ವಿಶ್ವ ಅಥ್ಲೆಟಿಕ್ಸ್ ಸಿದ್ಧಪಡಿಸಿದ ಋತುವಿನ ಅಗ್ರ ಪಟ್ಟಿಯಲ್ಲಿ ಪ್ರಸ್ತುತ ಎರಡನೇ ಸ್ಥಾನದಲ್ಲಿರುವ ಜೆಸ್ವಿನ್ ಆಲ್ಡ್ರಿನ್, ಮಾರ್ಚ್​​ನಲ್ಲಿ ಬಳ್ಳಾರಿಯಲ್ಲಿ ನಡೆದ ಇಂಡಿಯನ್ ಓಪನ್ ಜಂಪ್ಸ್ ಸ್ಪರ್ಧೆಯಲ್ಲಿ 8.42 ಮೀಟರ್ ರಾಷ್ಟ್ರೀಯ ದಾಖಲೆ ಮುರಿಯುವ ಪ್ರಯತ್ನದೊಂದಿಗೆ ಈಗಾಗಲೇ ವಿಶ್ವ ಚಾಂಪಿಯಶಿಪ್​ಗೆ ಅರ್ಹತೆ ಪಡೆದಿದ್ದಾರೆ. ಜೂನ್ 15 ರಿಂದ 19ರವರೆಗೆ ಭುವನೇಶ್ವರದಲ್ಲಿ ನಡೆಯಲಿರುವ ರಾಷ್ಟ್ರೀಯ ಅಂತಾರಾಜ್ಯ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಶ್ರೀಶಂಕರ್ ಸ್ಪರ್ಧಿಸಲಿದ್ದಾರೆ.

Exit mobile version