Site icon Vistara News

jasprit Bumrah | ನನ್ನಮ್ಮನಿಗೆ ನಾನು ಇಂಗ್ಲಿಷ್‌ ಕಲಿಯಬೇಕಿತ್ತು, ಕ್ರಿಕೆಟ್‌ ಆಡುವುದು ಇಷ್ಟವಿರಲಿಲ್ಲ

ಬೆಂಗಳೂರು : ಟೀಮ್‌ ಇಂಡಿಯಾದ ವೇಗದ ಬೌಲರ್‌ ಜಸ್‌ಪ್ರಿತ್‌ ಬುಮ್ರಾ ಅವರು ೨೦೧೬ರಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ಅಲ್ಲಿಂದ ಅವರ ವಾಪಸ್‌ ತಿರುಗಿ ನೋಡೇ ಇಲ್ಲ. ಸಾಧನೆಗಳ ಮೆಟ್ಟಿಲನ್ನು ಏರುತ್ತಲೇ ಸಾಗಿದ್ದಾರೆ. ಈಗ ಅವರು ಟೀಮ್‌ ಇಂಡಿಯಾದ ಪ್ರಮುಖ ಬೌಲರ್‌. ಜತೆಗೆ ತಂಡದ ಹಂಗಾಮಿ ನಾಯಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಇಷ್ಟೆಲ್ಲ ಪ್ರಖ್ಯಾತಿ ಪಡೆದಿರುವ ಜಸ್‌ಪ್ರಿತ್‌ ಬುಮ್ರಾ ಕ್ರಿಕೆಟ್‌ ಆಡುವುದು ಅವರ ಅಮ್ಮನಿಗೆ ಇಷ್ಟವಿರಲಿಲ್ಲವಂತೆ. ಹೀಗಾಗಿ ಕ್ರಿಕೆಟ್‌ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ತ್ರಾಸವಾಗಿತ್ತು ಎಂದು ಹೇಳಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಅವರು “ನನಗೆ ಕ್ರಿಕೆಟಿಗನಾಗಬೇಕೆಂಬ ಅದಮ್ಯ ಗುರಿಯಿತ್ತು. ಆದರೆ, ನನ್ನ ಕುಟುಂಬ ಅದಕ್ಕೆ ಒಪ್ಪಿರಲಿಲ್ಲ. ನನ್ನ ಕುಟುಂಬದವರು ಶೈಕ್ಷಣಿಕವಾಗಿ ಗಟ್ಟಿ ಹಿನ್ನೆಲೆ ಹೊಂದಿದವರಾಗಿದ್ದರು. ಹೀಗಾಗಿ ಕ್ರಿಕೆಟ್‌ ಹಾದಿಯನ್ನು ತುಳಿಯುವ ಮೊದಲು ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದ್ದೆ, ಆದರೆ ಕ್ರಿಕೆಟ್‌ ನನಗೆ ಜೀವಾಳವಾಗಿತ್ತು,” ಎಂಬುದಾಗಿ ಹೇಳಿದ್ದಾರೆ.

ಬುಮ್ರಾ ಅವರ ತಾಯಿ ಶಾಲೆಯೊಂದರ ಪ್ರಾಂಶುಪಾಲರಾಗಿದ್ದರು. ಅಲ್ಲದೆ ಬುಮ್ರಾ ಸಣ್ಣವರಿದ್ದಾಗಲೇ ಅವರ ತಂದೆ ಮೃತಪಟ್ಟಿದ್ದರು. ಹೀಗಾಗಿ ಅವರ ತಾಯಿಗೆ ಮಕ್ಕಳನ್ನು ಸಾಕುವ ಹೊಣೆಗಾರಿಕೆಯೂ ಇತ್ತು. ಹೀಗಾಗಿ ಜಸ್‌ಪ್ರಿತ್‌ ಬುಮ್ರಾ ಅವರಿಗೆ ಇಂಗ್ಲಿಷ್‌ ಕಲಿಸಿ, ಉತ್ತಮ ಉದ್ಯೋಗ ಕೊಡಿಸುವ ಉದ್ದೇಶ ತಾಯಿಗಿತ್ತು. ಆದರೆ, ಬುಮ್ರಾ ಕ್ರಿಕೆಟ್ ಹಾದಿಯನ್ನು ಹಿಡಿದಿದ್ದರು. ಅದನ್ನವರು ತಿರಸ್ಕರಿಸಿದ್ದರು,” ಎಂದು ಹೇಳಿದ್ದಾರೆ.

“ನನಗೆ ಜೀವನ ಭದ್ರತೆ ನೀಡುವ ಉದ್ಯೋಗ ಕೊಡಿಸುವದೇ ತಾಯಿಯ ಉದ್ದೇಶವಾಗಿತ್ತು. ಅದಕ್ಕಾಗಿ ಡಾಕ್ಟರ್ ಅಥವಾ ಎಂಜಿನಿಯರ್‌ ಆಗು ಎಂದು ಹೇಳುತ್ತಿದ್ದರು. ಸದಾ ಕ್ರಿಕೆಟ್‌ ಆಡುತ್ತಿದ್ದ ನನ್ನ ಆಯ್ಕೆಯನ್ನು ಅವರಿಗೆ ಅರಗಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ,” ಎಂಬುದಾಗಿ ಬುಮ್ರಾ ಹೇಳಿದ್ದಾರೆ.

ಇದನ್ನೂ ಓದಿ | Jasprit Bumrah | ಮೂಳೆ ಮುರಿತ, ಟಿ-20 ವಿಶ್ವಕಪ್‌ನಿಂದಲೇ ಜಸ್‌ಪ್ರಿತ್‌ ಬುಮ್ರಾ ಔಟ್‌

Exit mobile version